ದೀಪಿಕಾ ಪಡುಕೋಣೆ ಪ್ರಗ್ನೆನ್ಸಿ ಅನ್ನೋ ಮಾಹಿತಿ ಹೊರಬೀಳುತ್ತಿದ್ದಂತೆ ಈ ಸೆಲೆಬ್ರೆಟಿ ಜೋಡಿ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಪಡುಕೋಣೆ ಪ್ರಗ್ನೆನ್ಸಿ ಹಾಗೂ ಮಗು ಜನನ ಕುರಿತು ಈಗಾಗಲೇ ಸಾಕಷ್ಟು ಸುಳ್ಳು ಸುದ್ದಿ ಹರಿದಾಡಿದೆ. ಈ ಸಾಲಿಗೆ ಇದೀಗ ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ.
ಮುಂಬೈ(ಆ.20) ಬಾಲಿವುಡ್ ಸೆಲೆಬ್ರೆಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡಿದೆ. ಆದರೆ ಯಾವಾಗ ದೀಪಿಕಾ ಪಡುಕೋಣೆ ಪ್ರಗ್ನೆಂಟ್ ಅನ್ನೋ ಮಾಹಿತಿ ಹೊರಬೀಳುತ್ತಿದ್ದಂತೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಾಗಿದೆ. ಆರಂಭದಲ್ಲಿ ದೀಪಿಕಾ ಪಡುಕೋಣೆ ಗರ್ಭಿಣಿ ಅನ್ನೋದೇ ಸುಳ್ಳು ಅನ್ನೋ ಮಾತುಗಳು ಜೋರಾಗಿ ಕೇಳಿಬಂದಿತ್ತು. ಬಳಿಕ ಹುಟ್ಟೋ ಮಗು ಗಂಡೋ, ಹೆಣ್ಣೋ ಅನ್ನೋ ಚರ್ಚೆ ಶುರುವಾಗಿತ್ತು. ಇದೀಗ ಮಗು ಬರಮಾಡಿಕೊಂಡ ಸೆಲೆಬ್ರೆಟಿಗಳು ಅನ್ನೋ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ದೀಪಿಕಾ ದಂಪತಿ ಗಂಡು ಮಗು ಬರಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇದೀಗ ಹೆಣ್ಣು ಮಗು ಅನ್ನೋ ಸುಳ್ಳು ಸುದ್ದಿ ಹರಿದಾಡುತ್ತಿದೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದೀಪಾಕು ಪಡುಕೋಣೆ ಹೆಣ್ಮು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸುದ್ದಿಗಳಲ್ಲಿ ಸುಳ್ಳು ಮಾಹಿತಿ ಹರಿಬಿಡಲಾಗಿದೆ. ಇದಕ್ಕೆ ತಕ್ಕಂತೆ ಕೆಲ ನಕಲಿ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.
ದೀಪಿಕಾ ಪಡುಕೋಣೆ ಮಗುವಿನ ಹೆಸರು ರಿವೀಲ್? ಹೆಸರಿಗೆ ಪರ್ಮಿಷನ್ ಪಡೆದಿದ್ದಾರೆ ರಣವೀರ್ ಸಿಂಗ್!
ದೀಪಿಕಾ ಹಾಗೂ ರಣವೀರ್ ಸಿಂಗ್‌ಗೆ ಸುಳ್ಳು ಸುದ್ದಿಗಳು ಬೆಂಬಿಡದೆ ಕಾಡುತ್ತಿದೆ. ಪ್ರತಿ ದಿನ ಒಂದಲ್ಲಾ ಒಂದು ರೀತಿಯ ಸುದ್ದಿ ಹರಿದಾಡುತ್ತಿದೆ. ಇದು ಸೆಲೆಬ್ರೆಟಿ ದಂಪತಿಗಳ ತಲೆನೋವಿಗೆ ಕಾರಣವಾಗಿದೆ. ತಮ್ಮ ಖಾಸಗಿ ಕ್ಷಣವನ್ನು ಗೌರವಿಸಲು ಈ ಜೋಡಿ ಹಲವು ಬಾರಿ ಮನವಿ ಮಾಡಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಗಂಡು ಮಗುವನ್ನು ಸ್ವಾಗತಿಸಿದ್ದಾರೆ ಅನ್ನೋ ನಕಲಿ ಸುದ್ದಿಗಳು ಭಾರಿ ಸಂಚಲನ ಸೃಷ್ಟಿಸಿತ್ತು.
ಗರ್ಭಿಣಿಯಾಗಿರುವ ದೀಪಿಕಾ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ದೀಪಿಕಾ ಪಡುಕೋಣೆ ಡ್ಯೂ ಡೇಟ್ ಕೆಲ ವಾರಗಳು ಮಾತ್ರ ಬಾಕಿ. ಇದರ ನಡುವೆ ದೀಪಿಕಾ ಪಡುಕೋಣೆ ಬಿಳಿ ದುಪ್ಪಟ್ಟ ಮೂಲಕ ಬೇಬಿ ಬಂಬ್ ಮುಚ್ಚಿಕೊಂಡು ಸಾಗುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಮುಂಬೈನಲ್ಲಿ ದೀಪಿಕಾ ಪಡುಕೋಣೆ ತಮ್ಮ ಕಪ್ಪು ಬಣ್ಣದ ಎಸ್‌ಯುವಿ ಕಾರಿನತ್ತ ನಡೆದುಕೊಂಡು ಸಾಗುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್
ದೀಪಿಕಾ ಪಡುಕೋಣೆ ಡ್ಯೂ ದಿನಾಂಕ ಸೆಪ್ಟೆಂಬರ್ ಎಂದು ಹೇಳಲಾಗುತ್ತಿದೆ. ಫೆಬ್ರವರಿ 29 ರಂದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಂಭ್ರಮದ ಕ್ಷಣ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಮೂಲಕ ವಿಶೇಷವಾಗಿ ಸೆಲೆಬ್ರೆಟಿ ಜೋಡಿ ಮಾಹಿತಿ ನೀಡಿತ್ತು.