ಮದ್ವೆಯಾಗೋದಾಗಿ ನಂಬಿಸಿ ಮೋಸ ಮಾಡಿದ ಹೃತಿಕ್​ ರೋಷನ್​ ಬಗ್ಗೆ ಕಂಗನಾ ರಣಾವತ್​ ಓಪನ್​ ಮಾತು!

Published : Mar 09, 2025, 01:37 PM ISTUpdated : Mar 09, 2025, 06:28 PM IST
ಮದ್ವೆಯಾಗೋದಾಗಿ ನಂಬಿಸಿ ಮೋಸ ಮಾಡಿದ ಹೃತಿಕ್​ ರೋಷನ್​ ಬಗ್ಗೆ ಕಂಗನಾ ರಣಾವತ್​ ಓಪನ್​ ಮಾತು!

ಸಾರಾಂಶ

ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ಹಳೆಯ ಪ್ರೇಮ ಸಂಬಂಧ ಮತ್ತು ಭಿನ್ನಾಭಿಪ್ರಾಯಗಳ ಬಗ್ಗೆ ವರದಿಯಾಗಿದೆ. ಕಂಗನಾ, ರಜತ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಹೃತಿಕ್ ತಮ್ಮನ್ನು ಹೇಗೆ ಮೋಸಗೊಳಿಸಿದರು ಎಂಬುದನ್ನು ವಿವರಿಸಿದ್ದಾರೆ. ಹೃತಿಕ್ ಮೊದಲು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ನಂತರ ವಿಮುಖರಾದರು ಎಂದು ಕಂಗನಾ ಆರೋಪಿಸಿದ್ದಾರೆ. ಈ ವಿಷಯವು 2015-16ರಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಕಂಗನಾ ರಣಾವತ್​ (Kangana Ranaut) ಅವರ ಕೊನೆಯ ಚಿತ್ರ ಎಂದೇ ಹೇಳಲಾಗುತ್ತಿರುವ ಎಮರ್ಜೆನ್ಸಿ ಕೈಹಿಡಿಯಲಿಲ್ಲ. ಆದರೆ ಸಂಸದೆಯಾಗಿ ಸದ್ಯ ಮಾತುಗಳಿಂದಲೇ ಸದ್ದು ಮಾಡುತ್ತಿದ್ದಾರೆ ನಟಿ. ಕಳೆದ ತಿಂಗಳು ಮನಾಲಿಯಲ್ಲಿ ತಮ್ಮ ಬಾಲ್ಯದ ಕನಸಾಗಿರುವ ಕೆಫೆ ತೆರೆದು ಅದರಲ್ಲಿ ಬಿಜಿಯಾಗಿದ್ದಾರೆ. ವಯಸ್ಸು 38 ಆದರೂ ಇನ್ನೂ ಅವಿವಾಹಿತೆಯೇ ಆಗಿರುವ ಕಂಗನಾ ಅವರ ಹೆಸರು ಇದಾಗಲೇ ಕೆಲವು ನಟರ ಜೊತೆ ಥಳಕು ಹಾಕಿಕೊಂಡಿದ್ದರೂ. ಅವರ  ನಟ ಹೃತಿಕ್​ ರೋಷನ್​ ಅವರ ನಡುವಿನ ಲವ್​ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್​ ರೋಷನ್​ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್​ ರೋಷನ್​ (Hrithik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್​ ರೋಷನ್​ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​  ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ  ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.  

ಇದೀಗ ನಟಿ ಕಂಗನಾ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಅದರಲ್ಲಿ ಹೃತಿಕ್​ ರೋಷನ್​ ತಮಗೆ ಹೇಗೆ ಮೋಸ ಮಾಡಿದ್ದರು ಎನ್ನುವುದನ್ನು ಅವರು ಹೇಳಿದ್ದಾರೆ. ರಜತ್​ ಶರ್ಮಾ ಅವರ ಷೋನಲ್ಲಿ ಬಂದ ಸಂದರ್ಭದಲ್ಲಿ ಕಂಗನಾ ನೀಡಿದ್ದ ಹೇಳಿಕೆ ಇದು. ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಅಂದು ಪ್ರೇಮಿಗಳ ದಿನವಾಗಿತ್ತು. ಶೂಟಿಂಗ್​ ನಡೆಯುತ್ತಿತ್ತು. ಆದರೆ ಹೃತಿಕ್​ ನನಗೆ ವಿಷ್​ ಮಾಡಲಿಲ್ಲ. ನಾನು ಫೋನ್​ ಮಾಡಿ ಕೇಳಿದಾಗ, ನಿನಗೆ ಯಾಕೆ ಮಾಡಬೇಕು ಎಂದು ಕೇಳಿದ. ಅದಕ್ಕೆ ಅಚ್ಚರಿಗೊಂಡ ನಾನು, ಇದೇನು ಹೀಗೆ ಹೇಳ್ತಾ ಇದ್ದಿಯಾ? ನಾನು ನಿನ್ನನ್ನು ಮದುವೆಯಾಗುವವಳು, ನಿನ್ನ ಪ್ರೇಯಸಿ ಎಂದೆ. ಅದಕ್ಕೆ ಆತ ಮದ್ವೆನಾ ಎಂದು ರಾಗ ಎಳೆಯುತ್ತಲೇ, ಇದನ್ನು ನೀನು ಎಲ್ಲೆಡೆ ಡಂಗುರ ಸಾರಿಲ್ವಲ್ಲಾ ಮತ್ತೆ ಎಂದು ಪ್ರಶ್ನಿಸಿದ. ಅದಕ್ಕೆ ನಾನು, ಇದು ನಮ್ಮಿಬ್ಬರ ವಿಷ್ಯ. ಪಬ್ಲಿಕ್​ ಮಾಡುವುದು ಯಾಕೆ? ಇದೇನು ಈ ರೀತಿ ಕೇಳ್ತಾ ಇದ್ದಿಯಾ? ನಿನ್ನನ್ನೇ ಮದ್ವೆಯಾಗೋದು ಎಂದು ನನ್ನ ಅಪ್ಪ-ಅಮ್ಮ ಕುಟುಂಬದವರಿಗೆ ಎಲ್ಲರಿಗೂ ಹೇಳಿಬಿಟ್ಟಿದ್ದೇನೆ, ಅದ್ರೆ ಪಬ್ಲಿಸಿಟಿ ಏನೂ ಮಾಡಿಲ್ಲ ಎಂದೆ' ಎನ್ನುತ್ತಲೇ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ಕಂಗನಾ.

