Kangana Ranaut: 'ಇನ್ನೊಂದು ಕೆನ್ನೆ ತೋರಿಸಿದರೆ ಸಿಗೋದು ಭಿಕ್ಷೆ, ಸ್ವಾತಂತ್ರ್ಯವಲ್ಲ'

By Suvarna News  |  First Published Nov 17, 2021, 9:10 AM IST
  • Kangana Ranaut: ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಬಾಲಿವುಡ್ ಕ್ವೀನ್
  • ಇನ್ನೊಂದು ಕೆನ್ನೆ ಮುಂದಿಟ್ಟರೆ ಸಿಗುವುದು ಭಿಕ್ಷೆ, ಸ್ವಾತಂತ್ರ್ಯವಲ್ಲ ಎಂದ ನಟಿ
  • ಕಂಗನಾ ರಣಾವತ್‌ ಹೊಸ ವಿವಾದ ಸೃಷ್ಟಿ

ಮುಂಬೈ(ನ.17): ಗಾಂಧೀಜಿಯವರ ಅಹಿಂಸಾ ಮಂತ್ರವನ್ನು ಲೇವಡಿ ಮಾಡಿದ ನಟಿ ಕಂಗನಾ ರಣಾವತ್‌(Kangana Ranaut) ಹೊಸ ವಿವಾದ ಸೃಷ್ಟಿಸಿದ್ದಾರೆ. ‘ಕಳೆದ ವಾರ ಭಾರತ ಸ್ವಾತಂತ್ರ್ಯ ಪಡೆದಿದ್ದು ಭಿಕ್ಷೆಯಿಂದ ಎಂಬ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ತನ್ನ ಹೇಳಿಕೆಯನ್ನು ಸಮರ್ಥಿಸಿರುವ ಕಂಗನಾ, ‘ಗಾಂಧೀಜಿ ಅವರು ಸುಭಾಷ ಚಂದ್ರ ಬೋಸ್‌, ಭಗತ ಸಿಂಗ್‌ರಿಗೆ ಯಾವುದೇ ಬೆಂಬಲ ನೀಡಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಮುಂದಿಡುವುದರಿಂದ ಭಿಕ್ಷೆ ಸಿಗುವುದೇ ಹೊರತು ಸ್ವಾತಂತ್ರ್ಯವಲ್ಲ ಎಂದಿದ್ದಾರೆ.

ಮಂಗಳವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ’ಗಾಂಧಿ, ಇತರರು ನೇತಾಜಿಯನ್ನು ಹಸ್ತಾಂತರಿಸಲು ಒಪ್ಪಿದರು’ ಎಂಬ ಶೀರ್ಷಿಕೆಯುಳ್ಳ ಹಳೆಯ ಸುದ್ದಿಯನ್ನು ಹಂಚಿಕೊಂಡ ನಟಿ, ‘ನೀವು ಒಂದೇ ಗಾಂಧಿ ಇಲ್ಲದಿದ್ದರೆ ನೇತಾಜಿಯನ್ನು ಬೆಂಬಲಿಸಬಹುದು. ಇಬ್ಬರನ್ನೂ ಒಟ್ಟಿಗೆ ಬೆಂಬಲಿಸಲು ಸಾಧ್ಯವಿಲ್ಲ, ಆಯ್ಕೆಮಾಡಿ, ನಿರ್ಧರಿಸಿ ಎಂದು ಬರೆದಿದ್ದಾರೆ.

Tap to resize

Latest Videos

undefined

ಲೂಟಿ ಹೊಡೆದ ಬ್ರಿಟಿಷರಿಗೇಕೆ ಶಿಕ್ಷೆ ಇಲ್ಲ?: ಕಂಗನಾ!

ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ, ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಟ ನಡೆಸುವ ಧೈರ್ಯವಿಲ್ಲದವರು ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದ್ದು ಕುತಂತ್ರ ಹಾಗೂ ಅಧಿಕಾರ ದಾಹವನ್ನು ತೋರಿಸುತ್ತದೆ. ಜಾಣ್ಮೆಯಿಂದ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ. ಜನರು ತಮ್ಮ ದೇಶದ ಇತಿಹಾಸ, ನಾಯಕರ ಬಗ್ಗೆ ತಿಳಿದುಕೊಳ್ಳಲು ಇದು ಸುಸಮಯ’ ಎಂದು ಬರೆದಿದ್ದಾರೆ.

