'ಆತ ಗಂಡಸೇ ಅಲ್ಲ, ಒಂದೇ ಹಾಸಿಗೆಯಲ್ಲಿ ಮಲಗಿದ್ದರೂ......'; ನಟ ತರುಣ್ ವಿರುದ್ಧ ತಿರುಗಿಬಿದ್ದ ಅಪರಿಚಿತ ಯುವತಿ

Published : Aug 20, 2024, 03:33 PM IST
'ಆತ ಗಂಡಸೇ ಅಲ್ಲ, ಒಂದೇ ಹಾಸಿಗೆಯಲ್ಲಿ ಮಲಗಿದ್ದರೂ......'; ನಟ ತರುಣ್ ವಿರುದ್ಧ ತಿರುಗಿಬಿದ್ದ ಅಪರಿಚಿತ ಯುವತಿ

ಸಾರಾಂಶ

ಲಾವಣ್ಯಾ ದೂರುಗಳಿಗೆ ಮಸಾಲ ಹಾಕಿದ ಅಪರಿಚಿತ ಯುವತಿ. ಆತ ಗಂಡಸೇ ಅಲ್ಲ ಎಂದುಬಿಟ್ಟ ಸುಂದರಿ.....

ತೆಲುಗು ನಟ ರಾಜ್ ತರುಣ್ ಮತ್ತು ಲಾವಣ್ಯಾ ಕಾಂಟ್ರವರ್ಸಿ ಈಗಾಗಲೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ತರುಣ್ ಮತ್ತು ಲಾವಣ್ಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು, ಈ ಜೋಡಿಗೆ ಈಗಾಗಲೆ ಒಂದು ಮಗು ಇದು. ಲೈಫಲ್ಲಿ ಸೆಟಲ್ ಆಗಬೇಕು ಅನ್ನೋ ಆಲೋಚನೆಯಲ್ಲಿ ಇರುವ ಲಾವಣ್ಯಾ ಮದುವೆ ಪ್ರಸ್ತಾಪ ಮಾಡಿದ್ದಾರೆ, ಈ ಸಮಯದಲ್ಲಿ ರಾಜ್‌ಗೆ ಮತ್ತೊರ್ವ ಸ್ಟಾರ್ ನಟಿಗೆ ಸಂಬಂಧ ಇರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲಿಂದೆ ಒಂದೊಂದೆ ಸಾಕ್ಷಿ ಪಡೆದ ಲಾವಣ್ಯಾ ಪೊಲೀಸ್ ಠಾಣೆ ಮೆಟ್ಟಿಳೇರಿದ್ದಾರೆ.

ಹೌದು! ಲಾವಣ್ಯಾ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರ ನಡೆಸುತ್ತಿದ್ದಾರೆ. ಈ ನಡುವೆ ರಾಜ್‌ ತರುಣ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಾಜ್‌ ವಿರುದ್ಧ ಅಪರಿಚಿತ ಯುವ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 'ನನ್ನ ಹೆಸರು ಸಂಯುಕ್ತಾ ನಾನು ಕಳೆದ ಒಂದು ತಿಂಗಳಿನಿಂದ ಒಬ್ಬ ಸ್ಟಾರ್ ನಟನ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿರುವುದು ನೋಡುತ್ತಿರುವೆ, ಅವರ ಆಯ್ಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒಂದು ಸತ್ಯವನ್ನು ಹೇಳಬೇಕು ಎಂದು ವಿಡಿಯೋ ಮಾಡುತ್ತಿರುವೆ. ಏಕೆಂದರೆ ಆತ ಸಂಬಂಧ ಹೊಂದಿರುವ ಯುವತಿಯ ಸ್ನೇಹಿತೆ ನಾನು' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.

ಮೈಸೂರ್ ಸಿಲ್ಕ್‌ ಸೀರೆ ಧರಿಸಿದ ಗರ್ಭಿಣಿ ಹರ್ಷಿಕಾ ಪೂಣಚ್ಚ; ಪಕ್ಕಾ ರವಿವರ್ಮನ ಬೊಂಬೆ ಎಂದ ನೆಟ್ಟಿಗರು!

'ರಾಜ್ ತರುಣ್ ಮತ್ತು ಲಾವಣ್ಯಾ ಒಟ್ಟಿಗೆ ಇದ್ದರೂ ನೆಮ್ಮದಿಯಾಗಿಲ್ಲ ಆ ಮಗು ನನಗೆ ದಿನ ಫೋನ್ ಮಾಡಿ ಕಣ್ಣೀರಿಡುತ್ತದೆ. ಇಬ್ಬರೂ ಒಂದೇ ಹಾಸಿಗೆಯಲ್ಲಿ ಮಲಗುತ್ತಾರೆ ಆದರೆ ಅವನು ಒಂದು ದಿನಕ್ಕು ಆಕೆ ಒಂದು ದಿಕ್ಕಿನಲ್ಲಿ ಇರುತ್ತಾರೆ ಇನ್ನು ಪಾಪ ಪುಟ್ಟ ಮಗು ಸಮೀಪ ಬಂದರೂ ಆ ಮನುಷ್ಯ ದೂರ ಹೋಗುತ್ತಾನೆ. ಲಾವಣ್ಯಾಳನ್ನು 27 ವರ್ಷಕ್ಕೆ ಮದುವೆ ಆಗುತ್ತೀನಿ ಎಂದು ಹೇಳಿದ್ದ ಆದರೆ ಈಗ ಆಕೆಗೆ 35 ವರ್ಷ ಆಗಿದೆ ಆದರೂ ಮದುವೆ ಆಗಿಲ್ಲ. ಮನುಷ್ಯ ಎಷ್ಟು ಸುಂದರವಾಗಿದ್ದರೆ ಏನು ಸಿನಿಮಾಗಳಲ್ಲಿ ಹೀರೋತನ ತೋರಿಸಿಕೊಂಡರೆ ಏನು ನಿಜಕ್ಕೂ ಆತ ಶೂನ್ಯ. ಆತ ಗಂಡಸೇ ಅಲ್ಲ. ನನ್ನ ಸ್ನೇಹಿತೆ ಅಮೆರಿಕಾದಿಂದ ಬರುತ್ತಿದ್ದಾಳೆ ಎಲ್ಲಾ ಪ್ರೂಫ್‌ಗಳ ಜೊತೆ ನಿಮ್ಮ ಮುಂದೆ ಬರುತ್ತೀವಿ' ಎಂದು ಹೇಳಿದ್ದಾರೆ. 

ನಾಯಕ ತೊಟ್ಟಿದ್ದ ಟೋಪಿ 5 ಕೋಟಿಗೆ ಹರಾಜು; ಯಾರೋ ಬಕ್ರ ಗೋವಾದಲ್ಲಿ 200 ರೂ. ಟೋಪಿ ನೋಡಿಲ್ಲ ಅನ್ಸುತ್ತೆ ಎಂದ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?