
ತೆಲುಗು ಚಿತ್ರರಂಗದ ಯಶಸ್ವಿ ನಿರ್ದೇಶಕ ಶಂಕರ್ ಜೂನ್ 27ರಂದು ಪುತ್ರಿ ಐಶ್ವರ್ಯಾ ಹಾಗೂ ಕ್ರಿಕೆಟಿಗ ರೋಹಿತ್ ಅವರೊಂದಿಗೆ ಮದುವೆ ಮಾಡಿದರು. ಕೊರೋನಾ ಎಂದು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು, ಇದು ಸರಳ ಮದುವೆ ಎಂದು ಮದುವೆಯ ಕೆಲವೊಂದು ಫೋಟೋಗಳು ಮಾತ್ರ ರಿಲೀಸ್ ಮಾಡಲಾಗಿದ್ದವು. ಆದರೀಗ ಸೋಷಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿಯೊಂದು ಕೇಳಿ ಬರುತ್ತಿದೆ.
ಕ್ರಿಕೆಟರ್ ರೋಹಿತ್ ದಾಮೋದರ್ ಜೊತೆ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ ಮದುವೆ!
ನಿರ್ದೇಶಕ ಶಂಕರ್ ಪುತ್ರಿ ಮದುವೆಗೆ ಬರೋಬ್ಬರಿ 10 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ತಮಿಳಿನ ವೆಬ್‌ಸೈಟ್‌ಗಳು ವರದಿ ಮಾಡಿವೆ. ಒಂದು ದಿನದ ಮುಹೂರ್ತಕ್ಕೆ ಮಾತ್ರ 10 ಕೋಟಿ ಖರ್ಚಾಗಿದೆ, ಇನ್ನೂ ಕೆಲವು ದಿನಗಳಲ್ಲಿ ಸೆಲೆಬ್ರಿಟಿಗಳನ್ನು ಆಹ್ವಾನಿಸಿ ಆರತಕ್ಷತೆ ಮಾಡುವ ನಿರ್ಧಾರ ಮಾಡಿದ್ದಾರೆ. ದಿನಾಂಕ ಇನ್ನೂ ನಿಗದಿ ಆಗಿಲ್ಲವಾದರೂ ಸಣ್ಣ ಪುಟ್ಟ ತಯಾರಿ ನಡೆಸುತ್ತಿದ್ದಾರೆ.
ನಿರ್ದೇಶಕ ಶಂಕರ್ ತಮ್ಮ ಚಿತ್ರಗಳಿಗೆ ಎಷ್ಟು ಅದ್ಧೂರಿಯಾಗಿ ಖರ್ಚು ಮಾಡುತ್ತಾರೇ, ಅದೇ ರೀತಿ ಪುತ್ರಿ ಮದುವೆಗೂ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಹ ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಶಂಕರ್ ಮದುವೆಗೆ ಇಷ್ಟೊಂದು ಹಣ ಖರ್ಚು ಮಾಡಿರುವ ವಿಚಾರ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ. ಯಾರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಸರಳ ಮದುವೆ ಎಂದು ಹೇಳಿ ಇಷ್ಟೊಂದು ಖರ್ಚು ಮಾಡಿದ್ದಾರೆ, ಕೊರೋನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಇದರಿಂದ ಸಹಾಯ ಮಾಡಬಹುದಿತ್ತು, ಎಂಬುದು ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.