ಬಟ್ಟೆ ಸರಿಪಡಿಸುವಾಗ ಫೋಟೋ ತೆಗೆದ್ರು; ವೇದಿಕೆಯಲ್ಲೇ ಚಳಿ ಬಿಡಿಸಿದ ವಿನಯ್‌ ರಾಜ್‌ಕುಮಾರ್‌ ಸಿನಿಮಾ ಹೀರೋಯಿನ್

Published : Mar 09, 2025, 12:27 PM ISTUpdated : Mar 09, 2025, 12:38 PM IST
ಬಟ್ಟೆ ಸರಿಪಡಿಸುವಾಗ ಫೋಟೋ ತೆಗೆದ್ರು; ವೇದಿಕೆಯಲ್ಲೇ ಚಳಿ ಬಿಡಿಸಿದ ವಿನಯ್‌ ರಾಜ್‌ಕುಮಾರ್‌ ಸಿನಿಮಾ ಹೀರೋಯಿನ್

ಸಾರಾಂಶ

ಸುದ್ದಿಗೋಷ್ಠಿಯೊಂದರಲ್ಲಿ ಹೀರೋಯಿನ್‌ ಬಟ್ಟೆ ಸರಿಪಡಿಸಿಕೊಳ್ತಿದ್ದರು. ಆಗ ಓರ್ವ ವ್ಯಕ್ತಿ ಫೋಟೋ ತೆಗೆಸಿಕೊಂಡಿದ್ದಾರೆ. ಆ ವ್ಯಕ್ತಿಗೆ ನಟಿ ರುಕ್ಷಾರ್‌ ಡಿಲ್ಲೋನ್‌ ಅವರು ಗ್ರಹಚಾರ ಬಿಡಿಸಿದ್ದಾರೆ. 

ತೆಲುಗಿನ ನಟ ಕಿರಣ್ ಅಬ್ಬವರಂ ನಟನೆಯ ದಿಲ್ರುಬಾ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಗಿತ್ತು. ಈ ಟ್ರೇಲರ್‌ ರಿಲೀಸ್‌ ವೇಳೆ ರುಕ್ಷಾರ್‌ ಡಿಲ್ಲೋನ್‌ ಅವರು ಡ್ರೆಸ್‌ ಸರಿಮಾಡಿಕೊಳ್ಳುತ್ತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೋರ್ವರು ಫೋಟೋ ತೆಗೆದಿದ್ದಾರೆ. ಇದು ರುಕ್ಷಾರ್‌ ಸಿಟ್ಟಿಗೆ ಕಾರಣವಾಗಿದೆ. ವೇದಿಕೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಾಗ ರುಕ್ಷಾರ್‌ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಈ ರೀತಿ ಫೋಟೋ ತೆಗೆಯೋದು ಸರಿಯೇ?

"ಡ್ರೆಸ್‌ ಸರಿ ಮಾಡಿಕೊಳ್ಳುವಾಗ ಫೋಟೋ ತೆಗೆಯುತ್ತೀರಿ. ಅನ್‌ಕಂಫರ್ಟ್‌ಆಗಿರುವಾಗ, ಡ್ರೆಸ್‌ ಸರಿಮಾಡಿಕೊಳ್ಳುವಾಗ ಫೋಟೋ ತೆಗೆಯೋದು ಸರಿಯೇ? ನಾವು ಗ್ರೂಪ್‌ ಫೋಟೋ ತೆಗೆಯುವಾಗ ಏನಾಯ್ತು? ನಾನು ಗೌರವದಿಂದ ಹೇಳುತ್ತಿದ್ದೇನೆ. ಈ ರೀತಿ ಮಾಡಬೇಡಿ” ಎಂದು ನಟಿ ರುಕ್ಷಾರ್ ಡಿಲ್ಲೋನ್ ಅವರು ಹೇಳಿದ್ದಾರೆ.

ಕಪಾಳ ಮೋಕ್ಷ ಮಾಡಿದ ನಟಿ ರಾಗಿಣಿ ದ್ವಿವೇದಿ; ಯಾಕೆ? ಏನಾಯ್ತು?