ಭಾರತಕ್ಕೆ (india)  ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಪದ್ಮಶ್ರೀ ಪುರಸ್ಕೃತ ಬಾಲಿವುಡ್‌ ನಟಿ (bollywood actress) ಕಂಗನಾ ರಾಣಾವತ್‌ (Kangana ranaut) ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ.

Kanganaಗೆ ಪ್ರಶಸ್ತಿ ಅಲ್ಲ, ಚಿಕಿತ್ಸೆ ನೀಡಬೇಕಿದೆ : ಪದ್ಮಶ್ರೀ ಹಿಂಪಡೆಯುವಂತೆ ರಾಷ್ಟ್ರಪತಿಗೆ ಮಹಿಳಾ ಆಯೋಗ ಪತ್ರ!

ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್‌ ಗಾಂಧಿ (Varun Gandhi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ (Congress) ಸೇರಿದಂತೆ ಹಲವು ಪಕ್ಷಗಳು, ಸಿನಿಮಾ ರಂಗದ ಪ್ರಮುಖರು, ಕ್ರೀಡಾ ಕ್ಷೇತ್ರದ ತಾರೆಯರು ಹಾಗೂ ಶ್ರೀಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ವಿರುದ್ಧ ದೇಶ ದ್ರೋಹದ ಕೇಸು ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಇನ್ನು ಹಲವು ಕಡೆ ಕಂಗನಾ ವಿರುದ್ಧ ಪ್ರಕರಣ (Case) ಕೂಡಾ ದಾಖಲಿಸಲಾಗಿದೆ.

ಸುದ್ದಿ ವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಮಾತನಾಡಿದ ಕಂಗನಾ, ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಈ ಮಾತುಗಳನ್ನು ಒಳಗೊಂಡ 24 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಕಂಗನಾ ಈ ಮಾತು ಆಡುವಾಗ ಸಭಾಂಗಣದಲ್ಲಿದ್ದ ಹಲವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

ತಮ್ಮ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿರುವ ಕಂಗನಾ, 1857ರ ದಂಗೆ ಮೊದಲ ಸ್ವಾತಂತ್ರ್ಯ (Freedom) ಹೋರಾಟ. ಆದರೆ ಅದನ್ನು ಹತ್ತಿಕ್ಕಲಾಯಿತು. ಅದಾದ ನಂತರ ಬ್ರಿಟಿಷರ (British) ದೌರ್ಜನ್ಯ ಹಾಗೂ ಕ್ರೂರತೆ ಹೆಚ್ಚಾಯಿತು. ಅದಾದ ಒಂದು ಶತಮಾನದ ಬಳಿಕ ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಸ್ವಾತಂತ್ರ್ಯವನ್ನು ನಾವು ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ಬ್ರಿಟಿಷರು ಕಾಂಗ್ರೆಸ್‌ ಎಂಬ ಹೆಸರನ್ನು ಬಿಟ್ಟು ಹೋದರು. ಅವರು ಬ್ರಿಟಿಷರ ಮುಂದುವರಿದ ಭಾಗ ಎಂದು ವಾಗ್ದಾಳಿ ನಡೆಸಿದ್ದಾರೆ.

ಪದ್ಮಶ್ರೀ ಪುರಸ್ಕೃತ (Padma Shri) ನಟಿ ಕಂಗನಾ ರಾಣಾವತ್‌ (Kangana Ranaut) ಅವರ ‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪಕ್ಷಬೇಧವಿಲ್ಲದೆ ರಾಜಕೀಯ ನಾಯಕರು ಕಂಗಾನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಲು ಮತ್ತು ನಟಿಯನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಲು ಆಗ್ರಹಿಸುತ್ತಿದ್ದಾರೆ

click me!