ಅಂಡಾಣು ಸಂರಕ್ಷಿಸಿಟ್ಟ ನಟಿ ಕಾಜೋಲ್‌ ಸಹೋದರಿ! ಹಿಂಗ್ ಮಾಡಿದ್ಯಾಕೆ?

Suvarna News   | Asianet News
Published : Jul 08, 2021, 04:24 PM IST
ಅಂಡಾಣು ಸಂರಕ್ಷಿಸಿಟ್ಟ ನಟಿ ಕಾಜೋಲ್‌ ಸಹೋದರಿ! ಹಿಂಗ್ ಮಾಡಿದ್ಯಾಕೆ?

ಸಾರಾಂಶ

ಬಾಲಿವುಡ್​ನ ಖ್ಯಾತ ನಟಿ ಕಾಜೋಲ್​ ಅವರ ತಂಗಿ ತನಿಶಾ ಮುಖರ್ಜಿ ತಮ್ಮ ಅಂಡಾಣುಗಳನ್ನು ಅಂಡಾಣು ಬ್ಯಾಂಕ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಕಾರಣವೇನು ಗೊತ್ತೆ?  

ಬಾಲಿವುಡ್​ನ ಖ್ಯಾತ ನಟಿ ಕಾಜೋಲ್​ ಅವರ ತಂಗಿ ತನಿಶಾ ಮುಖರ್ಜಿ ತಮ್ಮ ಅಂಡಾಣುಗಳನ್ನು ಅಂಡಾಣು ಬ್ಯಾಂಕ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಕಾರಣವೇನು ಗೊತ್ತೆ? 
ಈಕೆ ನಟಿಯಾಗಿದ್ದರು. ನಟಿಯಾಗಿದ್ದಾಗ ಹಲವು ಅಫೇರ್‌ಗಳಿದ್ದವು. ಆದರೆ ಯಾರನ್ನೂ ಮದುವೆಯಾಗಿರಲಿಲ್ಲ. ಬಾಲಿವುಡ್​ನಲ್ಲಿ ನೆಲೆ ಕಂಡಿಕೊಳ್ಳಲು ಪ್ರಯತ್ನಿಸಿ ವಿಫಲವಾದ ತನಿಖಾ ಮುಖರ್ಜಿಗೆ ಈಗ ನಲುವತ್ತು ವರ್ಷ ವಯಸ್ಸು. ಈ ಪ್ರಾಯದಲ್ಲಿ ಮದುವೆಯಾದರೂ ಸಹಜವಾಗಿ ಮಗುವನ್ನು ಪಡೆಯುವುದು ರಿಸ್ಕಿ. ಕಷ್ಟಕರ ಕೂಡ. ಹೀಗಾಗಿ ಅಂಡಾಣು ಸಂಗ್ರಹದ ನಿರ್ಧಾರಕ್ಕೆ ಬಂದಿದ್ದಾರಂತೆ.

ಮಗಳ ಮದುವೆಗೆ 10 ಕೋಟಿ ಖರ್ಚು ಮಾಡಿದ ನಿರ್ದೇಶಕ ಶಂಕರ್? ...

