'ಎಮರ್ಜನ್ಸಿ' ಘೋಷಿಸಲು ಸಂಸದೆ ಕಂಗನಾ ರಣಾವತ್ ಸಜ್ಜು, ಹುಶಾರ್!

Published : Oct 19, 2024, 06:35 PM IST
'ಎಮರ್ಜನ್ಸಿ' ಘೋಷಿಸಲು ಸಂಸದೆ ಕಂಗನಾ ರಣಾವತ್ ಸಜ್ಜು, ಹುಶಾರ್!

ಸಾರಾಂಶ

ಇಂದಿರಾ ಗಾಂಧಿಯವರ ಪಾತ್ರ ಮಾಡುವುದು ಸಾಮಾನ್ಯದ ಸಂಗತಿಯೇನೂ ಅಲ್ಲ. ಏಕೆಂದರೆ, ಮಾಜಿ ಪ್ರಧಾನಿ ರೋಲ್‌ನಲ್ಲಿ ನಟಿಸಿದಾಗ ಬಹಳಷ್ಟು ಸವಾಲುಗಳು ಎದುರಾಗುತ್ತವೆ. ಅವು ಮುಂದೆ ನಾನಾರೂಪ ಪಡೆದುಕೊಳ್ಳಬಹುದು. ಹೀಗಾಗಿ ಸ್ವತಃ ಕಂಗನಾ..

ಕಂಗನಾ ರಣಾವತ್ ನಟನೆಯ 'ಎಮರ್ಜನ್ಸಿ' ಚಿತ್ರಕ್ಕೆ ಪ್ರಮಾಣ ಪತ್ರ ನೀಡಿರುವ ಕುರಿತು ಸ್ವತಃ ನಟಿ ಕಂಗನಾ ರಣಾವತ್ (Kangana Ranaut)ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ನೀಡಿದ್ದಾರೆ. ನಮ್ಮ ಎಮರ್ಜನ್ಸಿ (Emergency) ಚಿತ್ರಕ್ಕೆ ಪ್ರಮಾಣಪತ್ರ ಸ್ವೀಕರಿಸಿದ್ದೇವೆ ಎಂದು ತಿಳಿಸಲು ಖುಷಿಯಾಗುತ್ತಿದೆ. ಶೀಘ್ರದಲ್ಲೇ ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಿದ್ದೇವೆ. ನಿಮ್ಮೆಲ್ಲರ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು' ಎಂದಿದ್ದಾರೆ 'ಎಮರ್ಜನ್ಸಿ' ಚಿತ್ರದ ನಾಯಕಿ ನಟಿ ಕಂಗನಾ ರಣಾವತ್. 

ಹೌದು, ಬಾಲಿವುಡ್ ನಟಿ ಹಾಗೂ ಹಾಲಿ ಸಂಸದೆ ಕಂಗನಾ ರಣಾವತ್ ನಟನೆಯ 'ಎಮರ್ಜೆನ್ಸಿ' ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಪ್ರಮಾಣಪತ್ರ ವಿತರಣೆ ಮಾಡಿದೆ. ಈ ಮೂಲಕ ಕಂಗನಾ ನಟನೆಯ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ. ಎಮರ್ಜನ್ಸಿ ಚಿತ್ರದಲ್ಲಿ ನಟಿ ಕಂಗನಾ ಅವರು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರವು ಇಂದಿರಾ ಗಾಂಧಿಯವರ ಜೀವನ ಚರಿತ್ರೆಯ ಕೆಲವು ಘಟನೆಗಳನ್ನು ಆಧರಿಸಿದೆ ಎನ್ನಲಾಗಿದೆ. 

ಮಗದೊಂದು ಮೈಲಿಗಲ್ಲಿಗೆ ಸಜ್ಜಾದ ರಿಷಬ್ ಶೆಟ್ಟಿ, 'ಜೈ ಹನುಮಾನ್-2'ದಲ್ಲಿ ಕಾಂತಾರ ಹೀರೋ!

