ಚಿತ್ರ ವಿಚಿತ್ರ ಬಟ್ಟೆಗಳಿಂದ ಕಣ್ಣು ಕುಕ್ಕಿಸುತ್ತಿರುವ ನಟಿ ಉರ್ಫಿ ಜಾವೇದ್ ಬಾಲ್ಯದ ಕಹಿ ದಿನಗಳನ್ನು ಹಂಚಿಕೊಂಡಿದ್ದಾರೆ. ಏನದು ಅವರ ನೋವಿನ ಕಥೆ?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಚಿತ್ರ ವಿಚಿತ್ರ ಬಟ್ಟೆಗಳನ್ನು ತೊಟ್ಟ ಇಲ್ಲವೇ ದೇಹ ಪೂರ್ತಿ ಕಾಣುವ ಅರ್ಧಬಂರ್ಧ ಬಟ್ಟೆ ತೊಟ್ಟ ಹೆಣ್ಣುಮಗಳು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಉರ್ಫಿ ಫೇಮಸ್ ಆಗಿರುವುದೇ ಈ ಕಾರಣಕ್ಕೆ. ನಟಿಯಾಗಿದ್ದರೂ ಈಕೆ ನಟನೆಯಿಂದ ಗುರುತಿಸಿಕೊಳ್ಳಲಿಲ್ಲ, ಬದಲಿಗೆ ಆಕೆಯ ಬಟ್ಟೆಯಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನವೂ ಚಿತ್ರ ವಿಚಿತ್ರ ವೇಷಭೂಷಣ ಮಾಡಿಕೊಳ್ಳುತ್ತಾ ಫೋಟೋಗೆ ಪೋಸ್ ಕೊಟ್ಟು ಟ್ರೋಲ್ ಆಗುವುದು ಎಂದರೆ ಇವರಿಗೆ ತುಂಬಾ ಇಷ್ಟ. ಹೂವುಗಳಿಂದ, ಹಣ್ಣುಗಳಿಂದ ಇಲ್ಲವೇ ಸಿಕ್ಕಸಿಕ್ಕ ಸಾಮಗ್ರಿಗಳಿಂದ ಖಾಸಗಿ ಅಂಗಗಳನ್ನಷ್ಟೇ ಮುಚ್ಚಿಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿ ಈಕೆ ನಿಸ್ಸೀಮರು. ಆದರೆ ಇದೇ ಮೊದಲ ಬಾರಿಗೆ ಕಣ್ಣೀರಿನ ಕಥೆಯೊಂದನ್ನು ಉರ್ಫಿ ಹೇಳಿಕೊಂಡಿದ್ದಾರೆ. ಇದು ಆಕೆಯ ಜೀವನದ ನೋವಿನ ಕಥೆ! ಹೌದು. ಉರ್ಫಿಯ ಬಾಲ್ಯ (Childhood), ಯೌವನ ಯಾವುದೂ ಚೆನ್ನಾಗಿರಲಿಲ್ಲ. ಆಕೆ ಬಾಲ್ಯದಲ್ಲಿ ಅದರಲ್ಲಿಯೂ ತಂದೆಯಿಂದ ಅನುಭವಿಸಿರುವ ಹಿಂಸೆ, ನೋವು ಅಷ್ಟಿಷ್ಟಲ್ಲ. ಆ ದುಃಖಕರ ಕಥೆಯನ್ನು ಸಂದರ್ಶನವೊಂದರಲ್ಲಿ ಉರ್ಫಿ ಹೇಳಿಕೊಂಡಿದ್ದಾರೆ. ತಮ್ಮ ತಂದೆ ನೀಡುತ್ತಿದ್ದ ಹಿಂಸೆ, ಅವರು ಇದ್ದ ರೀತಿ, ಅವರಿಂದ ತಾನು ಹಾಗೂ ಉಳಿದ ಸಹೋದರಿಯು ಅನುಭವಿಸಿದ ನೋವನ್ನು ಉರ್ಫಿ ತೆರೆದಿಟ್ಟಿದ್ದಾರೆ. ತಂದೆಯ ಹಿಂಸೆ ತಾಳದೇ ಆತ್ಮಹತ್ಯೆಯೂ (Suicide)ಹಲವು ಬಾರಿ ಯತ್ನಿಸಿರುವುದಾಗಿ ಹೇಳಿದ್ದಾರೆ.
