ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ಸಲ್ಮಾನ್ ಖಾನ್ ಕ್ಷಮೆ ಕೋರಬಾರದೆ ಎಂದು ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಅಪ್ಪ ಸಲೀಂ ಖಾನ್ ಅದು ಸಾಧ್ಯವಿಲ್ಲ ಎಂದದ್ದು ಯಾಕೆ?
ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿ ಮತ್ತು ಕೃಷ್ಣಮೃಗ... ಈ ಮೂರು ಶಬ್ದಗಳು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಆರಾಧ್ಯ ದೈವ ಕೃಷ್ಣಮೃಗವನ್ನು ಕೊಂದಿದ್ದಾರೆ ಎನ್ನುವುದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಆರೋಪ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇದಾಗಲೇ ಹಲವು ಬಾರಿ ಬೆದರಿಕೆ ಹಾಕಿದ್ದಾಗಿದೆ. ಅವರ ನಿಕಟವರ್ತಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಯೂ ಮಾಡಿಯಾಗಿದೆ. ಇಷ್ಟೆಲ್ಲಾ ಆದ ಮೇಲೆ ನಟ ಒಂದು ಕ್ಷಮೆ ಕೋರಬಾರದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಈ ಮಾತು ಬಾಬಾ ಸಿದ್ದಿಕಿ ಅವರ ಹತ್ಯೆಯ ಬಳಿಕ ಜೋರಾಗಿದೆ. ಸಲ್ಮಾನ್ ಖಾನ್ರಿಂದಾಗಿ ಬೇರೆಯವರು ಪ್ರಾಣ ಕಳೆದುಕೊಳ್ಳುವುದು ಬೇಡ, ಬಿಷ್ಣೋಯಿ ಸಮುದಾಯಕ್ಕೆ ಕ್ಷಮೆ ಕೋರಬೇಕು ಎನ್ನುವುದು ಅವರ ಮಾತು. ಆದರೆ ಇದಾಗಲೇ ಸಲ್ಮಾನ್ ಖಾನ್ ಈ ಹಿಂದಿನಿಂದಲೂ ತಾವು ತಪ್ಪು ಮಾಡಿಲ್ಲ ಎಂದೇ ಹೇಳಿಕೊಂಡು ಬಂದಿದ್ದಾರೆ. ಇದೀಗ ಅವರ ತಂದೆ ಸಲೀಂ ಖಾನ್ ಕೂಡ ಅದೇ ಮಾತನ್ನು ಹೇಳಿದ್ದಾರೆ. ಸಲ್ಮಾನ್ ಖಾನ್ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದಿರುವ ಅವರು, ತಪ್ಪೇ ಮಾಡದ ಮೇಲೆ ಕ್ಷಮೆ ಯಾಕೆ ಕೋರಬೇಕು ಎಂದು ಪ್ರಶ್ನಿಸಿದ್ದಾರೆ.
ಪ್ರಕೃತಿ ಉಳಿವಿಗೆ 300 ಮಂದಿ ಬಲಿದಾನ! ರಾಜನಿಂದ ಕ್ಷಮೆ... ಚಿಪ್ಕೋ ಚಳವಳಿ ರೂವಾರಿ ಬಿಷ್ಣೋಯಿಗಳ ಕೌತುಕ ಇತಿಹಾಸ...
'ಸಲ್ಮಾನ್ ಖಾನ್ ಒಂದು ಜಿರಳೆಯನ್ನೂ ಕೊಲ್ಲುವವನಲ್ಲ. ಅಂಥದ್ದರಲ್ಲಿ ಕೃಷ್ಣಮೃಗಗಳನ್ನು ಏಕೆ ಕೊಲ್ಲುತ್ತಾನೆ' ಎಂದು ಪ್ರಶ್ನಿಸಿದ್ದಾರೆ. ಅವನು ನನ್ನ ಬಳಿ ಯಾವತ್ತೂ ಸುಳ್ಳು ಹೇಳಲ್ಲ. ಅವನಿಗೆ ಪ್ರಾಣಿಗಳ ಬೇಟೆ ಆಡುವುದು ಎಂದರೆ ಆಗದು, ಏಕೆಂದರೆ ಅವನಿಗೆ ಪ್ರಾಣಿಗಳು ಎಂದರೆ ತುಂಬಾ ಇಷ್ಟ. ಒಂದು ವೇಳೆ ಆತ ಬಿಷ್ಣೋಯ್ ಗ್ಯಾಂಗ್ ಬಳಿ ಕ್ಷಮೆ ಕೋರಿ ಬಿಟ್ಟರೆ ಆತ ತಪ್ಪು ಮಾಡಿದ್ದು ನಿಜ ಎಂದಂತೆ ಆಗುತ್ತದೆ. ತಪ್ಪೇ ಮಾಡದಿದ್ದ ಮೇಲೆ ಕ್ಷಮೆ ಕೋರುವುದು ಸರಿಯಲ್ಲ. ಜಿರಳೆಯನ್ನೂ ಕೊಲ್ಲದ ಆತ ಹೀಗೆ ಕೃಷ್ಣಮೃಗಗಳನ್ನು ಕೊಲ್ಲದೇ ತಪ್ಪು ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿರುವ ಅವರು, ತಮ್ಮ ಪುತ್ರ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸಲ್ಮಾನ್ ಖಾನ್ ಕ್ಷಮೆ ಕೋರಬೇಕು ಎನ್ನುವವರಿಗೆ ಪ್ರಶ್ನಿಸಿರುವ ಸಲೀಂ ಖಾನ್ ಅವರು, ‘ಸಲ್ಮಾನ್ ಯಾರಲ್ಲಿ ಕ್ಷಮೆ ಕೇಳಬೇಕು? ಏಕೆ ಕೇಳಬೇಕು? ನೀವು ಎಷ್ಟು ಜನರಲ್ಲಿ ಕ್ಷಮೆ ಕೇಳಿದ್ದೀರಿ? ನೀವು ಎಷ್ಟು ಪ್ರಾಣಿಗಳ ಜೀವ ಉಳಿಸಿದ್ದೀರಿ? ನನ್ನ ಮಗ ತಪ್ಪು ಮಾಡಿದ್ದಾನೆ ಎನ್ನುವುದನ್ನು ಯಾರಾದರೂ ನೋಡಿದ್ದಾರಾ? ಕ್ಷಮೆ ಕೋರಬೇಕು ಎನ್ನುವವರು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದೀಯಾ? ನಾವು ಗನ್ ಕೂಡ ಬಳಸಲ್ಲ’ ಎಂದು ಮಗನ ಪರವಾಗಿ ಸಲೀಂ ಖಾನ್ ಮಾತನಾಡಿದ್ದಾರೆ. ಇದೇ ವೇಳೆ, ಬಾಬಾ ಸಿದ್ದಿಕಿ ಕೊಲೆಗೂ ಸಲ್ಮಾನ್ಗೂ ಸಂಬಂಧವಿಲ್ಲ ಎಂದಿದ್ದಾರೆ. ಇದು ಬೇರೆ ವಿಚಾರ. ಆಸ್ತಿ ವಿವಾದದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕ್ಷಮೆ ಕೋರದ ಸಲ್ಮಾನ್ಗೆ ದುಃಸ್ವಪ್ನವಾದ ಕೃಷ್ಣಮೃಗ! ಜೀವ ಉಳಿಸಿಕೊಳ್ಳಲು 2 ಕೋಟಿಯ ಮತ್ತೊಂದು ಕಾರು ಖರೀದಿ