The Kerala Story: ಟೈಟಲ್ ಕೆಳಗೆ ನೈಜ ಕಥೆ ಅಂತಿದ್ರೆ ಆಗಲ್ಲ, ಸತ್ಯ ಇರಬೇಕು; ಕಮಲ್ ಹಾಸನ್ ಕಿಡಿ

Published : May 28, 2023, 10:55 AM IST
The Kerala Story: ಟೈಟಲ್ ಕೆಳಗೆ ನೈಜ ಕಥೆ ಅಂತಿದ್ರೆ ಆಗಲ್ಲ, ಸತ್ಯ ಇರಬೇಕು; ಕಮಲ್ ಹಾಸನ್ ಕಿಡಿ

ಸಾರಾಂಶ

ಟೈಟಲ್ ಕೆಳಗೆ ನೈಜ ಕಥೆ ಅಂತಿದ್ರೆ ಆಗಲ್ಲ, ನಿಜಕ್ಕೂ ಸತ್ಯ ಇರಬೇಕು ಎಂದು ಕಮಲ್ ಹಾಸನ್ ಕೇರಳ ಸ್ಟೋರಿ ವಿರುದ್ಧ  ಕಿಡಿ ಕಾರಿದ್ದಾರೆ.  

ದಿ ಕೇರಳ ಸ್ಟೋರಿ ರಿಲೀಸ್ ಆಗಿ ಅನೇಕ ದಿನಗಳಾಗಿದ್ದು ಉತ್ತಮ  ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡಿ ಬೀಗಿದೆ ಕೇರಳ ಸ್ಟೋರಿ. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ತೆರೆಗೆ ಬಂದಿದೆ. ಈ ಸಿನಿಮಾ ರಿಲೀಸ್‌ಗೂ ಮೊದಲೇ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಅನೇಕ ರಾಜ್ಯಗಳಲ್ಲಿ ಬ್ಯಾನ್ ಬಿಸಿ ಕೂಡ ತಟ್ಟಿತ್ತು. ವಿವಾದ, ಬ್ಯಾನ್‌ಗಳ ನಡುವೆಯೂ ತೆರೆಗೆ ಬಂದ ಕೇರಳ ಸ್ಟೋರಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ವಿವಾದಗಳಿಂದ ದೂರ ಆಗಿಲ್ಲ. ಕೇರಳ ಸ್ಟೋರಿ ವಿವಾದಕ್ಕೆ ಈಗ ಕಮಲ್ ಹಾಸನ್ ಎಂಟ್ರಿ ಕೊಟ್ಟಿದ್ದಾರೆ. ತನಗೆ ಪ್ರೊಪೊಗಾಂಡ  ಸಿನಿಮಾಗಳು ಇಷ್ಯವಾಗಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. 

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್ ಹಾಸನ್,  'ನಾನು ನಿಮಗೆ ಹೇಳಿದ್ದೇನೆ, ನಾನು ಪ್ರೊಪೊಗಾಂಡ ಚಿತ್ರಗಳ ವಿರುದ್ಧ ಇದ್ದೇನೆ. ನೀವು ಟೈಟಲ್ ಕೆಳ ಭಾಗದಲ್ಲಿ ನೈಜ ಕಥೆ ಎಂದು ಬರೆದರೆ ಸಾಕಾಗುವುದಿಲ್ಲ. ಅದು ನಿಜವಾಗಿಯೂ ನೈಜ ಕಥೆಯಾಗಿರಬೇಕು ಮತ್ತು ಅದು ನಿಜವಲ್ಲ' ಎಂದು ಹೇಳಿದ್ದಾರೆ.

 ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ದಿ ಕೇರಳ ಸ್ಟೋರಿ ಈಗಾಗಲೇ 200 ಕೋಟಿ ರೂಪಾಯಿ ಕ್ಲಬ್ ದಾಟಿ ಮುಂದೆ ಸಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಂಡಿದೆ. ಈ ಬಗ್ಗೆ ನಟಿ ಅದಾ ಶರ್ಮಾ ಕೂಡ ಸಂತಸ ಹಂಚಿಕೊಂಡಿದ್ದರು. 200 ಕೋಟಿ ರೂಪಾಯಿ ದಾಟಿದ ಮಹಿಳಾ ಸಿನಿಮಾ ಇದಾಗಿದೆ. ಈ ಬಗ್ಗೆ ಅದಾ  ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಸಕ್ಸಸ್‌ಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. 

'ಕೇರಳ ಸ್ಟೋರಿ' ಬ್ಯಾನ್‌ ಬೆಂಬಲಿಸಿ ಹೇಳಿಕೆ ವೈರಲ್: ನಟ ನವಾಜುದ್ದೀನ್ ಸಿದ್ಧಿಕಿ ಕೆಂಡಾಮಂಡಲ

ಸಿನಿಮಾ ಅಲ್ಲ ಇದೊಂದು ಚಳುವಳಿ 

ಸಿನಿಮಾ ಬಗ್ಗೆ ಮಾತನಾಡಿದ್ದ ನಟಿ ಅದಾ, 'ಕಳೆದ ಒಂದು ವಾರದಲ್ಲಿ, ನಾನು ನಾಲ್ಕು ವಿಮಾನಗಳಲ್ಲಿ ಓಡಾಡಿದೆ. ಮೊದಲು ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳು ಬಂದು ನನ್ನೊಂದಿಗೆ 1920 ಮತ್ತು ಕಮಾಂಡೋ ಬಗ್ಗೆ ಮಾತನಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರು. ಅವರ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನನಗೆ ಧನ್ಯವಾದಗಳು. ನಾನು ಈಗಾಗಲೇ ನಾಲ್ಕೈದು ಬಾರಿ ಚಲನಚಿತ್ರವನ್ನು ನೋಡಿದ ಮತ್ತು ನಿರ್ದಿಷ್ಟ ದೃಶ್ಯಗಳನ್ನು ವಿವರಿಸುವ  ಚಿಕ್ಕ ಹುಡುಗರನ್ನು ಭೇಟಿಯಾಗಿದ್ದೇನೆ. ಕೇರಳದ ಸ್ಟೋರಿ ಇನ್ನು ಮುಂದೆ ಕೇವಲ ಚಿತ್ರವಲ್ಲ, ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಹೇಳಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?