ತಮಿಳಿನ ಖ್ಯಾತ ಕಾಮಿಡಿ ನಟ ಮೈಲ್ ಸ್ವಾಮಿ ಹೃದಯಾಘಾತದಿಂದ ನಿಧನ

Published : Feb 19, 2023, 11:17 AM ISTUpdated : Feb 19, 2023, 11:25 AM IST
ತಮಿಳಿನ ಖ್ಯಾತ ಕಾಮಿಡಿ ನಟ ಮೈಲ್ ಸ್ವಾಮಿ ಹೃದಯಾಘಾತದಿಂದ ನಿಧನ

ಸಾರಾಂಶ

ತಮಿಳಿನ ಖ್ಯಾತ ಕಾಮಿಡಿ ನಟ ಮೈಲ್ ಸಾಮಿ ನಿಧನ ಹೊಂದಿದ್ದಾರೆ. ತೀವ್ರ ಹೃದಯಾಘಾತದಿಂದ ಮೈಲ್ ಸಾಮಿ ಇಂದು (ಫೆಬ್ರವರಿ 19) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. 

ತಮಿಳಿನ ಖ್ಯಾತ ಕಾಮಿಡಿ ನಟ ಮೈಲ್ ಸಾಮಿ ನಿಧನ ಹೊಂದಿದ್ದಾರೆ. ತೀವ್ರ ಹೃದಯಾಘಾತದಿಂದ ಮೈಲ್ ಸಾಮಿ ಇಂದು (ಫೆಬ್ರವರಿ 19) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮಹಾಶಿವರಾತ್ರಿ ಪ್ರಯುಕ್ತ ನಿನ್ನೆ ರಾತ್ರಿ ದೇವಸ್ಥಾನಕ್ಕೆ ಹೋಗಿ ವಾಪಾಸ್ ಆಗಿದ್ದ ಮೈಲ್ ಸಾಮಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೈಲ್ ಸಾಮಿ ಅವರ ಹಠಾತ್ ನಿಧನ ಅಭಿಮಾನಿಗಳು, ಆಪ್ತರು ಹಾಗೂ ಅವರ ಕುಟುಂಬಕ್ಕೆ ಶಾಕ್ ನೀಡಿದೆ. 57 ವರ್ಷದ ಮೈಲ್ ಸ್ವಾಮಿ ಅವರ ನಿಧನಕ್ಕೆ ಸಿನಿಮಾರಂಗದ ಗಣ್ಯರು ಹಾಗೂ ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ. 

ಅನೇಕ ವರ್ಷಗಳಿಂದ ತಮಿಳು ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ  ಹಾಸ್ಯ ನಟ ಮೈಲ್ ಸಾಮಿ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 1980 ದಶಕದಲ್ಲಿ ಸಿನಿಮಾರಂಗ ಪ್ರವೇಶಿಸಿದ ಮೈಲ್ ಸಾಮಿ ಕಮಲ್ ಹಾಸನ್, ವಿಕ್ರಮ್ ಸೇರಿದಂತೆ ತಮಿಳಿನ ಖ್ಯಾತ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. 12 ಬಿ, ಪೂವೆಲ್ಲಂ ಉನ್ವಾಸಂ, ಪಾರ್ಥಲೆ ಪರವಸಂ, ಗಿಲ್ಲಿ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಮೈಲ್ ಸಾಮಿ ತಮಿಳು ಸರ್ಕಾರದಿಂದ ಅತ್ಯುತ್ತಮ ಹಾಸ್ಯ ನಟ  ಪ್ರಶಸ್ತಿಯನ್ನು ಗೆದ್ದಿಕೊಂಡಿದ್ದರು. ವಿಶೇಷ ಎಂದರೆ ಮೈಲ್ ಸಾಮಿ ನಟಿಸಿದ್ದ 6 ಸಿನಿಮಾಗಳು 2022ರಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಜೊತೆಗೆ ಮೈಲ್ ಸಾಮಿ ಅನೇಕ ಸ್ಟೇಜ್ ಶೋ, ಸ್ಟ್ಯಾಂಡ್-ಅಪ್ ಕಾಮಿಡಿ, ಟಿವಿ ನಿರೂಪಕ ಮತ್ತು ರಂಗಭೂಮಿ ಕಲಾವಿದರಾಗಿದ್ದರು. ಅವರು ಚೆನ್ನೈನ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋನ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದುರ. ಮೈಲ್ ಸಾಮಿ ಇತ್ತೀಚೆಗೆ ನೆಂಜುಕು ನೀದಿ, ವೀಟ್ಲಾ ವಿಶೇಷಂ ಮತ್ತು ದಿ ಲೆಜೆಂಡ್ ಚಿತ್ರಗಳಲ್ಲಿ ಕಾಣಿಸಿಕೊಂಡರು.

ಫಲಿಸಲಿಲ್ಲ ಪ್ರಾರ್ಥನೆ, 39ರ ಹರೆಯದ ತೆಲಗು ನಟ ತಾರಕರತ್ನ ಬೆಂಗಳೂರಲ್ಲಿ ನಿಧನ!

ಮೈಲ್ ಸಾಮಿ  ನಿಧನಕ್ಕೆ ಖ್ಯಾತ ನಟ ಚಿಯಾನ್ ವಿಕ್ರಮ್ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ವಿಕ್ರಮ್, 'ನಿಮ್ಮ ಸಿಹಿಯಾದ ಫನ್ನಿ ಮಾರ್ಗ ಯಾವಾಗಲೂ ನೆನಪಿನಲ್ಲಿರುತ್ತದೆ' ಎಂದು ಹೇಳಿದ್ದಾರೆ. ವಿಕ್ರಮ್ ಜೊತೆ ಎರಡು ಸಿನಿಮಾಗಳಲ್ಲಿ ಮೈಲ್ ಸಾಮಿ ನಟಿಸಿದ್ದರು. ದಿಲ್ ಮತ್ತು ಧೂಳ್ ಸಿನಿಮಾಗಳಲ್ಲಿ ವಿಕ್ರಮ್ ಜೊತೆ ತೆರೆಹಂಚಿಕೊಂಡಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?