ನಟಿ, ಸಂಸದೆ ಕಂಗನಾ ಮದ್ವೆಯಾವಾಗ? ಈ ಪ್ರಶ್ನೆಗೆ ಖುದ್ದು ನಟಿ ಹೇಳಿದ್ದೇನು? ಜೊತೆಗೆ ಮದುವೆ ಆಕಾಂಕ್ಷಿಗಳಿಗೆ ಏನು ಟಿಪ್ಸ್ ಕೊಟ್ಟಿದ್ದಾರೆ ನೋಡಿ...
ನಟಿ, ಸಂಸದೆ ಕಂಗನಾ ರಣಾವತ್ ಸದ್ಯ ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿಯಲ್ಲಿ ಬಿಜಿಯಿದ್ದಾರೆ. ಇದರ ಜೊತೆಜೊತೆಗೇ ರಾಜಕೀಯದಲ್ಲಿಯೂ ಸಕತ್ ಬಿಜಿ ಇದ್ದು, ದಿನಕ್ಕೊಂದು ಸ್ಟೇಟ್‌ಮೆಂಟ್ ಕೊಡುತ್ತಲೇ ವಿವಾದವನ್ನೂ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದ್ದದ್ದನ್ನು ಇದ್ದ ಹಾಗೆ ತಮಗೆ ಅನ್ನಿಸಿದ್ದನ್ನು ನೇರಾನೇರ ಹೇಳುವ ಮೂಲಕ ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರಾಗಿರುವ ಕಂಗನಾ ಅವರಿಗೆ ಈಗ 38 ವರ್ಷ ವಯಸ್ಸು. ಇದಾಗಲೇ ನಟ ಹೃತಿಕ್ ರೋಷನ್ ಸೇರಿದಂತೆ ಕೆಲವು ನಟರ ಜೊತೆ ಇವರ ಹೆಸರು ಥಳಕು ಹಾಕಿದ್ದರೂ, ನಟಿ ಅವಿವಾಹಿತೆಯಾಗಿಯೇ ಇದ್ದಾರೆ. ಹಾಗಂತ ಅವರು ಸದಾ ಹಾಗೆಯೇ ಇರ್ತಾರಂತ ಅರ್ಥವಲ್ಲ. ತಮ್ಮ ಮದುವೆಯ ಕುರಿತು ನಟಿ ಬಹಿರಂಗವಾಗಿ ಮಾತನಾಡಿದ್ದು, ಇದೇ ವೇಳೆ ಅವಿವಾಹಿತರಿಗೂ ಕೆಲವು ಟಿಪ್ಸ್ ಕೊಟ್ಟಿದ್ದಾರೆ.
ರಾಜ್ ಶಮಾನಿ ಅವರು ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಕಂಗನಾ ಅವರಿಗೆ ಮದುವೆಯ ಬಗ್ಗೆ ಕೇಳಲಾಯಿತು. ಆಗ ಅವರು, ನೋಡಿ, ನಾನು ಮದುವೆಯಾಗುವುದಿಲ್ಲ ಎಂದು ಅರ್ಥವಲ್ಲ, ಇಂದಲ್ಲ ನಾಳೆ ಮದ್ವೆಯಾಗುತ್ತೇನೆ. ಆದರೆ ಯಾರೇ ಆಗಲಿ, ಸಂಗಾತಿ ಹುಡುಕಾಟಕ್ಕೆ ಒದ್ದಾಡಬೇಡಿ, ನೈಸರ್ಗಿಕವಾಗಿಯೇ ಜೋಡಿ ಆಗುವುದು ಉತ್ತಮ ಎಂದು ಟಿಪ್ಸ್ ಕೊಟ್ಟಿದ್ದಾರೆ. ನನಗೂ ಮದ್ವೆಯಾಗುವ ಆಸೆ ಇದೆಯಪ್ಪಾ, ಯಾಕೆ ನಾನು ಮದ್ವೆ ಆಗಬಾರದೇ ಎಂದು ಪ್ರಶ್ನಿಸಿರುವ ನಟಿ, ಮದುವೆಗೆ ಸರಿಯಾದ ಸಂಗಾತಿಯ ಆಯ್ಕೆ ದೊಡ್ಡ ಕಸರತ್ತಾಗಿದೆ ಎನ್ನುತ್ತಲೇ ಸರಿಯಾದ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಹುಡುಕುವ ಅಗತ್ಯವಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟರು.
ಈ ದೇಶದಿಂದ ದ್ವೇಷ ಬಿಟ್ಟು ಏನೂ ಸಿಕ್ಕಿಲ್ಲ... ಇಂದಿರಾ ಕಣ್ಣೀರು... ಕಂಗನಾ 'ಎಮರ್ಜೆನ್ಸಿ' ಟ್ರೇಲರ್ನಲ್ಲಿ ಏನಿದೆ?
ಎಲ್ಲರಿಗೂ ಸಂಗಾತಿ ಇರಬೇಕು. ಸಂಗಾತಿ ಇಲ್ಲದೆ ಬದುಕೋದು ಕಷ್ಟ. ಆದರೆ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲು ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಒಳ್ಳೆಯದು ಎನ್ನುವ ಸಲಹೆ ಕೂಡ ಕೊಟ್ಟಿದ್ದಾರೆ. ನೀವು ವಯಸ್ಸಾದಂತೆ, ಪರಸ್ಪರ ಹೊಂದಿಕೊಳ್ಳಲು ನಿಮಗೆ ಹೆಚ್ಚು ಕಷ್ಟವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಹೊಂದಿಕೊಳ್ಳೋದು ಅದು ತುಂಬಾ ಸುಲಭ. ಹಳ್ಳಿಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ ನಿಮ್ಮ ಉತ್ಸಾಹವು ತುಂಬಾ ತೀವ್ರವಾಗಿರುತ್ತದೆ. ನನ್ನ ಮದುವೆ ವಿಳಂಬವಾಗುತ್ತಿರುವ ಕುರಿತು ಎಲ್ಲ ಭಾರತೀಯ ಅಪ್ಪ-ಅಮ್ಮಂದಿರಂತೆ ನನ್ನ ಅಪ್ಪ-ಅಮ್ಮನೂ ತಾಯಿಯೂ ಆತಂಕಗೊಂಡಿದ್ದಾರೆ. ಇಂದಲ್ಲಾ ನಾಳೆ ಮದುವೆಯಾಗುವೆ ಎಂದಿದ್ದಾರೆ.
ಇನ್ನು ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ. ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿ ( National Emergency) ಕರಾಳ ಮುಖವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟಿ ಹೇಳಿದ್ದಾರೆ. 21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದಿರುವ ನಟಿ, ತಮ್ಮ ಈ ಚಿತ್ರವನ್ನು ವೀಕ್ಷಿಸಿ, ನಮ್ಮ ಇತಿಹಾಸವನ್ನು ತಿಳಿದುಕೊಳ್ಳಿ ಎಂದಿದ್ದಾರೆ.
ಮುಸ್ಲಿಂ ಟೋಪಿ, ಕ್ರೈಸ್ತರ ಕ್ರಾಸ್, ಹಿಂದೂಗಳ ತಿಲಕ... ಬೇಕಿತ್ತಾ ಕಂಗನಾಗೆ ಇದೆಲ್ಲಾ! ಈಗೇನಾಯ್ತು ನೋಡಿ...