ಜೀಬ್ರಾ ಆಗಿ ಕಾಣಿಸಿಕೊಂಡ ನಟಿ ಉರ್ಫಿ, ಇನ್ನೇನು ಉಳಿದಿದೆ ಬಾಕಿ!

By Suvarna News  |  First Published Jan 20, 2023, 8:52 PM IST

ನಟಿ ಉರ್ಫಿ ಜಾವೇದ್ ಚಿತ್ರ ವಿಚಿತ್ರ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಹಲವರ ನಿದ್ದೆಗೆಡಿಸುತ್ತಿದ್ದಾರೆ. ಒಂದೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಕಣ್ಣು ತಂಪು ಮಾಡಿಕೊಂಡವರು ಇದ್ದಾರೆ. ಇದೀಗ ವಿವಾದಗಳ ನಡವೆ ಇದೀಗ ಉರ್ಫಿ ಜೀಬ್ರಾ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.


ಮುಂಬೈ(ಜ.20): ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿ ದಿನ ಒಂದಲ್ಲ ಒಂದು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿಯ ಮೈಮಾಟಕ್ಕೆ ಅಪಾರ ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ. ಇತ್ತ ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಹಲವರು ಉರ್ಫಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆದರೆ ಇದ್ಯಾವುದರ ಕುರಿತು ತಲೆಕೆಡಿಸಿಕೊಳ್ಳದ ಉರ್ಫಿ ಜಾವೇದ್,  ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇದೀಗ ಉರ್ಫಿ ಜೀಬ್ರಾ ರೀತಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಕೆಲ ಫ್ಯಾಶನ್‌ಗೆ ಹೋಲಿಸಿದರೆ ಈ ಬಾರಿ ಉರ್ಫಿ ಡ್ರೆಸ್‌ನಲ್ಲಿ ಒಂದೆರೆಡು ಮೀಟರ್ ಬಟ್ಟೆ ಜಾಸ್ತಿ ಇದೆ. ಹಾಗಂತ ಉರ್ಫಿ ಕಾದು ಕುಳಿತವರಿಗೆ ನಿರಾಸೆ ಮಾಡಿಲ್ಲ. ಒಂದಷ್ಟು ಜಾಗ ಖಾಲಿ ಬಿಟ್ಟಿದ್ದಾರೆ.

ನೀಲಿ ಬಣ್ಣದ ಕಾರಿನಲ್ಲಿ ಬಂದಿಳಿದ ಉರ್ಫಿ ಜಾವೇದ್ ಫೋಟೋಗ್ರಾಫರ್‌ಗಳಿಗೆ ಒಂದಷ್ಟು ಪೋಸ್ ನೀಡಿದ್ದಾರೆ. ಆದರೆ ಉರ್ಫಿ ಜಾವೇದ್ ಕಾರಿನಿಂದ ಇಳಿಯುತ್ತಿದ್ದಂತೆ ಜೀಬ್ರಾ ರೀತಿ ಕಂಡಿದ್ದಾರೆ. ಬಳಿಕ ಫೋಟೋಗ್ರಾಫರ್ ಹತ್ತಿರ ಹೋಗಿ ನಗು ನಗುತ್ತಲೇ ಫೋಸ್ ನೀಡಿದ್ದಾರೆ. ಇತ್ತ ಉರ್ಫಿ ಜಾವೇದ್ ಫೋಟೋ ಕ್ಲಿಕ್ಕಿಸಲು ಪೈಪೋಟಿ ನಡೆದಿತ್ತು.

Tap to resize

Latest Videos

 

 

ಉರ್ಫಿಯ ಹೊಸ ಅವತಾರ ಹಲವರನ್ನು ಖುಷಿಪಡಿಸಿದರೆ. ಮತ್ತೆ ಕೆಲವರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉರ್ಫಿ ಫ್ಯಾಶನ್ ವಿಕೋಪಕ್ಕೆ ತಲುಪಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.  ಇನ್ನೇನು ಉಳಿದಿಲ್ಲ ಬಾಕಿ ಎಂದು ಕಮೆಂಟ್ ಮಾಡಿದ್ದಾರೆ. ಉರ್ಫಿ ಅವತಾರ ನೋಡಿ ಹಲವರು ಹುಬ್ಬೇರಿಸಿದ್ದಾರೆ. 

