ಬಾಲಿವುಡ್​ ತಾರೆಯರ ಮರ್ಯಾದೆ ಹೀಗೆ ತೆಗೆಯೋದಾ ಕಂಗನಾ? ಬಿದ್ದೂ ಬಿದ್ದೂ ನಕ್ಕ ಪ್ರೇಕ್ಷಕರು

By Suchethana D  |  First Published Oct 26, 2024, 12:48 PM IST

ಕಾಂಟ್ರವರ್ಸಿ ಕ್ವೀನ್​ ಕಂಗನಾ ರಣಾವತ್​ ರಜತ್​ ಶರ್ಮಾ ಷೋನಲ್ಲಿ ಬಾಲಿವುಡ್​ ನಟಿಯರ ಮರ್ಯಾದೆ ತೆಗೆದಿರುವ ವಿಡಿಯೋ ಪುನಃ ವೈರಲ್​ ಆಗಿದೆ.
 


ಕಾಂಟ್ರವರ್ಸಿ ಕ್ವೀನ್​ ಕಂಗನಾ ರಣಾವತ್​ ರಜತ್​ ಶರ್ಮಾ ಅವರ ಆಪ್​ ಕೆ ಅದಾಲತ್​ ಷೋನಲ್ಲಿ ಬಾಲಿವುಡ್​ ನಟಿಯರ ಮರ್ಯಾದೆ ತೆಗೆದಿರುವ ವಿಡಿಯೋ ಪುನಃ ವೈರಲ್​ ಆಗಿದೆ.ಬಾಲಿವುಡ್​ ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿದ್ದ ನಟಿ ಕಂಗನಾ ರಣಾವತ್​ ಈಗ ಲೋಕಸಭೆ ಪ್ರವೇಶಿಸಿದ್ದಾರೆ. ಇಲ್ಲಿಯೂ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸದ್ದು ಮಾಡುತ್ತಿರುತ್ತಾರೆ. ಮನಸ್ಸಿಗೆ ಬಂದದ್ದನ್ನು ಎಗ್ಗಿಲ್ಲದೇ ಒಂದೇ ಸಮನೆ ಹೇಳುವ ಮೂಲಕ ಹಲವಾರು ವಿವಾದಗಳ ಸುಳಿಗೆ ಸಿಲುಕಿರೋ ನಟಿ, ಸಂಸದೆಯ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ದಿ ರಜತ್​ ಶರ್ಮಾ ಷೋನಲ್ಲಿ ಬಾಲಿವುಡ್​ ತಾರೆಯರ ಅದರಲ್ಲಿಯೂ ಹೆಚ್ಚಾಗಿ ನಟಿಯರ ಮರ್ಯಾದೆ ತೆಗೆದಿದ್ದಾರೆ ಕಂಗನಾ ರಣಾವತ್​. ಹಳೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗಿದೆ. ನಟಿಯರು ಹೇಗೆ ನಾಟಕೀಯ ಬದುಕು ಬದುಕುತ್ತಿದ್ದಾರೆ, ವಯಸ್ಸಾದರೂ ಏನೂ ಮಾಡ್ತಾರೆ ಎನ್ನುವ ಬಗ್ಗೆ ಇವರು ಆಡಿರುವ ಮಾತುಗಳಿಗೆ ಷೋನಲ್ಲಿ ನೆರೆದಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಾ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಅಷ್ಟಕ್ಕೂ ಕಂಗನಾ ಹೇಳಿದ್ದೇನೆಂದ್ರೆ... ವಯಸ್ಸು ಎಷ್ಟೇ ಆಗ್ಲಿ, ಅದನ್ನು ಮರೆಮಾಚಲು ನಟಿಯರು ಬೋಟೆಕ್ಸ್​ ಆಪರೇಷನ್​ ಮಾಡಿಸಿಕೊಳ್ತಾರೆ. ಕೂದಲು ಹಿಂದೆ ಹಾರ್ತಾ ಇರೋ ಹಾಗೆ ನೋಡಿಕೊಳ್ತಾರೆ. ಅರೆ ಇದೆಲ್ಲಾ ಯಾಕೆ ಎನ್ನುತ್ತಲೇ,  ಸ್ವಲ್ಪನಾದ್ರೂ ನ್ಯಾಚುರಲ್​ ಆಗಿ. ಹೊರಗೆ ಬಿಸಿಲಿನಲ್ಲಿ ಅಡ್ಡಾಡಿ... ಎಸಿ ಕಾರಿನಿಂದ ಎಸಿ ಮನೆ, ಮನೆಯಿಂದ ಕಾರು... ಸ್ವಲ್ಪ ಹೊರಗೆ ಹೋಗಿ... ಜಗತ್ತು ಹೇಗಿದೆ ನೋಡಿ ಎಂದು ಟಾಂಗ್​ ಕೊಟ್ಟಿದ್ದಾರೆ.  ನಾಟಕೀಯವಾಗಿ ನಟಿಯರು ಮಾತನಾಡುವ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ  ಪ್ರೇಕ್ಷಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. 