ತನಿಶಾ ತಮ್ಮ ತಾಯಿ ತನುಜಾ ಅವರೊಂದಿಗೆ ವಾಸಿಸುತ್ತಿದ್ದಾರೆ. ವಯಸ್ಸು 40 ದಾಟಿದರೂ ಮದುವೆಯ ಬಗ್ಗೆ ಯೋಚಿಸದೆ ಇರುವ ನಟಿ ಈ ಹಿಂದೆ ಹಿಂದಿ ಬಿಗ್ ಬಾಸ್​ ಕಾರ್ಯಕ್ರಮಕ್ಕೂ ಬಂದಿದ್ದರು. 43 ವರ್ಷದ ನಟಿ ತನಿಶಾ ಮುಖರ್ಜಿಗೆ ಮದುವೆಯಾಗುವ ಆಲೋಚನೆ ಏನೂ ಇಲ್ಲ. ಬಿಗ್​ ಬಾಸ್​ ಮನೆಗೆ ಹೋಗಿ ಬಂದ ನಂತರ ಕೆಲ ಸಮಯ ತನಿಶಾ ಅವರ ಮದುವೆಯ ವಿಷಯ ಸುದ್ದಿಯಲ್ಲಿತ್ತು. ಆದರೆ ಅದಾಗಲಿಲ್ಲ. ಆದರೂ, ಭವಿಷ್ಯದಲ್ಲಿ ಒಂದು ವೇಳೆ ಮದುವೆಯಾಗುವ ಅಥವಾ ಮಕ್ಕಳು ಮಾಡಿಕೊಳ್ಳುವ ಮನಸ್ಸಾದರೆ ಅನ್ನೋ ಕಾರಣಕ್ಕೆ ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಟ್ಟಿದ್ದಾರೆ. 33ನೇ ವರ್ಷದವರಿರುವಾಗಲೇ ತನಿಶಾ ಅಂಡಾಣು ಸಂಗ್ರಹಕ್ಕೆ ಮುಂದಾಗಿದ್ದರಂತೆ. ಆದರೆ, ವೈದ್ಯರು ಸದ್ಯಕ್ಕೆ ಈ ಆಲೋಚನೆ ಬೇಡ ಎಂದು 39ನೇ ವರ್ಷದಲ್ಲಿ ಈ ಪ್ರಕ್ರಿಯೆಗೆ ಅನುಮತಿ ನೀಡಿದರಂತೆ. ತನಿಶಾ ತಮ್ಮ ಅಮ್ಮನ ಅನುಮತಿ ಹಾಗೂ ಬೆಂಬಲದಿಂದಲೇ 39ನೇ ವಯಸ್ಸಿನಲ್ಲಿ ಅಂಡಾಣು ಸಂಗ್ರಹ (ಎಗ್ ಫ್ರೀಜಿಂಗ್​) ಮಾಡಿಸಿದ್ದಾರೆ.

ಶಾರೂಖ್ ಲೇಟೆಸ್ಟ್ ಫೋಟೋ ವೈರಲ್..! ದಿನಕಳೆದಂತೆ ಮತ್ತಷ್ಟು ಹ್ಯಾಂಡ್ಸಂ ...

ಅಂಡಾಣು ಸಂಗ್ರಹ ಹೇಳವಷ್ಟು ಸುಲಭವಾದ ಪ್ರತಿಕ್ರಿಯೆಯಲ್ಲ. ಈ ಹಿಂದೆಯೂ ಅಂಡಾಣು ದಾನಿಗಳು ಇದರ ಬಗ್ಗೆ ಸಾಕಷ್ಟು ಸಲ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈಗ ತನಿಶಾ ಸಹ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ. ತನಿಶಾ ಅವರ ದೇಹದ ತೂಕ ಕೊಂಚ ಹೆಚ್ಚಾಗಿತ್ತಂತೆ. ಹಾರ್ಮೋನ್​ಗಳಲ್ಲಿ ಆಗುವ ಬದಲಾವಣೆಗಳಿಂದಾಗಿ ಮುಖವೂ ಕೊಂಚ ಊದಿದಂತೆ ಆಗಿತ್ತಂತೆ. ಇದರಿಂದಾಗಿ ಕೊಂಚ ಸೌಂದರ್ಯವೂ ಹೆಚ್ಚಿತ್ತು ಎಂದಿದ್ದಾರೆ ತನಿಶಾ. ದೇಹದಿಂದ ಹೊರ ತೆಗೆದ ಅಂಡಾಣುಗಳನ್ನು ಶೈತ್ಯೀಕರಿಸಲಾಗುತ್ತದೆ. ಇದನ್ನು ಫ್ರೀಜ್​ ಮಾಡಲು ಲ್ಯಾಬ್​ಗಳು ದುಬಾರಿ ಚಾರ್ಜ್​ ಮಾಡುತ್ತವೆ. ಇನ್ನು ಹೀಗೆ ಸಂಗ್ರಹಿಸಿಡಲಾದ ಅಂಡಾಣುಗಳನ್ನು ವರ್ಷಗಟ್ಟಲೆ ಇಡಬಹುದು. ಮಕ್ಕಳಾಗಲು ಆರೋಗ್ಯಕರ ಅಂಡಾಣುಗಳ ಅಗತ್ಯವಿದ್ದು, 40 ವರ್ಷದ ಒಳಗೆ ಆರೋಗ್ಯಕರ ಅಂಡಾಣುಗಳನ್ನು ಸಂಗ್ರಹಿಸಬಹುದಾಗಿದೆ. ಕೆಲವರು ವೈದ್ಯರ ಸಲಹೆ ಪಡೆದು 40 ದಾಟಿದ ನಂತರವೂ ಅಂಡಾಣುಗಳನ್ನು ಸಂಗ್ರಹಿಸಿ ಇಡುತ್ತಾರೆ.


