ಇನ್ನು ಮೂರೇ ದಿನಕ್ಕೆ 'ಡಾರ್ಲಿಂಗ್ ಪ್ರಭಾಸ್' ನೋಡಲು ಮುಗಿಬೀಳ್ತಾರೆ ಫ್ಯಾನ್ಸ್!

By Shriram Bhat  |  First Published Oct 19, 2024, 2:21 PM IST

ಸಕ್ಸಸ್ ಸಂಭ್ರಮದಲ್ಲಿ ಬರ್ತಾ ಇರೋ ಪ್ರಭಾಸ್ ಬರ್ತ್​​ಡೇನ ಅದ್ಧೂರಿಯಾಗಿ ಆಚರಿಸೋಕೆ ಫ್ಯಾನ್ಸ್ ಸಜ್ಜಾಗಿ ನಿಂತಿದ್ದಾರೆ. ಇನ್ನೊಂದು ವಾರ ತೆಲುಗು ನಾಡಿನಲ್ಲಿ ಒನ್ ಅಂಡ್ ಓನ್ಲಿ ಪ್ರಭಾಸ್ ಮೇನಿಯಾ. ಇದೇ ಶುಕ್ರವಾರ 'ಸಲಾರ್' ಸಿನಿಮಾ ರೀ ರಿಲೀಸ್ ಆಗ್ತಾ ಇದೆ...


ಡಾರ್ಲಿಂಗ್ ಪ್ರಭಾಸ್, ಸಲಾರ್ ಮತ್ತು ಕಲ್ಕಿ ಚಿತ್ರಗಳ ಸಕ್ಸಸ್ ಬೆನ್ನಲ್ಲೇ ಮತ್ತೆ ಗೆಲುವಿನ ಫಾರ್ಮ್​ಗೆ ಬಂದಾಗಿದೆ. ಇದೀಗ ಪ್ರಭಾಸ್ ಬರ್ತ್​ಡೇ ಹತ್ತಿರ ಬಂದಿದ್ದು ಈ ಹುಟ್ಟುಹಬ್ಬಕ್ಕೆ ತ್ರಿಪಲ್ ಗಿಫ್ಟ್ ಕೊಡಲಿದ್ದಾರೆ ಡಾರ್ಲಿಂಗ್. ಈ ಸಾರಿಯ ಪ್ರಭಾಸ್ ಬರ್ತ್​ಡೇಗೆ ಅವ್ರ ನಟನೆಯ ಒಂದಲ್ಲ ಎರಡಲ್ಲ ಮೂರು ಸಿನಿಮಾ ತೆರೆಗೆ ಬರ್ತಾ ಇವೆ.

ಡಾರ್ಲಿಂಗ್ ಪ್ರಭಾಸ್ ಬರ್ತ್​ಡೇಗೆ ತ್ರಿಬಲ್ ಧಮಾಕಾ: ಯೆಸ್,  ಈ ಸಾರಿ ಪ್ರಭಾಸ್ ಬರ್ತ್​​ಡೇನ ಭರ್ಜರಿಯಾಗಿ ಸೆಲೆಬ್ರೇಟ್ ಮಾಡೋಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲುಗಳ ಸುಳಿಗೆ ಸಿಲುಕಿದ್ದ  ಡಾರ್ಲಿಂಗ್ ಇದೀಗ ಫಾರ್ಮ್​ಗೆ ಬಂದಾಗಿದೆ. ಸಲಾರ್ ಮತ್ತು ಕಲ್ಕಿ 2898 ಎಡಿ ಸಿನಿಮಾಗಳ ಅಮೋಘ ಸಕ್ಸಸ್ , ಮತ್ತೆ ಪ್ರಭಾಸ್​​ಗೆ ಬಾಕ್ಸ್ಆಫೀಸ್ ಸುಲ್ತಾನ್ ಪಟ್ಟ ತಂದುಕೊಟ್ಟಿವೆ.

Tap to resize

Latest Videos

ಇನ್ನೂ ಈ ಸಕ್ಸಸ್ ಸಂಭ್ರಮದಲ್ಲಿ ಬರ್ತಾ ಇರೋ ಪ್ರಭಾಸ್ ಬರ್ತ್​​ಡೇನ ಅದ್ಧೂರಿಯಾಗಿ ಆಚರಿಸೋಕೆ ಫ್ಯಾನ್ಸ್ ಸಜ್ಜಾಗಿ ನಿಂತಿದ್ದಾರೆ. ಇವರ ಸೆಲೆಬ್ರೇಷನ್ ಸಂಭ್ರಮ ಹೆಚ್ಚಿಸೋಕೆ ಪ್ರಭಾಸ್ ಬರ್ತ್​​ಡೇ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸಿನಿಮಾಗಳು ರೀ ರಿಲೀಸ್ ಆಗ್ತಾ ಇವೆ.

ರಶ್ಮಿಕಾ-ಸುದೀಪ್ ಹುಶಾರ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಯ್ತು ಫ್ಯಾನ್ಸ್ ಕೂಗು!

