Wedding Annivesary ದಿನ ಮದುವೆಯ ಸೀಕ್ರೇಟ್​ ರಟ್ಟು ಮಾಡಿದ ಕಾಜೋಲ್​-ಅಜಯ್​

By Suvarna NewsFirst Published Feb 24, 2023, 10:45 PM IST
Highlights

ಇಂದು ಕಾಜೋಲ್​ ಮತ್ತು ಅಜಯ್​ ದೇವಗನ್​ ಅವರ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಮದುವೆಯ ಕುರಿತು ಕುತೂಹಲದ ಮಾಹಿತಿ ಶೇರ್​ ಮಾಡಿಕೊಂಡಿದೆ ಈ ತಾರಾ ಜೋಡಿ. 
 

ತಾರಾ ಜೋಡಿಗಳು ಬಹುಕಾಲ ಒಟ್ಟಿಗೇ ಇರುವುದು ಅಪರೂಪದ ಎಂದೇ ಹೇಳಬೇಕು. ಈ ಬಣ್ಣದ ಲೋಕದಲ್ಲಿ ಅಕ್ರಮ ಸಂಬಂಧ, ಒಂದಕ್ಕಿಂತ ಹೆಚ್ಚು ಮದುವೆ, ವಿಚ್ಛೇದನ ನೀಡದೇ ಮದುವೆಯಾಗುವುದು, ದೀರ್ಘ ಕಾಲ ಲಿವ್​ ಇನ್​ ಸಂಬಂಧದಲ್ಲಿ ಇದ್ದು ಕೈಕೊಡುವುದು, ಮಗಳ ವಯಸ್ಸಿನವಳ ಜೊತೆ ಮದುವೆಯಾಗುವುದು, ಇನ್ನೊಬ್ಬಳು ನಟಿ ಸಿಕ್ಕಳೆಂದು ಪತ್ನಿಯನ್ನು ಬಿಡುವುದು ಇವೆಲ್ಲವೂ ಮಾಮೂಲು. ಆದರೆ ಕೆಲವೇ ಕೆಲವು ತಾರಾ ಜೋಡಿಗಳು ಮಾತ್ರ ಆದರ್ಶವಾಗಿವೆ. ಮದುವೆಯಾಗಿ ಹತ್ತಾರು ವರ್ಷಗಳಾದರೂ ಸುಖದಿಂದ ಬಾಳುತ್ತಿರುವ ಜೋಡಿಗಳ ನಿದರ್ಶನ ಅಪರೂಪ. ಅಂಥ ತಾರಾ ಜೋಡಿಯಲ್ಲೊಂದು ಅಜಯ್​ ದೇವಗನ್​ ಮತ್ತು ಕಾಜೋಲ್​ ಜೋಡಿ. 1999ರ ಫೆಬ್ರುವರಿ 24ರಂದು ಮದುವೆಯಾಗಿರುವ ಈ ಜೋಡಿ ಇಂದಿಗೆ ಮದುವೆಯಾಗಿ 24 ವರ್ಷಗಳಾಗಿವೆ. ಇಂದು ವಿವಾಹ ವಾರ್ಷಿಕೋತ್ಸವದ (Wedding Anniversary) ಆಚರಿಸಿಕೊಳ್ತಿರೋ ಈ ಜೋಡಿಯ ಕುತೂಹಲದ ಲವ್​ ಸ್ಟೋರಿ ಇಂದು ಬಯಲಾಗಿದೆ.

ಹೌದು. ಕಾಜೋಲ್​ (Kajol) ಮತ್ತು ಅಜಯ್​ ದೇವಗನ್​ (Ajay Devagan) ಅವರ ಮದುವೆಯ ಹಿಂದೆ ದೊಡ್ಡ ಕಥೆಯೇ ಇದೆ. ಇದು ಹೇಳಿಕೊಳ್ಳುವಷ್ಟು ಸುಲಭವಾಗಿರಲಿಲ್ಲ. ಕಾಜೋಲ್​ ತಮ್ಮ ತಂದೆಯ ವಿರುದ್ಧ ಕಟ್ಟಿಕೊಂಡು ಈ ಮದುವೆಯಾಗಿದ್ದಾರೆ.  ಹುಲ್​ಚಲ್ (Hulchal) ಚಿತ್ರದ ವೇಳೆ ಇಬ್ಬರ ಮನದಲ್ಲೂ ಹಲ್​ಚಲ್​ (ಕೋಲಾಹಲ) ಉಂಟಾಗಿ ಪ್ರೀತಿ ಅರಳಿತ್ತು. ಇದರ ನಂತರ, ಅಜಯ್ ಮತ್ತು ಕಾಜೋಲ್ ಅನೇಕ ಚಿತ್ರಗಳಲ್ಲಿ ರೋಮಾಂಟಿಕ್​ ಪಾತ್ರಗಳನ್ನು ನಿರ್ವಹಿಸಿದರು. ಅದಾದ ಮೇಲೆ ಇವರ ಮದುವೆಯಾಗಿದ್ದು. ಆದರೆ ಸಿನಿ ರಂಗದಲ್ಲಿ ಮಾಮೂಲು ಎನ್ನುವಂತೆ ಅಜಯ್​ ದೇವಗನ್​ ಅವರ ಸುತ್ತಲೂ ಕೆಲ ನಟಿಯರ ಹೆಸರು ಸುತ್ತುತ್ತಿತ್ತು. ಅವರು, ಕಾಜೋಲ್​ರನ್ನು ಭೇಟಿಯಾಗುವ ಮೊದಲು  ರವೀನಾ ಟಂಡನ್, ಕರಿಷ್ಮಾ ಕಪೂರ್ ಮತ್ತು ಟಬು ಅವರೊಂದಿಗೆ ಅಜಯ್​ ಸಂಬಂಧ ಹೊಂದಿದ್ದರು ಎಂದೇ ಸುದ್ದಿಯಾಗಿತ್ತು. ಆದರೆ ಕೊನೆಗೆ ಅಜಯ್​ ಅವರು ಕಾಜೋಲ್​ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದರು.

