
ಗೋವಾದ ಬೀಚ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಶೂಟಿಂಗ್ ಮಾಡಿದ ನಟಿ ಪೂನಂ ಪಾಂಡೆ ಬಂಧನ ಪ್ರಕರಣ ಟ್ವೀಟರ್‌ನಲ್ಲಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಪುರುಷರಿಗೊಂದು, ಮಹಿಳೆಯರಿಗೊಂದು ನ್ಯಾಯ ಏಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆಲ್ಲಾ ಕಾರಣವಾಗಿರುವುದು ಮಾಡೆಲ್ ಮಿಲಿಂದ್ ಸೋಮನ್ ಹುಟ್ಟುಹಬ್ಬದಂದು ಮುಂಬೈ ಬೀಚ್‌ನಲ್ಲಿ ಪೂರ್ಣ ನಗ್ನರಾಗಿ ಓಡಿದ್ದು. ಅರೆನಗ್ನ ಸ್ಥಿತಿಯಲ್ಲಿದ್ದ ಪೂನಂರನ್ನು ಪೊಲೀಸರು ಬಂಧಿಸಿದ್ದಾರೆ.
ಚಪೊಲಿ ಡ್ಯಾಮ್‌ನಲ್ಲಿ ಅಶ್ಲೀಲ ಶೂಟ್: ಹಾಟ್ ನಟಿ ಪೂನಂ ವಿರುದ್ಧ FIR
ಆದರೆ ಮತ್ತೊಂದೆಡೆ ಪೂರ್ಣ ನಗ್ನರಾಗಿ ಮುಂಬೈ ಬೀಚ್‌ನಲ್ಲಿ ಓಡಿದ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಿಲಿಂದ್ ಬಗ್ಗೆ ಹೊಗಳಿಕೆ ಕೇಳಿಬಂದಿದೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಹೀಗೇಕೆ ಎಂದು ನೆಟ್ಟಿಗರು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದೀಗ ಬಾಲಿವುಡ್ ನಟ ಮಿಲಿಂದ್ ಅವರಿಗೂ ಸಂಕಟ ಎದುರಾಗಿದ್ದು, ಅವರ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಮಾಡೆಲ್, ಫಿಟ್‌ನೆಸ್ ಪ್ರಮೋಟರ್ ಮಿಲಿಂದ್ ವಿರುದ್ಧ ಕೇಸು ದಾಖಲಿಸಲಾಗಿದೆ. ನಟನ ವಿರುದ್ಧ ಐಪಿಸಿ ಸೆಕ್ಷನ್ 294(ಅಶ್ಲೀಲ ಹಾಡು ದೃಶ್ಯ) 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಚಾರ ಹಂಚಿಕೊಂಡಿದ್ದು) ಅಡಿಯಲ್ಲಿ ಕೇಸು ದಾಖಲಾಗಿದೆ.
ಹಳೆ ಗಂಡನ ಪಾದವೇ ಗತಿ... ಹಾಟ್ ಅವತಾರದಲ್ಲಿ ಗಂಡನೊಂದಿಗೆ ಪೂನಂ ಪ್ರತ್ಯಕ್ಷ!
ನಟ ಬೆತ್ತಲಾಗಿ ಬೀಚ್‌ನಲ್ಲಿ ಓಡೋ ಫೋಟೋಸ್ ವೈರಲ್ ಆಗಿತ್ತು. ಗೋವಾ ಸುರಕ್ಷ ಮಂಚ್ ನಟನ ವಿರುದ್ಧ ದೂರು ನೀಡಿದೆ. ಪತ್ನಿ ಜೊತೆ ಗೋವಾದಲ್ಲಿ ನಟ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.