ತುಂಡುಡುಗೆ ತೊಟ್ಟು ಮೆಟ್ಟಿಲಿನಿಂದ ಜಾರಿಬಿದ್ದ ಕಂಗನಾ- ಸೊಂಟಕ್ಕೇನಾಯ್ತು? ವೈರಲ್​ ವಿಡಿಯೋಗೆ ಫ್ಯಾನ್ಸ್​ ಶಾಕ್​!

'ನಾನು ಇಷ್ಟು ಹೇಳುತ್ತಿದ್ದಂತೆಯೇ ಆತ ನನ್ನ ನಿನ್ನ ನಡುವೆ ಏನೂ ಇಲ್ಲ. ನನ್ನನ್ನು ನೀನು ಮರೆತುಬಿಡು ಎಂದ. ಮತ್ತೆ ನನಗಾಗಿ ಡಿವೋರ್ಸ್​ ಕೊಡುವುದಾಗಿ ಹೇಳಿದ್ದೆಯಲ್ಲಾ ಎಂದು ಪ್ರಶ್ನಿಸಿದೆ. ಅದಕ್ಕೆ ಆತನ ಬಳಿಯಿಂದ ಉತ್ತರ ಬರಲಿಲ್ಲ. ಅಲ್ಲಿಗೇ ನಾನು ಸುಮ್ಮನಾಗಿಬಿಟ್ಟೆ. ಅದಾದ ಎರಡೇ ವಾರದಲ್ಲಿ ಈ ಪುಣ್ಯಾತ್ಮ ಮತ್ತೆ ವಾಪಸ್​ ಬಂದ! ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನೀನು ತುಂಬಾ ಚೆನ್ನಾಗಿ ವರ್ಕ್​ ಮಾಡುತ್ತಿದ್ದಿಯಾ ಎಂದೆಲ್ಲಾ ಹೇಳುವ ಮೂಲಕ ಮತ್ತೆ ಒಂದಾಗಲು ಬಂದ...' ಎನ್ನುತ್ತಲೇ ಪದೇ ಪದೇ ಹೃತಿಕ್​ ರೋಷನ್​ ವಿಚಿತ್ರ ರೀತಿ ಆಡುತ್ತಿದ್ದ ಬಗ್ಗೆ ಕಂಗನಾ ತೆರೆದಿಟ್ಟಿದ್ದಾರೆ. ಅಷ್ಟಕ್ಕೂ,  ಈ ಹಿಂದೆ ಹೃತಿಕ್​ ರೋಷನ್​ ಕಂಗನಾ ವಿರುದ್ಧವೇ ಆರೋಪ ಮಾಡಿದ್ದರು. ಆಕೆಯೇ ತಮ್ಮನ್ನು ಪ್ರೀತಿಸುತ್ತಿದ್ದಳು. ನನ್ನ  ವಿಚ್ಛೇದನ ಕೊಡಿಸಲೂ ರೆಡಿಯಾಗಿದ್ದಳು' ಎಂದಿದ್ದರು.  

ಈ ಬಾಲಿವುಡ್‌ ಸ್ಟಾರ್‌ಗಳ ಜಗಳ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.  ಇದು ಸುಮಾರು 2015-16ರ ನಡುವೆ ನಡೆದಿರುವ ಘಟನೆ. ಇದಾದ ಬಳಿಕವೂ ಇಬ್ಬರ ನಡುವಿನ ಮುಸುಕಿನ ಗುದ್ದಾಟವು ಮುಂದುವರೆದೇ ಇತ್ತು. ಕಂಗನಾ ಅವರಿಂದ ತಮಗೆ ನೂರಾರು ಈ-ಮೇಲ್‌ಗಳು ಬಂದಿವೆ ಎಂದು ಹೃತಿಕ್‌ 2016ರಲ್ಲಿ ಆರೋಪಿಸಿ  ಸೈಬರ್‌ ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದರು. ಅದಾದ ಬಳಿಕ ತಾವೇ ಖುದ್ದು ಕಂಗನಾ ಬಳಿ ಬಂದು ಪ್ರೀತಿಮಾಡುವುದಾಗಿ, ಮದುವೆಯಾಗುವುದಾಗಿ ಹೇಳಿದ್ದರು ಎನ್ನಲಾಗಿದೆ. 

ಒಲೆ ಮೇಲಿಟ್ಟ ಹಾಲು ಉಕ್ಕುವ ಫಜೀತಿ: ನಟಿ ಕಂಗನಾ ರಣಾವತ್​ ಅನುಭವ ಕೇಳಿ! ನಿಮಗೂ ಹೀಗಾಗಿದ್ಯಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?