ಅಮ್ಮನಾಗೋದು ಹೇಗೆ ಅಂತ ನಟಿಗೆ ಸಲ್ಮಾನ್ ಖಾನ್ ಸಲಹೆ ಕೊಟ್ರಂತೆ, ಏನಪ್ಪಾ ಅದು?

Published : Jul 11, 2023, 10:15 PM ISTUpdated : Nov 21, 2023, 06:39 PM IST
ಅಮ್ಮನಾಗೋದು ಹೇಗೆ ಅಂತ ನಟಿಗೆ ಸಲ್ಮಾನ್ ಖಾನ್ ಸಲಹೆ ಕೊಟ್ರಂತೆ, ಏನಪ್ಪಾ ಅದು?

ಸಾರಾಂಶ

ನಟಿ ಕಾಶ್ಮೀರಾ ಶಾ ಅವರು 14 ಬಾರಿ ಪ್ರಯತ್ನಿಸಿದರೂ ಮಕ್ಕಳಾಗಲಿಲ್ಲ. ನಂತರ ಸಲ್ಮಾನ್​ ಖಾನ್ ನೀಡಿದ ಸಲಹೆ ಮೇರೆಗೆ ಇಬ್ಬರು ಮಕ್ಕಳಾದವು. ಏನಿದು ಸಲಹೆ?​     

ಮಾಜಿ ರೂಪದರ್ಶಿ ಹಾಗೂ ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದು ಸೌಂದರ್ಯ ರಾಣಿ ಎಂದೇ ಬಿರುದು ಪಡೆದಿರುವವರು ಬಾಲಿವುಡ್​ ನಟಿ ಕಾಶ್ಮೀರಾ ಶಾ (Kashmira Shah).  ಮಿಸ್ ಯೂನಿವರ್ಸಿಟಿ ವರ್ಲ್ಡ್ ಮತ್ತು ಮಿಸ್ ಇಂಡಿಯಾ ಟ್ಯಾಲೆಂಟ್ ಸ್ಪರ್ಧೆ ವಿಜೇತೆಯಾಗಿರುವ ಕಾಶ್ಮೀರಾ ಅವರು ಕಳೆದ ಎಂಟು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ಹಲವು ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ. ಯೆಸ್ ಬಾಸ್ ಮತ್ತು ಜಂಗಲ್‌ನಂತಹ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.  ಹಾಗೆಯೇ ವಾಸ್ತವ್ ಮತ್ತು ಆಂಖೇನ್‌ನಂತಹ ಚಲನಚಿತ್ರಗಳಲ್ಲಿನ ಅವರು ಖ್ಯಾತಿ ಗಳಿಸಿದ್ದಾರೆ.  ರಂಗಭೂಮಿ ಕಲಾವಿದೆಯಾಗಿ ಜೀವನ ಆರಂಭಿಸಿದ್ದ ಕಾಶ್ಮೀರಾ, ಇಂದು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಈಕೆ ನಟಿ ಮಾತ್ರವಲ್ಲದೇ  ನಿರ್ದೇಶಕಿ ಕೂಡ.  ಕಾಶ್ಮೀರಾ ಶಾ ಮತ್ತು ಕೃಷ್ಣ ಅಭಿಷೇಕ್ ಟಿವಿ ಉದ್ಯಮದ ಪ್ರಸಿದ್ಧ ಜೋಡಿಗಳಲ್ಲಿ ಒಂದು. ಕಾಶ್ಮೀರಾ ಮತ್ತು ಕೃಷ್ಣ 2013 ರಲ್ಲಿ ವಿವಾಹವಾಗಿದ್ದರು. ಅದೇ ಸಮಯದಲ್ಲಿ, ಮದುವೆಯಾದ ನಾಲ್ಕು ವರ್ಷಗಳ ನಂತರ, ಇಬ್ಬರೂ 2017 ರಲ್ಲಿ ಅಪ್ಪ-ಅಮ್ಮನಾಗುವ ಭಾಗ್ಯ ಪಡೆದರು. ಆದರೆ ಇದರ ಹಿಂದೆ ಇರುವುದು ಸಲ್ಮಾನ್​ ಖಾನ್​ ಅವರ ಸೂಚನೆ ಎನ್ನುವುದು ಕುತೂಹಲದ ವಿಷಯ.
  
ಹೌದು.  ಕಾಶ್ಮೀರಾ ಅವರು, ಒಂದು ಅಥವಾ ಎರಡು ಬಾರಿ ಅಲ್ಲ ಬರೋಬ್ಬರಿ 14 ಬಾರಿ ಗರ್ಭಿಣಿಯಾಗಲು (Pregnant)ಪ್ರಯತ್ನಿಸಿದರು. ಆದರೆ ಅವಳು ಯಶಸ್ವಿಯಾಗಲಿಲ್ಲ.  ಪದೇ ಪದೇ ವಿಫಲರಾದರು.  ಕಾಶ್ಮೀರಾ ಐವಿಎಫ್ ತಂತ್ರದ ಮೂಲಕ ಗರ್ಭಿಣಿಯಾಗಲು ಪ್ರಯತ್ನಿಸಿದರು. ಐವಿಎಫ್​ನಿಂದಾಗಿ  ಕಾಶ್ಮೀರಾ ತೂಕವೂ ಸಾಕಷ್ಟು ಹೆಚ್ಚಿತ್ತು ಎನ್ನಲಾಗಿದೆ. ಆದರೆ ಅದು ಕೂಡ ಫಲ ನೀಡಲಿಲ್ಲ. ಕೊನೆಗೆ ಅವರಿಗೆ ನೆರವಾದದ್ದು ನಟ ಸಲ್ಮಾನ್​ ಖಾನ್​. ಅವರು ನೀಡಿದ ಸಲಹೆಯನ್ನು ಕಾಶ್ಮೀರಾ ಅವರಿಗೆ ತಾಯಿಯಾಗುವ ಭಾಗ್ಯ ಒದಗಿ ಬಂದಿದೆ.  