ಪ್ರಭಾಸ್ ನಟನೆಯ 3 ಸಿನಿಮಾ ಒಟ್ಟೊಟ್ಟಿಗೆ ರೀ ರಿಲೀಸ್..!
ಹೌದು ಇನ್ನೊಂದು ವಾರ ತೆಲುಗು ನಾಡಿನಲ್ಲಿ ಒನ್ ಅಂಡ್ ಓನ್ಲಿ ಪ್ರಭಾಸ್ ಮೇನಿಯಾ. ಇದೇ ಶುಕ್ರವಾರ 'ಸಲಾರ್' ಸಿನಿಮಾ ರೀ ರಿಲೀಸ್ ಆಗ್ತಾ ಇದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ತೆರೆಗೆ ಬಂದ ಸಲಾರ್, ಒಂದು ವರ್ಷ ತುಂಬುವ ಮುನ್ನೇ ಮತ್ತೆ ಮರುಬಿಡುಗಡೆಯಾಗ್ತಾ ಇದೆ. ಪ್ರಶಾಂತ್ ನೀಲ್ ನಿರ್ದೇಶನದ   ಈ ಆಕ್ಷನ್ ಡ್ರಾಮಾ ಮತ್ತೊಮ್ಮೆ ಫ್ಯಾನ್ಸ್​​ಗೆ ಥ್ರಿಲ್ ಕೊಡೋದಕ್ಕೆ ಸಜ್ಜಾಗಿದೆ.

ಇನ್ನೂ ಅಕ್ಟೋಬರ್ 22ನೇ ತಾರೀಖು ಪ್ರಭಾಸ್ ಹುಟ್ಟುಹಬ್ಬದ ಮುನ್ನಾದಿನ 'ಮಿಸ್ಟರ್ ಪರ್ಫೆಕ್ಟ್' ಸಿನಿಮಾ ರೀ ರಿಲೀಸ್ ಆಗ್ತಾ ಇದೆ. 2011ರಲ್ಲಿ ಬಂದ ಈ ರೊಮ್ಯಾನ್ಸ್ ಡ್ರಾಮಾದಲ್ಲಿ ಪ್ರಭಾಸ್, ಕಾಜೋಲ್ ಅಗರ್​ವಾಲ್ ಮತ್ತು ತಾಪ್ಸಿ ಪನ್ನು ನಟಿಸಿದ್ರು. ಇತ್ತೀಚಿಗೆ ಪ್ರಭಾಸ್ ಬರೀ ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿದ್ದು, ಹಳೆಯ ಲವ್ವರ್ ಬಾಯ್ ಪ್ರಭಾಸ್ ನ ನೋಡೋ ಚಾನ್ಸ್ ಫ್ಯಾನ್ಸ್​ಗೆ ಸಿಕ್ತಾ ಇದೆ.

ಇವೆರಡರ ಜೊತೆಗೆ ಅಕ್ಟೋಬರ್ 23ರಂದೇ ಪ್ರಭಾಸ್ ಹುಟ್ಟುಹಬ್ಬದ ದಿನವೇ ಡಾರ್ಲಿಂಗ್ ನಟನೆಯ ಚೊಚ್ಚಲ ಸಿನಿಮಾ 'ಈಶ್ವರ್' ತೆರೆಗೆ ಬರ್ತಾ ಇದೆ. 22 ವರ್ಷಗಳ ಬಳಿಕ ಈ ಸಿನಿಮಾ ರೀ ರಿಲೀಸ್ ಆಗ್ತಾ ಇದ್ದು, ಈಶ್ವರನ ಹೊಸ ರೂಪದಲ್ಲಿ ನೋಡೋದಕ್ಕೆ ಫ್ಯಾನ್ಸ್ ಸಜ್ಜಾಗ್ತಾ ಇದ್ದಾರೆ. 

'ನವಗ್ರಹ'ದ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಕಣ್ಣು ಬಿಟ್ಟಿದ್ಯಾಕೆ, ಸೀಕ್ರೆಟ್ ಗೊತ್ತಾದ್ರೆ ಶಾಕ್ ಗ್ಯಾರಂಟಿ!

ಬಹುಶಃ ಒಂದೇ ವಾರ ಒಬ್ಬ ನಟನ ಮೂರು ಮೂರು ಸಿನಿಮಾಗಳು ರೀ ರಿಲೀಸ್ ಆಗ್ತಾ ಇರೋದು ಇದೇ ಮೊದಲು ಅನ್ನಬಹುದು. ಸೋ ಡಾರ್ಲಿಂಗ್ ಫ್ಯಾನ್ಸ್ ಗೆ ಈ ಸಾರಿ ತ್ರಿಬಲ್ ಧಮಾಕಾ. ಸೋ ಪ್ರಭಾಸ್ ಹುಟ್ಟುಹಬ್ಬದ ದಿನ ಅಕ್ಷರಶಃ ಹಬ್ಬ ಮಾಡೋದಕ್ಕೆ ಫ್ಯಾನ್ಸ್ ರೆಡಿ ಆಗಿದ್ದಾರೆ.
 

click me!