ಕಂಗನಾ ರಣಾವತ್ ಇಂಗ್ಲಿಷ್ ಬಗ್ಗೆ ನಟಿ ಸೋನಮ್ ಕಪೂರ್ ಕಾಮೆಂಟ್ ಮಾಡಿದ್ದರು. ಹಳೆಯ ವಿಡಿಯೋವನ್ನು ಕಂಗನಾ ಶೇರ್ ಮಾಡಿ ಕಿಡಿಕಾರಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲೊಂದು ವಿಚಾರಕ್ಕೆ ಕಂಗನಾ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಕಾರಣ ಜೋಹರ್ ವಿರುದ್ಧ ಕಂಗನಾ ಹರಿಹಾಯ್ದಿದ್ದಾರೆ. ಕರಣ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ ಟಾಕ್ ಶೋ ಅನ್ನು ಕೆಣಕಿದ್ದಾರೆ. ಮತ್ತೆ ಸ್ವಜನ ಪಕ್ಷಪಾತದ ಬಗ್ಗೆ ಗುಡುಗಿದ್ದಾರೆ. ಕಫಿ ವಿತ್ ಕರಣ್ ಶೋನಲ್ಲಿ ಸೋನಂ ಕಪೂರ್ ಭಾಗಿಯಾಗಿದ್ದ ವಿಡಿಯವನ್ನು ಕಂಗನಾ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಸೋನಮ್ ಕಪೂರ್ ಅವರಿಗೆ ಕರಣ್ ಜೋಹರ್ ಯಾರು ಇಂಗ್ಲಿಷ್ ಸರಿಯಾಗಿ ಮಾತನಾಡಲು ಕಲಿಯುವ ಅವಶ್ಯಕತೆ ಎಂದು ಪ್ರಶ್ನಿಸಿದ್ದಾರೆ. ಕರಣ್ ಪ್ರಶ್ನೆಗೆ ಸೋನಮ್ ಕಪೂರ್, ಕಂಗನಾ ರಣಾವತ್ ಹೆಸರು ಹೇಳಿದ್ದಾರೆ.
ಕಂಗನಾ ಹಳೆಯ ವಿಡಿಯೋದಲ್ಲಿ ಸೋನಮ್ ಕಪೂರ್ ಇಂಗ್ಲಿಷ್ ಬಗ್ಗೆ ಮಾತನಾಡಿದ್ದು ಮತ್ತು ಕಂಗನಾ ಫ್ಯಾಷನ್ ಸೆನ್ಸ್ ಹೊಗಳಿದ್ದರು. ಆ ವಿಡಿಯೋವನ್ನು ಶೇರ್ ಮಾಡಿರುವ ಕಂಗನಾ, 'ಫಿಲ್ಮ್ ಮಾಫಿಯಾ ಜೊತೆಗಿನ ವರ್ಷಗಳ ಹೋರಾಟದಿಂದ ನಾನು ಕಲಿತದ್ದು, ಹೊರಗಿನವರು ಇಂಗ್ಲಿಷ್ ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ಎಂದಿಗೂ ಅಪಹಾಸ್ಯಕ್ಕೊಳಗಾಗುವುದಿಲ್ಲ. ಇದೀಗ ಆ ಕಾರ್ಯಕ್ರಮವನ್ನು ಅಧಿಕೃತವಾಗಿ ಶಾಶ್ವತವಾಗಿ ಮುಚ್ಚಲಾಗುತ್ತದೆ' ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.