ಈ ಚಿತ್ರಕ್ಕಾಗಿ ನಟಿ ಕಂಗನಾ ರಣಾವತ್ ಅವರು ತಮ್ಮ ಹಾವ-ಭಾವ ಹಾಗೂ ಬಾಡಿ ಲಾಂಗ್ವೇಜ್‌ಅನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದಾರಂತೆ. ಏಕೆಂದರೆ, ಹೇಳಿಕೇಳಿ ಇಂದಿರಾ ಗಾಂಧಿ ಭಾರತದ ಮಾಜಿ ಪ್ರಧಾನಿ. ಜೊತೆಗೆ, ಅವರು ಆ ಕಾಲದಲ್ಲಿ ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿದ್ದ ಮಹಿಳೆಯೂ ಆಗಿದ್ದರು. ತಮ್ಮ ಪವರ್ ಕಾರಣಕ್ಕೆ ಮಾತ್ರವಲ್ಲದೇ, ಮೇಕಪ್ ಹಾಗೂ ಉಡುಗೆ-ತೊಡುಗೆ ವಿಷಯದಲ್ಲಿಯೂ ಅವರನ್ನು ಹಲವರು ಮೆಚ್ಚಿಕೊಂಡಿದ್ದರು. 

ಹೀಗಾಗಿ, ಇಂದಿರಾ ಗಾಂಧಿಯವರ ಪಾತ್ರ ಮಾಡುವುದು ಸಾಮಾನ್ಯದ ಸಂಗತಿಯೇನೂ ಅಲ್ಲ. ಏಕೆಂದರೆ, ಮಾಜಿ ಪ್ರಧಾನಿ ರೋಲ್‌ನಲ್ಲಿ ನಟಿಸಿದಾಗ ಬಹಳಷ್ಟು ಸವಾಲುಗಳು ಎದುರಾಗುತ್ತವೆ. ಅವು ಮುಂದೆ ನಾನಾರೂಪ ಪಡೆದುಕೊಳ್ಳಬಹುದು. ಹೀಗಾಗಿ ಸ್ವತಃ ಕಂಗನಾ ಸೇರಿದಂತೆ, ಇಡೀ ಚಿತ್ರತಂಡ ಆ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದೆಯಂತೆ. ಒಟ್ಟಿನಲ್ಲಿ, ಈಗ ಕಂಗನಾ ನಟನೆಯ ಎಮಜಘನ್ಸಿ ಚಿತ್ರವು ಸೆನ್ಸಾರ್ ಪ್ರಮಾಣಪತ್ರ ಪಡೆದು ಬಿಡುಗಡೆಗೆ ಸಜ್ಜಾಗುತ್ತಿದೆ. 

ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ ಬೆನ್ನು ನೋವಿಗೆ ಬೆಂಗಳೂರಲ್ಲಿ ಸರ್ಜರಿ!?

ಒಟ್ಟಿನಲ್ಲಿ, ಕಂಗನಾ ಅಭಿಮಾನಿಗಳು ಎಮರ್ಜನ್ಸಿ ಚಿತ್ರವನ್ನು ಸದ್ಯದಲ್ಲೆ ಕಣ್ತುಂಬಿಕೊಳ್ಳಬಹುದು. ಇದೀಗ ರಾಜಕೀಯಕ್ಕೆ ಕಾಲಿಟ್ಟಿರುವ ನಟಿ ಹಾಗೂ ಸಂಸದೆ (MP) ಕಂಗನಾ ಮುಂದೆ ಸಿನಿಮಾರಂಗದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಆತಂಕ ಅವರ ಅಭಿಮಾನಿಗಳಲ್ಲಿ ಇದ್ದೇ ಇದೆ. ಕಂಗನಾ ಅವರು ಚುನಾವಣೆಯಲ್ಲಿ ಗೆದ್ದ ಸಮಯದಲ್ಲಿ, ತಾವು ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳನ್ನೂ ಮುಗಿಸಿಕೊಡುವುದಾಗಿ ಹೇಳಿದ್ದರು. ಜೊತೆಗೆ, ಮುಂದೆ ಸಿನಿಮಾರಂಗವನ್ನು ತೊರೆಯುವುದಿಲ್ಲ ಎಂದು ಕೂಡ ಹೇಳಿದ್ದರು. ಆದರೆ, ಯೋಚನೆಯನ್ನು ಬದಯಾಯಿಸಬಹುದಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?