ಬಳಸಿ ಕಸದಂತೆ ಬಿಸಾಕಿದ ಎಂದಿದ್ದ ಸಲ್ಮಾನ್​ ಮಾಜಿ ಗೆಳತಿ ಸೋಮಿಯಿಂದ ಪುನಃ ಭಾವನಾತ್ಮಕ ಪೋಸ್ಟ್​

 ಅಷ್ಟಕ್ಕೂ ಸಲ್ಮಾನ್ ಖಾನ್ ನೀಡಿದ ಸಲಹೆ ಏನೆಂದರೆ,  ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಿರಿ ಎನ್ನುವುದು. ಈ ರೀತಿಯ ಕಾಶ್ಮೀರಾ ಜೋಡಿ ಮೊದಲು ಯೋಚನೆ ಮಾಡಿರಲಿಲ್ಲ. ಸಲ್ಮಾನ್​ ಖಾನ್​ (Salman Khan) ಅವರು ಈ ಸಲಹೆ ನೀಡಿದ ನಂತರ ಅದರಂತೆಯೇ ಮುಂದಡಿ ಇಟ್ಟರು. ಇದರ ಫಲವಾಗಿ ಇವರಿಬ್ಬರೂ  ಇಬ್ಬರು ಮಕ್ಕಳ ಪಾಲಕರಾಗಿದ್ದಾರೆ. ತಮ್ಮ ಸೌಂದರ್ಯ ಎಲ್ಲಿ ಹಾಳಾಗುತ್ತದೋ ಎನ್ನುವ ಕಾರಣಕ್ಕೆ ಕಾಶ್ಮೀರಾ ಅವರು ಗರ್ಭ ಧರಿಸಲಿಲ್ಲ ಎಂದು ಗಾಳಿಸುದ್ದಿಯೂ ಇದೆ. ಆದರೆ ಅಸಲಿಗೆ ಅವೆಲ್ಲಾ ಸುಳ್ಳು. 14 ಬಾರಿ ತಾವು ಮಗು ಪಡೆಯಲು ನಿರ್ಧರಿಸಿ ವಿಫಲರಾಗಿದ್ದೆ ಎಂದು ಕಾಶ್ಮೀರಾ ಹೇಳಿದ್ದಾರೆ.  14 ಬಾರಿ ಪ್ರಯತ್ನಿಸಿದರೂ ತಾಯಿಯಾಗಲು ಸಾಧ್ಯವಾಗಲಿಲ್ಲ, ಆದರೆ ಸಲ್ಮಾನ್ ಖಾನ್ ಸಲಹೆಯಿಂದಾಗಿ ಎರಡು ಮಕ್ಕಳಿಗೆ ತಾಯಿಯಾಗಿದ್ದೇನೆ ಎಂದಿದ್ದಾರೆ.
 
ಇನ್ನು ಕಾಶ್ಮೀರಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಅವರು ತೆಲುಗು (Telgu) ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಪರಿಚಯವಾದವರು. ನಂತರ ಹಿಂದಿ ಸೇರಿದಂತೆ ತಮಿಳು, ಮರಾಠಿ, ಭೋಜ್‌ಪುರಿ ಸಿನಿಮಾಗಳಲ್ಲೂ ನಟಿಸಿದರು.  ಬಿಗ್ ಬಾಸ್, ಖತ್ರೋನ್ ಕೆ ಖಿಲಾಡಿ 4, ನಾಚ್ ಬಲಿಯೇ 3 ನಂತಹ ಜನಪ್ರಿಯ ಟಿವಿ ಶೋಗಳಲ್ಲಿ ಕೂಡ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದಾರೆ.  ಅಂದಹಾಗೆ ಕೃಷ್ಣ ಅಭಿಷೇಕ್​ ಅವರ ಜೊತೆ ಅವರಿಗೆ ಇದು ಎರಡನೆಯ ವಿವಾಹ. ಅದಕ್ಕೂ ಮುನ್ನ 2003 ರಲ್ಲಿ ಬ್ರಾಡ್ ಲಿಟ್ಟರ್‌ಮ್ಯಾನ್ ಅವರನ್ನು ವಿವಾಹವಾಗಿದ್ದರು. ಆದರೆ ನಾಲ್ಕೇ ವರ್ಷಗಳಲ್ಲಿ ದಾಂಪತ್ಯ ಜೀವನ ಮುರಿದು ಬಿತ್ತು. ನಂತರ  ನಟ ಮತ್ತು ಟಿವಿ ನಿರೂಪಕ ಕೃಷ್ಣ ಅಭಿಷೇಕ್ ಅವರನ್ನು ವರಿಸಿದರು.    

ಪ್ರಧಾನಿಯಾಗಲು ರಾಹುಲ್​ ಗಾಂಧಿ ಏನ್​ ಮಾಡ್ಬೇಕು? ರಾಖಿ ಸಾವಂತ್​ ಕೊಟ್ಟ ಟಿಪ್ಸ್ ಇದು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!