Latest Videos

 

ಹಿಂದಿಯಲ್ಲಿ ಮಾತನಾಡಲು ಬರದೇ ಪರದಾಡಿದ ಅಜಯ್ ದೇವಗನ್ ಪುತ್ರಿಗೆ ರಾಷ್ಟ್ರಭಾಷೆ ಪಾಠ!

ಅಜಯ್ ಮತ್ತು ಕಾಜೋಲ್ ಉತ್ತಮ ಸ್ನೇಹಿತರಾಗಿದ್ದರು, DDLJ ನಟಿ ಆಗಾಗ್ಗೆ ಅಜಯ್ ದೇವಗನ್ ಅವರ ಪ್ರೀತಿಯ ಜೀವನದ ಬಗ್ಗೆ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇವರ ಈ ಸಲುಗೆ ಮುಂದೊಂದು ದಿನ ಪ್ರೀತಿಯಲ್ಲಿ ಬದಲಾಗಿ, ಮದುವೆಯಾಗುವ ಮಟ್ಟಿಗೂ ಹೋಗುತ್ತದೆ ಎಂದು ಅಂದುಕೊಂಡಿರಲಿಲ್ಲವಂತೆ. ಈ ಬಗ್ಗೆ ಅವರೇ ಖುದ್ದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಕಾಜೋಲ್​ ತಂದೆಗೆ ಈ ಮದುವೆ ಇಷ್ಟವಿಲ್ಲದೇ ಇರಲು ಕಾರಣ ಏನೆಂದರೆ, ಕಾಜೋಲ್​ ಅದಾಗಲೇ 24 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳ ಮದುವೆ ಬೇಡ ಎನ್ನುವುದು ಅಪ್ಪನ ಸಲಹೆ. ಅದರಲ್ಲಿಯೂ ತಾವು ಅಜಯ್​ ದೇವಗನ್​ ಅವರನ್ನು ಮದುವೆಯಾಗುವ ವಿಷಯ ಪ್ರಸ್ತಾಪಿಸಿದಾಗ ಬೇಡವೇ ಬೇಡ ಎಂದರಂತೆ. ಆಗ ಅಜಯ್​ ಅವರಿಗೆ 29 ವರ್ಷ ವಯಸ್ಸು. ಇಬ್ಬರ ನಡುವೆ ಐದು ವರ್ಷ ಅಂತರವಷ್ಟೇ. ಆದರೆ ಈ ಮದುವೆಗೆ ತಂದೆ ಅದ್ಯಾಕೋ ಇಷ್ಟಪಟ್ಟಿರಲಿಲ್ಲ. ಆದರೆ  ಕಾಜೋಲ್ ಅವರ ಪರ ವಹಿಸಿಕೊಂಡು ಬಂದದ್ದು ತಾಯಿ ತನುಜಾ. ಅವರು ಮಗಳ ಇಷ್ಟದಂತೆ ಮದುವೆಯಾಗು ಎಂದು ಗ್ರೀನ್​ ಸಿಗ್ನಲ್​ (Green Signal) ಕೊಟ್ಟರು. ಆದರೆ ಭಾವಿ ಅಳಿಯನಿಗೆ ದೀರ್ಘ ಕಾಲ ಈ ಭಾವಿ ಅತ್ತೆ ಪಾಠವನ್ನೂ ಮಾಡಿದರಂತೆ!

Ajay Devagan, Tabu: ಅಜಯ್​ ದೇವಗನ್​- ಟಬು ರೊಮಾನ್ಸ್ ವೈರಲ್; ಫೋಟೋ ಶೇರ್​ ಮಾಡಿದ ನಟ!
 
ಕಾಜೋಲ್ ಮತ್ತು ಅಜಯ್ ದೇವಗನ್ 24 ಫೆಬ್ರವರಿ 1999 ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಮದುವೆಯಾದ ಮೇಲೆ ಕಾಜೋಲ್​ ಅವರ ತಾಯಿಯನ್ನು  ಅಜಯ್ ಅತ್ತೆ ಎಂದು ಕರೆಯುತ್ತಿರಲಿಲ್ಲವಂತೆ. ಕೊನೆಗೆ ತನುಜಾ ಅವರೇ ಸಿಟ್ಟಿನಿಂದ ಜೋರು ಮಾಡಿ ಅತ್ತೆ ಎಂದು ಹೇಳುವಂತೆ ಹೇಳಿಸಿರುವುದಾಗಿ ಕಾಜೋಲ್​ ಹೇಳಿದ್ದಾರೆ. 

click me!