
ನವೆಂಬರ್ 7 ಬರೀ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ್ದೇ ಮಾತು. ಎಲ್ಲರೂ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು. ಜಾಯ್ ಬೈಡನ್ ಡೊನಾಲ್ಡ್ ಟ್ರಂಪ್‌ನನ್ನು ಸೋಲಿಸುವುಕ್ಕೆ ಯಶಸ್ವಿಯಾಗಿದ್ದಾರೆ.
ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಭಾರತ ಮೂಲದ ಕಮಲಾ ಅಮೆರಿಕ ಮೊದಲ ಮಹಿಳಾ ಉಪಾಧ್ಯಕ್ಷೆ. ಇವರಿಬ್ಬರೂ ಆಯ್ಕೆಯಾದಾಗಿನಿಂದಲೂ ಬರೀ ಇವರ ಬಗ್ಗೆಯೇ ಮಾತು.
ಶ್ವೇತ ಭವನಕ್ಕೆ ಬೈಡನ್ ಜೊತೆ ಬಂತು ಜರ್ಮನ್ ಶೆಫರ್ಡ್ ನಾಯಿ..!
ಪ್ರಿಯಾಂಕ ಚೋಪ್ರಾ ಈಗಾಗಲೇ ಬೈಡನ್ ಮತ್ತು ಕಮಲಾಗೆ ಶುಭಾಶಯ ತಿಳಿಸಿದ್ದಾರೆ. ಬಾಲಿವುಡ್ ಸೆಲೆಬ್ರಟಿಗಳು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ನಟಿ ಕಂಗನಾ ರಣಾವತ್ ಅವರೂ ಪ್ರತಿಕ್ರಿಯಿಸಿದ್ದಾರೆ.ನಾನು ಮೊದಲಿಗಳಾಗಿರಬಹುದು, ಕೊನೆಯವಳಲ್ಲ ಎಂದು ಕ್ಯಾಪ್ಶನ್ ಹಾಕಿ ಕಮಲಾ ಹ್ಯಾರಿಸ್ ಶೇರ್ ಮಾಡಿದ್ದ ವಿಡಿಯೋಗೆ ಕಂಗನಾ ಕಮೆಂಟ್ ಮಾಡಿದ್ದಾರೆ.
5 ನಿಮಿಷಕ್ಕೊಮ್ಮೆ ಡಾಟಾ ಚೇಂಜ್ ಆಗುವ ಗಜನಿ ಬೈಡನ್ ಬಗ್ಗೆ ನಂಬಿಕೆ ಇಲ್ಲ. ಖಂಡಿತವಾಗಿಯೂ ಕಮಲಾ ಶೋ ಮುನ್ನಡೆಸ್ತಾರೆ. ಒಬ್ಬ ಮಹಿಳೆ ಮೇಲೆ ಬಂದಾಗ ಆಕೆ ಉಳಿದೆಲ್ಲರಿಗೂ ದಾರಿ ಮಾಡಿಕೊಡುತ್ತಾಳೆ. ಐತಿಹಾಸಿಕ ದಿನಕ್ಕೆ ಚಿಯರ್ಸ್ ಎಂದಿದ್ದಾರೆ. ಕಂಗನಾ ಅಮೆರಿಕ ಅಧ್ಯಕ್ಷ ಜಾಯ್ ಬೈಡನ್ ಅವರನ್ನು ಅಮೀರ್ ಖಾನ್ ನಟನೆಯ ಗಜನಿ ಸಿನಿಮಾ ಪಾತ್ರಕ್ಕೆ ಹೋಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.