ಕುರ್ಚಿಯಿಂದ ಎದ್ದು ಕುಣಿಬೇಕು ಎನಿಸುತ್ತಿದೆ; ಹಾಲಿವುಡ್ ದಿಗ್ಗಜ ಸ್ಪೀಲ್ಬರ್ಗ್ ಮಾತಿಗೆ ರಾಜಮೌಳಿ ಫುಲ್ ಖುಷ್

By Shruthi Krishna  |  First Published Feb 11, 2023, 11:25 AM IST

ಹಾಲಿವುಡ್ ದಿಗ್ಗಜ ಸ್ಟೀವನ್ ಸ್ಪೀಲ್ಬರ್ಗ್ ಅವರನ್ನು ಟಾಲಿವುಡ್ ಖ್ಯಾತ ನಿರ್ದೇಶಕ  ಎಸ್ ಎಸ್ ರಾಜಮೌಳಿ ಸಂದರ್ಶನ ಮಾಡಿದ್ದಾರೆ. 


ಭಾರತೀಯ ಸಿನಿಮಾದ ಖ್ಯಾತ ನಿರ್ದೇಶಕ ರಾಜಮೌಳಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಳಿಕ ರಾಜಮೌಳಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹಾಲಿವುಡ್ ದಿಗ್ಗಜರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದಾರೆ. ಇತ್ತೀಚಿಗಷ್ಟೆ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದು ಬೀಗಿದ ಬಳಿಕ ರಾಜಮೌಳಿ ಹಾಲಿವುಡ್‌ ಮಂದಿಗೂ ಚಿರಪರಿಚಿತರಾಗಿದ್ದಾರೆ. ಹಾಲಿವುಡ್ ದಿಗ್ಗಜ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸ್ಟೀವನ್ ಸ್ಪೀಲ್‌ಬರ್ಗ್ ಆರ್ ಆರ್ ಆರ್ ಸಿನಿಮಾವನ್ನು ನೋಡಿ ಹಾಡಿಹೊಗಳಿದ್ದರು. 

ಇದೀಗ ರಾಜಮೌಳಿ ಮತ್ತೆ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದಾರೆ. ನೇರವಾಗಿ ವರ್ಚುವಲ್ ಮೂಲಕ. ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ರಾಜಮೌಳಿ ಸಂದರ್ಶನ ಮಾಡಿದ್ದಾರೆ. ಇಬ್ಬರೂ ಖ್ಯಾತ ನಿರ್ದೇಶಕರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಸಂದರ್ಶನದಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್ ಆರ್ ಆರ್ ಸಿನಿಮಾವನ್ನು ಹಾಡಿಹೊಗಳಿದರು. ಆರ್ ಆರ್ ಆರ್ ಸಿನಿಮಾ ದೃಶ್ಯ ವೈಭವ ಎಂದು ಹೇಳಿದ್ದಾರೆ.  

Tap to resize

Latest Videos

ಸ್ಪೀಲ್ಬರ್ಗ್ ಅವರ ಫ್ಯಾಬೆಲ್‌ಮ್ಯಾನ್ಸ್ ಸಿನಿಮಾ ಭಾರತದಲ್ಲಿ ರಿಲೀಸ್ ಆಗಿದೆ. ಫೆಬ್ರವರಿ 10ರಂದು ಶುಕ್ರವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಪ್ರಯಕ್ತ ರಾಜಮೌಳಿ ಅವರು ಸ್ಪೀಲ್ಬರ್ಗ್ ಅವರನ್ನು ಸಂದರ್ಶನ ನಡೆಸಿದ್ದಾರೆ. ಹಾಲಿವುಡ್ ದಂತಕಥೆ  ಸ್ಪೀಲ್ಬರ್ಗ್ ಆರ್ ಆರ್ ಆರ್ ಸಿನಿಮಾವನ್ನು ಹೊಗಳುವ ಮೂಲಕ ಸಂದರ್ಶನ ಪ್ರಾರಂಭಿಸಿದರು.  

