Padma Lakshmi: 50ರ ವಯಸ್ಸಲ್ಲಿ ದೇಹ ಪ್ರದರ್ಶಿಸಿ ಪ್ರಖ್ಯಾತಿ ಗಳಿಸಿದ ನಟಿ: ಕೊನೆಗೂ ಕನಸು ನನಸಾಯ್ತು!

ಬಿಕಿನಿ ಫೋಟೋ ಮೂಲಕ ಮನೆಮಾತಾಗಿರುವ ಹಾಲಿವುಡ್​ ನಟಿ ಪದ್ಮಾ ಲಕ್ಷ್ಮಿ ಅವರ 50ನೇ ವಯಸ್ಸಿನಲ್ಲಿ ಅವರ ಕನಸು ನನಸಾಗಿದೆ. 
 

Padma Lakshmis big bikini moment happened in her 50s suc

ನಟಿ ಪದ್ಮಾ ಲಕ್ಷ್ಮಿ (Padma Lakshmi) ಎಂದರೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಚೆನ್ನೈ ಮೂಲದವರಾದರೂ ಹಾಲಿವುಡ್​ನಲ್ಲಿ ಈಕೆಯ ಹವಾ ಜೋರಾಗಿಯೇ ಇದೆ.  ಸದ್ಯ ಇವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಭಾರತ ಸಂಜಾತ ಬ್ರಿಟೀಷ್ ಲೇಖಕ ಸಲ್ಮಾನ್ ರಶ್ದಿಯವರ ಮಾಜಿ ಪತ್ನಿ ಇವರು. 2004ರಲ್ಲಿ ಇವರಿಬ್ಬರಿಗೆ ಮದುವೆಯಾಗಿತ್ತು. 2007ರಲ್ಲಿ ಪದ್ಮಾ ಲಕ್ಷ್ಮೀ ಸಲ್ಮಾನ್ ರಶ್ದಿ ಅವರಿಂದ ವಿಚ್ಛೇದನ ಪದೆದಿದ್ದಾರೆ.  ಇವರ ಹೆಚ್ಚು ಆಗಾಗ್ಗೆ ಸುದ್ದಿಯಾಗುತ್ತಿರುವುದಕ್ಕೆ ಕಾರಣ ನಗ್ನ, ಅರೆ ನಗ್ನ ಫೋಟೋಗಳಿಂದ. ವಯಸ್ಸು 50 ಆದರೂ ಮೊದಲಿನಿಂದಲೂ ಇಂಥ ಫೋಟೋಗಳನ್ನೇ ಶೇರ್​ ಮಾಡಿಕೊಳ್ಳುತ್ತಾ ಬಂದಿರುವ ನಟಿಗೆ ಇದೇ ನಗ್ನತೆಯೇ ಅಂತರಾಷ್ಟ್ರ ಮಟ್ಟದಲ್ಲಿ ಈ ವಯಸ್ಸಿನಲ್ಲಿ ಕೀರ್ತಿ ತಂದುಕೊಟ್ಟಿದೆ. ಕಳೆದ ವರ್ಷ  ಬಾತ್​​ಟಬ್​ನಲ್ಲಿ ಸಂಪೂರ್ಣ ನಗ್ನವಾಗಿದ್ದ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಸುದ್ದಿಯಾಗಿದ್ದ ನಟಿಯೀಗ ಬಿಕಿನಿ ಫೋಟೋ ಮೂಲಕ ಅಂತರಾಷ್ಟ್ರೀಯ ಮಟ್ಟದ ಮ್ಯಾಗಜೀನ್​ ಒಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. 

ಇವರು ನೋಡಲು ಪ್ರಿಯಾಂಕಾ ಚೋಪ್ರಾ ರೀತಿ ಕಾಣಿಸುತ್ತಾರೆ ಎಂಬುದು ಕೆಲವರ ಅನಿಸಿಕೆ. ಅದು ಎಷ್ಟರಮಟ್ಟಿಗೆ ಎಂದರೆ, ಇತ್ತೀಚೆಗೆ ನ್ಯೂಯಾರ್ಕ್​ನ ಪತ್ರಿಕೆಯೊಂದು ನಟಿ ಪದ್ಮಾ ಲಕ್ಷ್ಮಿ ಅವರ ಫೋಟೋವನ್ನು ಹಾಕಿ ಪ್ರಿಯಾಂಕಾ ಚೋಪ್ರಾ ಎಂದು ತಪ್ಪಾಗಿ ಪ್ರಕಟಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ  ಪದ್ಮಾ ಲಕ್ಷ್ಮಿ, ಇದರ ಸ್ಕ್ರೀನ್​​ ಶಾಟ್ ತೆಗೆದುಕೊಂಡು ಇನ್​ಸ್ಟಾಗ್ರಾಂನಲ್ಲಿ  (Instagram) ಶೇರ್​ ಮಾಡಿಕೊಂಡಿದ್ದರು.  ‘ನೈಡೈಲಿನ್ಯೂಸ್​​ಗೆ ಧನ್ಯವಾದಗಳು. ನಾವಿಬ್ಬರು ಒಂದೇ ತರಹ ಕಾಣುತ್ತೇವೆ ಎಂದು ನನಗೆ ಗೊತ್ತಿದೆ. ಆದರೆ ನಾನು ಅವಳಲ್ಲ‘ ಎಂದು ಹೇಳಿಕೊಂಡಿದ್ದರು.   

ಪೋರ್ನ್​ ಸ್ಟಾರ್ ಸನ್ನಿ ಲಿಯೋನ್​ಗಾಗಿ ಅಪ್ಪನನ್ನು ಬಿಗ್​ಬಾಸ್​ ಮನೆಗೆ ಕಳುಹಿಸಿದ್ದಂತೆ ನಟಿ ಪೂಜಾ ಭಟ್​!