ಇಷ್ಟಕ್ಕೇ ಸುಮ್ಮನಾಗದ ನಟಿ ವಯಸ್ಸು 35-40 ಆದ್ರೂ ಸ್ಟಾರ್​ ಕಿಡ್​ ಎಂದೇ ಹೇಳಿಕೊಳ್ತಾರೆ. ಅವರಿಗೆ ಸ್ವಂತ ಐಡೆಂಟಿಟಿನೇ ಇಲ್ಲ. ಕಿಡ್​ ಎನ್ನುತ್ತಲೇ ಮಕ್ಕಳ ಥರನೇ ಆಡುತ್ತಾರೆ. ನನಗೆ ಇದು ಬೇಕು, ಅದು ಬೇಕು ಎನ್ನುತ್ತಾ ಚಿಕ್ಕ ಮಕ್ಕಳ ರೀತಿ ಜನರ ಎದುರು ನಾಟಕವಾಡುತ್ತಾರೆ. ನಟರೂ ಹೀಗೆಯೇ ಮಾಡ್ತಾರೆ, ಇನ್ನು ನಟಿಯರಂತೂ ಕೇಳಲೇ ಬೇಡಿ. ನೆಪೋ ಕಿಡ್​ ಎನ್ನುತ್ತಲೇ ಮಕ್ಕಳ ರೀತಿ ಗುಲಾಬಿ ಬಣ್ಣದ ಗ್ಲಾಸ್​ ಹಿಡಿದು ಮಕ್ಕಳ ರೀತಿಯೇ ಏಗೆ ಮೂತಿ ಮಾಡುತ್ತಾರೆ ಎನ್ನುವುದನ್ನು ತೋರಿಸಿದ್ದಾರೆ ಕಂಗನಾ. 

Tap to resize

Latest Videos

undefined

ಹೋಟೆಲ್​ ಬಿಲ್​ ವಿಚಾರಕ್ಕೆ ಆರು ಮಂದಿ ಬಾಯ್​ಫ್ರೆಂಡ್​ ಜೊತೆ ಬ್ರೇಕಪ್​ ಮಾಡಿಕೊಂಡ್ರಾ ಶ್ರುತಿ ಹಾಸನ್​?