'ದಯವಿಟ್ಟು ಕೊನೆಯಲ್ಲಿ ನನ್ನ ಪುನರಾಗಮನವನ್ನು ತಪ್ಪಿಸಿಕೊಳ್ಳಬೇಡಿ. 24 ನೇ ವಯಸ್ಸಿನಲ್ಲಿಯೂ ಸಹ ಬಹಿರಂಗವಾಗಿ ಬೆದರಿಸಲ್ಪಟ್ಟ, ಅವಮಾನಿತ ಮತ್ತು ಅಪಹಾಸ್ಯಕ್ಕೆ ಒಳಗಾದ ನಂತರ ನಾನು ಅತ್ತಮ ಉಚ್ಚಾರಣೆ ಮತ್ತು ನಮ್ರತೆಯನ್ನು ತೋರಿಸಿದೆ. ಅದು ಇಂಗ್ಲಿಷ್ ಮಾತನಾಡುವ ಗಾಸಿಪ್ ಆಂಟಿಗಳು ಎಂದಿಗೂ ಉತ್ತಮ ಪಾಲನೆ ಎಂದು ಕರೆಯಲಾಗುವುದಿಲ್ಲ' ಎಂದು ಹೇಳಿದ್ದಾರೆ.
ಎಲ್ಲದಕ್ಕೂ ಮೂಗು ತೂರಿಸುತ್ತಾಳೆ: ಕಂಗನಾ ವಿರುದ್ಧ ತಿರುಗಿಬಿದ್ದ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಅಲಿಯಾ
ಕಂಗನಾ ಸದಾ ಮಾಫಿಯಾ ಗ್ಯಾಂಗ್ ವಿರುದ್ಧ ಕಿಡಿ ಕಾರುತ್ತಿರುತ್ತಾರೆ. ಇತ್ತೀಚೆಗಷ್ಟೆ ತನ್ನ ಸಿನಿಮಾ ಸೋಲಿಗೆ ಮಾಫಿಯಾ ಗ್ಯಾಂಗ್ ಎಂದು ಗುಡುಗಿದ್ದರು. ತನ್ನ ಇಮೇಜ್ ಡ್ಯಾಮೇಜ್ ಮಾಡುವ ಕ್ಯಾಂಪೇನ್ ಮಾಡುತ್ತಿದೆ ಎಂದು ಕಿಡಿ ಕಾರಿದ್ದರು. 'ನನ್ನ ಚಿತ್ರಕ್ಕೆ ಹಾನಿ ಮಾಡಲು ಮೂವಿ ಮಾಫಿಯಾ ಗ್ಯಾಂಗ್ ಎಲ್ಲವನ್ನೂ ಮಾಡುತ್ತಿದೆ. ಅದರ ಬಿಡುಗಡೆಗೆ ಮುಂಚೆಯೇ ಸುಳ್ಳು ವಿಮರ್ಶೆಗಳು ಮತ್ತು ಇಮೇಜ್ ಡ್ಯಾಮೇಜ್ ಪ್ರಚಾರ ಪ್ರಾರಂಭಸಿತ್ತು. ಹೇಗಾದರೂ ಈಗ ಸ್ಟ್ರೀಮಿಂಗ್ ಆಗುತ್ತಿದೆ ದಯವಿಟ್ಟು ಅದನ್ನು ನಿಮಗಾಗಿ ವೀಕ್ಷಿಸಿ. ನಿಮ್ಮ ಸ್ನೇಹಿತರು ಅಥವಾ ನಿಮಗೆ ತಿಳಿದಿರುವ ಜನರಿಗೆ ಚಲನಚಿತ್ರದ ವಿಮರ್ಶೆಗಳನ್ನು ನೀವು ನೋಡಿದ್ದರೆ ಮಾತ್ರ ಹೇಳಿ. ಪಾವತಿಸಿದ ನಕಲಿ ವಿಮರ್ಶೆಗಳಿಗೆ ಹೋಗಬೇಡಿ' ಎಂದು ಹೇಳಿದ್ದರು.
ಪಾರ್ಟಿಗೂ ಟೈಂ ಇದೆ ಎಂದು ಸಿಕ್ಕಾಪಟ್ಟೆ ಹಾಟ್ ಆದ ಕಂಗನಾ
ಕಂಗನಾ ಸಿನಿಮಾಗಳು
ಕಂಗನಾ ಸದ್ಯ ಎಮರ್ಜೆನ್ಸಿ, ತೇಜಸ್ ಸಿನಿಮಾಗಳ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಂಗನಾ ನಟನೆ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಬ್ಯುಸಿಯಾಗಿದ್ದಾರೆ.