ವಯೋಸಹಜ ದೇಹ ಪ್ರಕೃತಿಯ ಕಾರಣದಿಂದ ಅಂಡಾಣು ಸಂಗ್ರಹ ಇಳಿಮುಖವಾಗುವುದು ಹಾಗೂ ಅಂಡಾಣುಗಳ ಗುಣಮಟ್ಟ ಕಡಿಮೆ ಆಗುತ್ತದೆ. ಹೀಗಾಗಿ 35 ವರ್ಷದ ನಂತರ ಸಂತಾನಾಭಿವೃದ್ಧಿ ಶಕ್ತಿಯು ಹಂತ ಹಂತವಾಗಿ ಕುಗ್ಗುತ್ತದೆ. ಇತ್ತೀಚಿನ ವರ್ಷಗಳಲ್ಲಿ 30 ವರ್ಷದ ಕೆಳಗಿನ ಮಹಿಳೆಯರಿಗೂ ಸಹ ಬಂಜೆತನ ಸಮಸ್ಯೆ ಕಂಡುಬರುತ್ತಿದೆ. ಮಕ್ಕಳಾಗದವರು ಅಂಡಾಣು ದಾನ ಮಾಡುವವರಿಂದ ಅಂಡಾಣು ಪಡೆದುಕೊಳ್ಳುತ್ತಾರೆ. ಇನ್ನೂ ಕೆಲವರು ವೃತ್ತಿಜೀವನದ ಗುರಿಗಳು, ಒತ್ತಡದ ಜೀವನದ ಶೈಲಿ, ರಾತ್ರಿ ಕರ್ತವ್ಯಗಳಿಂದಾಗಿ ಜೈವಿಕ ಗಡಿಯಾರವನ್ನು ಏರುಪೇರು ಮಾಡಿಕೊಳ್ಳುತ್ತಾರೆ. ದೀರ್ಘಾವಧಿಯ ಕೆಲಸದ ಸಮಯ ಮಹಿಳೆಯರ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತವೆ. ದೇಹದಲ್ಲಿ ಅಂಡಾಣು ಉತ್ಪತ್ತಿಯ ಮೇಲೆ ಅಡ್ಡ ಪರಿಣಾಮವಾಗುತ್ತದೆ. ಹೀಗಾಗಿ ಅವಿವಾಹಿತ ಯುವತಿಯರು 30 ವರ್ಷ ದಾಟುತ್ತಿದ್ದಂತೆಯೇ ಅಂಡಾಣು ಸಂಗ್ರಹಕ್ಕೆ ಮುಂದಾಗುತ್ತಾರೆ. ಯಾರು ತಮ್ಮ ಜೀವನದಲ್ಲಿ ತಡವಾಗಿ ಮದುವೆಯಾಗಲು ನಿರ್ಧರಿಸುತ್ತಾರೋ ಅಂತಹವರಲ್ಲಿ ಬಹುತೇಕರು ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ಸಿನಿಮಾ ತಾರೆಯರಲ್ಲೂ ಸಾಕಷ್ಟು ಮಂದಿ ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಬಗ್ಗೆ ಕೆಲವರು ಹೇಳಿಕೊಂಡಿದ್ದಾರೆ. 

ಲಂಡನ್‌ನಲ್ಲಿ ಸಿಗೋ ಸ್ವಾತಂತ್ರ್ಯ ನಂಗಿಷ್ಟ ಎಂದ ಸೋನಂ ಕಪೂರ್ ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್