 ಅಂದಹಾಗೆ, ಪದ್ಮಾ ಲಕ್ಷ್ಮಿ ಅವರು ಅಮೆರಿಕನ್​ (American) ಕಾದಂಬರಿಕಾರ್ತಿ ಮತ್ತು ಭಾರತೀಯ ಮೂಲದ ರೂಪದರ್ಶಿ ಕೂಡ.  ಇವರು 2006 ರಿಂದ ಬ್ರಾವೋ ಅವರ ಜನಪ್ರಿಯ ಕಾರ್ಯಕ್ರಮ ಟಾಪ್ ಚೆಫ್‌ನ ನಿರೂಪಕಿಯಾಗಿದ್ದಾರೆ. ಇವರು ರಿಯಾಲಿಟಿ ಹೋಸ್ಟ್ ಪ್ರೈಮ್‌ಟೈಮ್ ಎಮ್ಮಿಗೆ ನಾಮನಿರ್ದೇಶನಗೊಂಡಿದ್ದಾರೆ. 'ಟೇಸ್ಟ್ ದಿ ನೇಷನ್ ವಿತ್ ಪದ್ಮಾ ಲಕ್ಷ್ಮಿ' ಅಮೆರಿಕದಾದ್ಯಂತ ವಲಸೆ ಮತ್ತು ಅಮೆರಿಕನ್ ಸಮುದಾಯಗಳ ಪಾಕಪದ್ಧತಿ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಇದನ್ನು ಲಕ್ಷ್ಮಿ ನಿರ್ಮಿಸಿ ಹೋಸ್ಟ್ ಮಾಡುತ್ತಿದ್ದು, ಸಕತ್​ ಖ್ಯಾತಿಯನ್ನೂ ಪಡೆದಿದ್ದಾರೆ. ಆದರೆ ಇದೀಗ ಹೈಲೈಟ್​ ಆಗ್ತಿರೋದು ಅವರ ಬಿಕಿನಿ ಫೋಟೋ. 

20ನೇ ವಯಸ್ಸಿನಲ್ಲಿ ಅವಕಾಶ ಸಿಗಲಿಲ್ಲ, 50ನೇ ವಯಸ್ಸಿನಲ್ಲಿ ಅವಕಾಶ ಸಿಕ್ಕಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಅಂತೂ ನನ್ನ ಕನಸು ನನಸಾಗಿದೆ ಎಂದಿದ್ದಾರೆ. ಈಕೆಯ ಫಿಟ್​ನೆಸ್​ಗೆ (Fitness) ಫ್ಯಾನ್ಸ್​ ಫಿದಾ ಆಗಿದ್ದರೂ, ಬಿಕಿನಿ ಡ್ರೆಸ್​ ಹಲವರ ಕೆಂಗಣ್ಣಿಗೆ ಗುರಿಯಾಗ್ತಿದೆ. ಇಂಥ ಕೀಳು ಮಟ್ಟದ ಅಭಿರುಚಿ ಸಲ್ಲದು ಎಂದು ಹಲವರು ಹೇಳುತ್ತಿದ್ದಾರೆ. ಅದಕ್ಕೆ ಈಕೆ ಸಂಪೂರ್ಣ ನಗ್ನವಾಗಿರುವಾಗ ಅರೆಬರೆ ದೇಹ ಮುಚ್ಚಿಕೊಂಡಿದ್ದಾರಲ್ಲ, ಅದಕ್ಕೆ ಸಂತೋಷ ಪಡಿ ಎನ್ನುತ್ತಿದ್ದಾರೆ.  ನಾನು 16 ವರ್ಷ ವಯಸ್ಸಿನವನಾಗಿದ್ದಾಗಲೇ ನನ್ನನ್ನು ರೇಪ್​ ಮಾಡಲಾಗಿತ್ತು ಎಂದು ಈಕೆ ಕಳೆದ ವರ್ಷ ಪದ್ಮಾ ಲಕ್ಷ್ಮಿ ಹೇಳಿದ್ದರು. ಲಾಸ್ ಏಂಜಲೀಸ್ ಉಪನಗರದಲ್ಲಿರುವ ಪುಯೆಂಟೆ ಹಿಲ್ಸ್ ಮಾಲ್‌ನಲ್ಲಿ ನಾನು ಭೇಟಿಯಾದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ನಾನು ಶಾಲೆಯ ನಂತರ ರಾಬಿನ್ಸನ್ಸ್-ಮೇನಲ್ಲಿನ ಬಿಡಿಭಾಗಗಳ ಕೌಂಟರ್‌ನಲ್ಲಿ ಕೆಲಸ ಮಾಡಿದೆ. ಅವರು  ಇನ್ನೊಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬೂದು ಬಣ್ಣದ ರೇಷ್ಮೆ ಸೂಟ್ ಧರಿಸಿ ನನ್ನೊಂದಿಗೆ ಫ್ಲರ್ಟ್ ಮಾಡುತ್ತಿದ್ದರು.  ಅವರಿಗೆ 23 ವರ್ಷ ನನಗೆ 16 ವರ್ಷ. ಅವರಿಂದ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದು ನಟಿ ಹೇಳಿಕೊಂಡಿದ್ದರು. 

ಹೃತಿಕ್​ ರೋಷನ್​ಗೆ ಮಾಜಿ ಪತ್ನಿ ತಿರುಗೇಟು: ಪ್ರಿಯತಮನ​ ಜೊತೆಗಿನ ರೊಮ್ಯಾಂಟಿಕ್​ ರೀಲ್ಸ್​ ಶೇರ್​!

Latest Videos
Follow Us:
Download App:
  • android
  • ios