ತುಂಡುಡುಗೆ ಸಹವಾಸ ಉರ್ಫಿಗೆ ಸಂಕಟ, ರಕ್ಷಣೆ ನೀಡುವಂತೆ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ

ಇತ್ತೀಚೆಗೆ ಉರ್ಫಿ ಜಾವೇದ್ ಮಹಾರಾಷ್ಟ್ರ ಮಹಿಳಾ ಆಯೋಗದ ಮೊರೆ ಹೋಗಿದ್ದರು. ತಮ್ಮ ವಿರುದ್ಧ ಬಿಜೆಪಿ ನಾಯಕಿ ಚಿತ್ರಾ ವಾಘ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ನೀಡಲು ಮನವಿ ಮಾಡಿದ್ದರು. ಮಹಾರಾಷ್ಟ್ರ ಮಹಿಳಾ ಆಯೋಗ ಉರ್ಫಿ ಜಾವೇದ್ ಮನವಿಗೆ ಸ್ಪಂದಿಸಿತ್ತು. ಉರ್ಫಿ ಮನವಿ ಸ್ವೀಕರಿಸಿ ಪರಿಶೀಲನೆ ನಡೆಸಿದ ಆಯೋಗ, ಮುಂಬೈ ಪೊಲೀಸರಿಗೆ ನೋಟೀಸ್ ನೀಡಿದೆ. ಉರ್ಫಿ ಜಾವೇದ್‌ಗೆ ಬೆದರಿಕೆ ಇರುವ ಕಾರಣ ರಕ್ಷಣೆ ನೀಡುವಂತೆ ಸೂಚನೆ ನೀಡಿದೆ. 53(A)(B), 504, 506, 506(ii) ಐಪಿಸಿ ಸೆಕ್ಷನ್ ಅಡಿಯಲ್ಲಿ ಉರ್ಫಿ ಜಾವೇದ್ ದೂರು ದಾಖಲಿಸಿದ್ದರು. ಸಾರ್ವಜನಿಕ ಪ್ರದೇಶ ಸೇರಿದಂತೆ ಉರ್ಫಿ ಜಾವೇದ್‌ಗೆ ಬೆದರಿಕೆ ಇದೆ. ಹೀಗಾಗಿ ತಕ್ಷಣವೇ ರಕ್ಷಣೆ ನೀಡಬೇಕು. ಇಷ್ಟೇ ಅಲ್ಲ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಚೈತ್ರಾ ವಾಘ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಉರ್ಫಿ ಪರ ವಕೀಲರು ದೂರಿನಲ್ಲಿಉಲ್ಲೇಖಿಸಿದ್ದರು.

ಇತ್ತ ಬಿಜೆಪಿ ನಾಯಕಿ ಚೈತ್ರಾ ವಾಘ್ ಕೂಡ ಉರ್ಫಿ ಜಾವೇದ್ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.  ಉರ್ಫಿ ಜಾವೇದ್ ನಗ್ನತೆ ಪ್ರದರ್ಶಿಸುತ್ತಿದ್ದಾರೆ. ನಗ್ನತೆ ಪ್ರದರ್ಶಿಸುತ್ತಾ ಮುಂಬೈ ರಸ್ತೆಯಲ್ಲಿ ಉರ್ಫಿ ಜಾವೇದ್ ಸಾಗುತ್ತಿದ್ದಾರೆ. ಮಹಿಳಾ ಕಮಿಷನ್ ಯಾಕೆ ಗಮನ ನೀಡುತ್ತಿಲ್ಲ ಎಂದು ಚೈತ್ರಾ ವಾಘ್ ಪ್ರಶ್ನಿಸಿದ್ದರು.

click me!