ಕೆಲ ದಿನಗಳ ಹಿಂದೆ ನಟಿ ರಾಜ್ ಶಾಮಣಿ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಬಾಲಿವುಡ್ ಮಂದಿಯ ಜೀವನ ಶೈಲಿ ಮತ್ತಿತರ ವಿಷಯಗಳ ಕುರಿತು ಅವರು ಮಾತನಾಡಿದ್ದರು. ನಿಮಗೆ ಬಾಲಿವುಡ್‌ನಲ್ಲಿ ಸ್ನೇಹಿತರಿದ್ದಾರೆಯೇ ಎಂಬ ಪ್ರಶ್ನೆಗೆ ನಟಿ, ಬಾಲಿವುಡ್​ ತಾರೆಯರು,  ಮೂರ್ಖರಲ್ಲಿ ಮೂರ್ಖರು. ಯಾವಾಗ್ಲೂ ಪ್ರೊಟೀನ್​ ಶೇಕ್​ಗಳ ಸುತ್ತನೇ ಸುತ್ತುತ್ತಾ ಇರ್ತಾರೆ. ಅದೇ ಅವರಿಗೆ ಜೀವನ. ಡ್ರಿಂಕ್ಸು, ಸೆಕ್ಸು ಬಿಟ್ರೆ ಬೇರೆ ಗೊತ್ತಿಲ್ಲ. ಶೂಟಿಂಗ್ ಇಲ್ಲದಿದ್ದರೆ, ಬೆಳಿಗ್ಗೆ ಎದ್ದು ವ್ಯಾಯಾಮ, ಮಧ್ಯಾಹ್ನ ಮಲಗುವುದು, ನಂತರ ಏಳುವುದು, ಜಿಮ್‌ಗೆ ಹೋಗಿ ಮಲಗುವುದು ಮತ್ತು ಟಿವಿ ನೋಡುವುದು... ಇಷ್ಟೇ ಅವರ ದಿನಚರಿ. ಇಂಥವರು ನನಗೆ ಫ್ರೆಂಡ್ಸ್​ ಆಗಲು ಸಾಧ್ಯನೆ ಎಂದು ಪ್ರಶ್ನಿಸಿದ್ದರು.  

 ‘ನೋಡಿ, ನಾನು ಬಾಲಿವುಡ್ ಪ್ರಕಾರದ ವ್ಯಕ್ತಿಯಲ್ಲ. ಅಲ್ಲಿದ್ದವರು ನನಗೆ ಸ್ನೇಹಿತರಾಗಲು ಸಾಧ್ಯವಿಲ್ಲ. ಬಾಲಿವುಡ್ ಮಂದಿ ತಮ್ಮದೇ ವೃತ್ತದ ಸುತ್ತ ತುಂಬಿಕೊಂಡಿದ್ದಾರೆ. ಅವರೆಲ್ಲಾ ಮೂರ್ಖರು.  ಅವರ ಜೀವನವು ಪ್ರೋಟೀನ್ ಶೇಕ್‌ಗಳ ಸುತ್ತ ಸುತ್ತುತ್ತದೆ ಎಂದು ಹೇಳಿದ್ದಾರೆ. ಆ ಜನರು ಮಿಡತೆಗಳಂತೆ. ಸಂಪೂರ್ಣವಾಗಿ ಖಾಲಿ. ಅಂತಹ ಜನರೊಂದಿಗೆ ನೀವು ಹೇಗೆ ಸ್ನೇಹಿತರಾಗಬಹುದು ಎಂದು ನಟಿ ಪ್ರಶ್ನಿಸಿದ್ದರು. ಅಪ್ಪ-ಅಮ್ಮ ಚಿತ್ರರಂಗದಲ್ಲಿ ಹೆಸರು ಮಾಡಿದಾಗ ಅವರ ಮಕ್ಕಳಿಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಪ್ರವೇಶ ಸಿಗುವ ಬಗ್ಗೆ ಇದಾಗಲೇ ಹಲವಾರು ಬಾರಿ ಅಸಮಾಧಾನ ಹೊರಹಾಕಿರುವ ಕಂಗನಾ, ಈಗಲೂ ಪುನಃ ನೆಪೋ ಕಿಡ್​ಗಳ ಬಗ್ಗೆ ಮಾತನಾಡಿದ್ದು, ಈಕೆಗೆ ಹೊಟ್ಟೆಕಿಚ್ಚು ಎಂದು ಹಲವರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. 

ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದ ನಟಿ ವಿದ್ಯಾ ಬಾಲನ್​! ಶಾಕಿಂಗ್​ ವಿಡಿಯೋ ವೈರಲ್​

click me!