ನಾನು ಆ ಹೆಸರು ಇಲ್ಲಿ ಹೇಳಲ್ಲ
“ಇಲ್ಲಿ ಎಷ್ಟು ಮಹಿಳೆಯರು ಇದ್ದೀರಾ? ಕೈ ಎತ್ತುತ್ತೀರಾ? ಯಾರಾದರೂ ನೀವು ಅನ್‌ಕಂಫರ್ಟ್‌ ಆಗಿರುವಾಗ ಫೋಟೋ ತೆಗೆದರೆ ಸುಮ್ಮನೆ ಇರುತ್ತೀರಾ? ಇದು ನಿಮಗೆ ಓಕೆನಾ? ಇಲ್ಲ ಅಲ್ವಾ? ನಾನು ಗೌರವ, ಪ್ರೀತಿಯಿಂದ ಫೋಟೋ ತೆಗೆಯಬೇಡಿ ಅಂತ ಹೇಳಿದರೂ ಕೂಡ ಫೋಟೋ ತೆಗೆದರು. ಅವರ ಹೆಸರನ್ನು ನಾನು ಇಲ್ಲಿ ಹೇಳೋದಿಲ್ಲ. ಈ ಸಂದೇಶ ಯಾರಿಗೆ ಸಲ್ಲಬೇಕೋ ಅವರಿಗೆ ಸಲ್ಲಿದೆ ಎಂದು ನಾನು ಭಾವಿಸುವೆ, ಅಷ್ಟೇ ಸಾಕು” ಎಂದು ಅವರು ಹೇಳಿದ್ದಾರೆ. 

ಆ ವ್ಯಕ್ತಿ ಯಾರು?
ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವ ಓರ್ವ ವ್ಯಕ್ತಿ ಈ ರೀತಿ ಫೋಟೋಗಳನ್ನು ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು ಎನ್ನಲಾಗಿದೆ. ಈ ವ್ಯಕ್ತಿಯ ಬಗ್ಗೆ ರುಕ್ಷಾರ್‌ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಣ್ಣಾವ್ರು ಬೇರೆಯವ್ರ ಸಿನಿಮಾ ನೋಡ್ತಿದ್ರಾ?.. ಯಾರ ಸಿನಿಮಾನ ಯಾಕೆ ನೋಡ್ತಾ ಇದ್ರು? ಗುಟ್ಟು ರಟ್ಟಾಯ್ತು...!

ಸಿನಿಮಾಗಳಲ್ಲಿ ನಟನೆ

ರುಕ್ಷಾರ್‌ ಅವರು 2016ರಲ್ಲಿ ತೆರೆ ಕಂಡಿದ್ದ ʼರನ್‌ ಆಂಟನಿʼ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಾನಿ ನಟನೆಯ ʼಕೃಷ್ಣಾರ್ಜುನ ಯುದ್ಧಂʼ ಸಿನಿಮಾ ಮೂಲಕ ಅವರು ಇನ್ನಷ್ಟು ಖ್ಯಾತಿ ಪಡೆದರು. ʼಭಾಂಗ್ರಾ ಪಾ ಲೆʼ ಎನ್ನುವ ಹಿಂದಿ ಸಿನಿಮಾ, ಪಂಜಾಬಿ ಭಾಷೆಯ ʼತುಫಾಂಗ್ʼ‌ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. 

ʼಜುಗಾಡಿಸ್ತಾನ್ʼ‌ ಹಾಗೂ ʼಲಯನ್ಸ್‌ಗೇಟ್‌ ಇಂಡಿಯಾʼ ಎನ್ನುವ ವೆಬ್‌ಸಿರೀಸ್‌ನಲ್ಲಿಯೂ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ನಾಗಾರ್ಜುನ ಅವರ ʼನಾ ಸಾಮಿ ರಂಗʼ ಚಿತ್ರದಲ್ಲಿಯೂ ಅವರು ಬಣ್ಣ ಹಚ್ಚಿದ್ದರು. ರುಕ್ಷಾರ್‌ ನಟನೆಯ ʼದಿಲ್‌ರುಬಾʼ ಸಿನಿಮಾ ಮಾರ್ಚ್‌ 14ರಂದು ರಿಲೀಸ್‌ ಆಗಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!