ದುಲ್ಕರ್ ಸಲ್ಮಾನ್‌ಗೆ ಈ ನಟಿಯೊಂದಿಗೆ ಮತ್ತೊಮ್ಮೆ ನಟಿಸುವ ಆಸೆ! ಅಭಿಮಾನಿಗಳ ಮಹದಾಸೆಯೂ ಇದೇ!

Published : Mar 09, 2025, 01:20 PM ISTUpdated : Mar 09, 2025, 01:31 PM IST
ದುಲ್ಕರ್ ಸಲ್ಮಾನ್‌ಗೆ ಈ ನಟಿಯೊಂದಿಗೆ ಮತ್ತೊಮ್ಮೆ ನಟಿಸುವ ಆಸೆ! ಅಭಿಮಾನಿಗಳ ಮಹದಾಸೆಯೂ ಇದೇ!

ಸಾರಾಂಶ

Dulquer Salmaan: ದುಲ್ಕರ್ ಸಲ್ಮಾನ್ ಮತ್ತೊಮ್ಮೆ ಈ ನಟಿಯೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಸಹ ಈ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಬಯಸುತ್ತಿದ್ದಾರೆ.

ಬೆಂಗಳೂರು: ಅಭಿಮಾನಿಗಳಿಂದ DQ ಎಂದು ಕರೆಸಿಕೊಳ್ಳುವ ದುಲ್ಕರ್ ಸಲ್ಮಾನ್ (Actor Dulquer Salman) ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಮಲಯಾಳಂ ಸಿನಿಮಾ (Malayalam Cinema) ಮೂಲಕ ವೃತ್ತಿ ಜೀವನ ಆರಂಭಿಸಿದ ಡಿಕ್ಯೂ, ಇಂದು ಭಾರತದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ಮಲಯಾಳಂ ಹಿರಿಯ ನಟನ ಮುಮ್ಮಟಿ ಅವರ ಪುತ್ರನಾಗಿರುವ ದುಲ್ಕರ್ ಸಲ್ಮಾನ್ ಸಂದರ್ಶನದಲ್ಲಿ ನಿಮಗೆ ಮತ್ತೊಮ್ಮೆ ಯಾವ ನಟಿ (Actress) ಜೊತೆ ಕೆಲಸ ಮಾಡಬೇಕು ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ್ದ ದುಲ್ಕರ್ ಸಲ್ಮಾನ್ ಇದು ಜನರ ಆಸೆ ಸಹ ಎಂದು ಹೇಳಿದ್ದರು. 

ಲಕ್ಕಿ ಭಾಸ್ಕರ್ ಸಿನಿಮಾ ದುಲ್ಕರ್ ಸಲ್ಮಾನ್ ಅವರ ಬಿಡುಗಡೆಗೊಂಡ ಇತ್ತೀಚಿನ ಸಿನಿಮಾ. ಮೂಲ ತೆಲಗು ಭಾಷೆಯಲ್ಲಿ ಬಿಡುಗಡೆಯಾದ್ರೂ ದೇಶ-ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಂಡಿತ್ತು. ಕಳೆದ ಏಳೆಂಟು ವರ್ಷಗಳಿಂದ ದುಲ್ಕರ್ ಸಲ್ಮಾನ್ ಹಿಟ್ ಸಿನಿಮಾ ನೀಡುವ ಮೂಲಕ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.  2012ರಲ್ಲಿ ಬಿಡುಗಡೆಯಾದ 'ಸೆಕೆಂಡ್ ಶೋ' ಸಿನಿಮಾ ಮೂಲಕ ದುಲ್ಕರ್‌ ಸಲ್ಮಾನ್ ತಮ್ಮ ವೃತ್ತಿ ಜೀವನ ಆರಂಭಿಸಿದರು. ಇದಾದ ಬಳಿಕ ಉಸ್ತಾದ್ ಹೋಟೆಲ್, ಎಬಿಸಿಡಿ, ಬೆಂಗಳೂರು ಡೇಸ್, ವಿಕ್ರಮಾದಿತ್ಯ, ಕುರುಪ್, ಮಹಾನಟಿ,ಕ ಸೀತಾ ರಾಮಮ್ ಮತ್ತು ಲಕ್ಕಿ ಭಾಸ್ಕರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಬೆಂಗಳೂರು ಡೇಸ್ ಸಿನಿಮಾ ಮೂಲಕ ಕನ್ನಡಿಗರ ಜೊತೆ ಯುವ ಮನಸ್ಸುಗಳಿಗೆ ದುಲ್ಕರ್ ಸಲ್ಮಾನ್ ಹತ್ತಿರವಾದರು. ಮಹಾನಟಿ, ಕುರುಪ್, ಸೀತಾ ರಾಮಮ್ ಮತ್ತು ಲಕ್ಕಿ ಭಾಸ್ಕರ್ ಸಿನಿಮಾಗಳಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಲವು ನಟಿಯರೊಂದಿಗೆ ಸಿನಿಮಾ ಮಾಡಿರುವ ದುಲ್ಕರ್ ಸಲ್ಮಾನ್ ಮತ್ತೊಮ್ಮೆ ಕೆಲಸ ಮಾಡಲ ಇಷ್ಟಪಡುವ ಕಲಾವಿದೆ ಯಾರು ಎಂಬುದನ್ನು ಹೇಳಿದ್ದರು. 