'ಗೋಲ್ಡನ್ ಗ್ಲೋಬ್ಸ್'ನಲ್ಲಿ ದೇವರನ್ನು ಭೇಟಿಯಾದ ನಿರ್ದೇಶಕ ರಾಜಮೌಳಿ; ಫೋಟೋ ವೈರಲ್

'ನಿಮ್ಮ ಸಿನಿಮಾ ಅತ್ಯುತ್ತಮವಾಗಿದೆ. ನಾವು ಭೇಟಿಯಾದಾಗ ಸಿನಿಮಾ ನೋಡಿರಲಿಲ್ಲ. ಕಳಎದ ವಾರ ನಾನು ನೋಡಿದೆ. ಅದ್ಭುತವಾಗಿದೆ. ನನ್ನ ಕಣ್ಣುಗಳೇ ನಂಬಲಾಗಲಿಲ್ಲ. ಅಭಿನಯ ಚೆನ್ನಾಗಿದೆ. ಸುಂದವಾದ ದೃಶ್ಯ ಶೈಲಿಯಾಗಿದೆ' ಎಂದು ಹೇಳಿದ್ದಾರೆ. 

ಸ್ಪೀಲ್ಬರ್ಗ್ ಮಾತಿನಿಂದ ರಾಜಮೌಳಿ ಸಂಪೂರ್ಣವಾಗಿ ಸಂತಸಗೊಂಡರು. ಉತ್ಸುಕರಾದ ಎಸ್‌ಎಸ್ ರಾಜಮೌಳಿ 'ನಿಮ್ಮ ಮಾತುಗಳಿಂದ ನಾನು ಬಹುತೇಕ ಕುರ್ಚಿಯಿಂದ ಬಿಟ್ಟು ಎದ್ದು ಕುಣಿಯಬೇಕು ಎನಿಸುತ್ತಿದೆ' ಎಂದು ಉತ್ತರಿಸಿದರು. 

ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ವೇಳೆ ಮೊದಲ ಬಾರಿಗೆ ರಾಜಮೌಳಿ ಹಾಲಿವುಡ್ ದಿಗ್ಗಜರನ್ನು ಭೇಟಿಯಾದೆ ಎಂದು ಬರೆದುಕೊಂಡಿದ್ದರು. 'ನಾನು ದೇವರನ್ನು ಭೇಟಿಯಾದೆ' ಎಂದು ಹೇಳಿದ್ದರು. ವಿಶ್ವ ಸಿನಿಮಾರಂಗದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ  ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯಾಗಿ ಭಾವಪರವಶರಾಗಿದ್ದರು. ಸ್ಟೀವನ್ ಸ್ಪೀಲ್‌ಬರ್ಗ್ ತನ್ನ ದೇವರು ಎಂದು ರಾಜಮೌಳಿ ಕರೆದಿದ್ದರು. ಸ್ಟೀವನ್ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದರು. ಇದೀಗ ಸಂದರ್ಶನ ಮಾಡುವ ಮೂಲಕ ಮತ್ತಷ್ಟು ಸಂತಸ ಪಟ್ಟಿದ್ದಾರೆ.

 
 
 
 
 
 
 
 
 
 
 
 
 
 
 

A post shared by Taran Adarsh (@taranadarsh)

ಹಾಲಿವುಡ್ ಸಿನಿಮಾ ಮಾಡುವಂತೆ ರಾಜಮೌಳಿಗೆ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಆಹ್ವಾನ

ಬ್ಲಾಕ್‌ಬಸ್ಟರ್‌ ಆರ್‌ಆರ್‌ಆರ್‌ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಕೂಡ ನಟಿಸಿದ್ದಾರೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾ ಸದ್ಯ ಆಸ್ಕರ್ ಅಂಗಳದಲ್ಲಿದೆ.  ‘ನಾಟು ನಾಟು..' ಹಾಡು ಆಸ್ಕರ್​ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ.  ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಾರಾ ಎಂದು ಭಾರತೀಯರು ಕಾಯುತ್ತಿದ್ದಾರೆ.  
 

click me!