ಇದನ್ನೂ ಓದಿ: ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

90ರ ದಶಕದ ಲುಕ್‌ನಲ್ಲಿ ಮೋಡಿ ಮಾಡಿದ್ದ ಜೋಡಿ
2022ರಲ್ಲಿ ಬಿಡುಗಡೆಯಾದ ಸೀತಾ ರಾಮಮ್ ಸಿನಿಮಾ ದುಲ್ಕರ್ ಸಲ್ಮಾನ್ ಸಿನಿ ಕೆರಿಯರ್‌ನ್ ಅತ್ಯುನ್ನತ ಚಿತ್ರವಾಗುತ್ತದೆ. ಈ ಚಿತ್ರದಲ್ಲಿ ನಟಿಯಾಗಿ ಮೃಣಾಲ್ ಠಾಕೂರ್ ( Actress Mrunal Thakur) ಮತ್ತು ಪೋಷಕ ನಟಿಯಾಗಿ ರಶ್ಮಿಕಾ ಮಂದಣ್ಣ ( Actress Rashmika Mandanna) ನಟಿಸಿದ್ದರು. ಈ ಸಿನಿಮಾದ ಹಾಡುಗಳು, ಬಿಜಿಎಂ ಮತ್ತು ಕಥೆ ನೋಡುಗರನ್ನು ಪದೇ ಪದೇ ಚಿತ್ರಮಂದಿರಕ್ಕೆ ಬರುವಂತೆ ಮಾಡಿತ್ತು.  90ರ ದಶಕದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಇಂದಿಗೂ ಇಬ್ಬರ ಫೋಟೋ ಮತ್ತು ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಹಲವು ವರ್ಷಗಳಿಂದ ಸಕ್ಸಸ್‌ ಆಗಿ ಕಾಯುತ್ತಿದ್ದ ಮೃಣಾಲ್ ಠಾಕೂರ್‌ಗೆ 'ಸೀತಾ ರಾಮಮ್' ಹೊಸ ಪರಿಚಯ ನೀಡಿತ್ತು. 

ಸಂದರ್ಶನವೊಂದರಲ್ಲಿ ಮಾತನಾಡಿದ್ದ ದುಲ್ಕರ್ ಸಲ್ಮಾನ್, ನಾನು ಮತ್ತೊಮ್ಮೆ ನಟಿ ಮೃಣಾಳ್ ಠಾಕೂರ್ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಇದಕ್ಕೆ ಕಾರಣ ಸೀತಾ ರಾಮಮ್ ಸಿನಿಮಾ. ತೆರೆ ಮೇಲೆ ನಮ್ಮಿಬ್ಬರ ಜೋಡಿಯನ್ನು ನೋಡುಗರು ಮೆಚ್ಚುಕೊಂಡಿದ್ದಾರೆ. ಅಭಿಮಾನಿಗಳಿಗೂ ನಾವಿಬ್ಬರು ಜೊತೆಯಾಗಿ ಕೆಲಸ ಮಾಡಬೇಕೆಂದು ಆಸೆ. ಭವಿಷ್ಯದಲ್ಲಿ ಇಂತಹ ಅವಕಾಶ ಬಂದ್ರೆ ಮತ್ತೊಮ್ಮೆ ಮೃಣಾಲ್ ಅವರೊಂದಿಗೆ ನಟಿಸುತ್ತೇನೆ ಎಂದು ಹೇಳಿದ್ದಾರೆ. ಅಭಿಮಾನಿಗಳು ಇಬ್ಬರ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಇದನ್ನೂ ಓದಿ: ದುಲ್ಕರ್ ಸಲ್ಮಾನ್ Birthday: ಮಲಯಾಳಂ ಸೂಪರ್‌ಸ್ಟಾರ್ ಬಗ್ಗೆ ನಿಮಗೆಷ್ಷು ಗೊತ್ತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!