ನನ್ನ ತಂದೆಯ ಜೊತೆ ನನ್ನ ಹಾಗೂ ಯಾವ ಮಕ್ಕಳ ಸಂಬಂಧವೂ ಚೆನ್ನಾಗಿಲ್ಲ. ಅವರೊಂದಿಗಿನ ಬಾಂಧವ್ಯ ಉತ್ತಮವಾಗಿರಲಿಲ್ಲ. ಅವರು ಮೌಖಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ನಮ್ಮನ್ನೆಲ್ಲಾ ನಿಂದಿಸಿದ್ದಾರೆ ಎಂದು ಉರ್ಫಿ ಹೇಳಿದ್ದಾರೆ. ಲಖನೌದಲ್ಲಿ (Lucknow) ಕಟ್ಟುನಿಟ್ಟಾದ ಸಂಪ್ರದಾಯವಾದಿ ಕುಟುಂಬದಲ್ಲಿ ಜನಿಸಿದವರು ಉರ್ಫಿ. ಈಕೆ ಐದು ಮಂದಿ ಒಡಹುಟ್ಟಿದವರಲ್ಲಿ ಎರಡನೆಯವಳು. ತಮ್ಮ ತಂದೆಯೊಂದಿಗಿನ ಕೆಟ್ಟ ಸಂಬಂಧವನ್ನು ವಿವರಿಸುತ್ತಾ ಉರ್ಫಿ, 'ಆತ ನಮ್ಮನ್ನು ತುಂಬಾ ಹೊಡೆಯುತ್ತಿದ್ದ. ನನ್ನ ತಾಯಿಯನ್ನೂ (Mother) ಹೊಡೆಯುತ್ತಿದ್ದ, ಅವಾಚ್ಯ ಶಬ್ದಗಳಿಂದ ನಿಂದನೆಯು ವಾಡಿಕೆಯಾಗಿತ್ತು' ಎಂದಿದ್ದಾರೆ. 'ನಮ್ಮ ತಂದೆ ತುಂಬಾ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದೆ. ನಮಗೆ ಎಷ್ಟು ಹಿಂಸೆ ಕೊಟ್ಟು ನಮ್ಮ ಮತ್ತು ಅಮ್ಮನ ಮೇಲೆ ನಡೆಸಿರುವ ದೌರ್ಜನ್ಯ ಎಷ್ಟು ಎಂದರೆ ಬದುಕೇ ಬೇಡ ಎಂದುಕೊಂಡು ಕೆಲ ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದೆ. ಆದರೆ ಸಾಯಲಿಲ್ಲ, ಬದುಕಿದೆ. ಆದರೆ ಆ ನರಕದಲ್ಲಿ ಇರಲು ನನಗೆ ಕಷ್ಟವಾಯಿತು. ನಾನು ಹೇಗಾದರೂ ಮನೆಯಿಂದ ಹೊರಕ್ಕೆ ಬರಲು ಕಾಯುತ್ತಿದ್ದೆ. ಆದರೆ ಆತ ಅದಕ್ಕೂ ಬಿಡಲಿಲ್ಲ. ಆದರೆ ಮನೆ ಬಿಟ್ಟು ಬಂದು ಬಿಟ್ಟೆ. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ಮಾರ್ಗವಾಗಿತ್ತು' ಎಂದಿದ್ದಾರೆ.
Urfi Javed ವಸ್ತುಗಳೆಲ್ಲಾ ಡ್ರೈವರ್ ಕೈಯಲ್ಲಿ! ನೋವು ತೋಡಿಕೊಂಡ ನಟಿ...
'ನಾನು ಬಹಳಷ್ಟು ಟಿವಿ ನೋಡುತ್ತಿದ್ದೆ. ನನಗೆ ಫ್ಯಾಷನ್ ಎಂದರೆ ತುಂಬಾ ಇಷ್ಟವಾಗಿತ್ತು. ಆದರೆ ನಾನು ಹುಟ್ಟಿದ ದಮನೆಯಲ್ಲಿ ಫ್ಯಾಷನ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, ಆದರೆ ಏನು ಧರಿಸಬೇಕೆಂದು ನನಗೆ ತಿಳಿದಿತ್ತು. ನಾನು ನಾಲ್ಕು ಜನರು ಎದುರು ಎದ್ದು ಕಾಣಲು ಬಯಸುತ್ತಿದ್ದೆ. ಈಗಲೂ ಅದೇ ನನ್ನ ಆಸೆ. ನಾನು ಉತ್ತಮವಾಗಿ ಕಾಣಬೇಕೆಂದು ಹಂಬಲ. ಎಲ್ಲಿಗೆ ಹೋದರೂ ಜನ ನನ್ನನ್ನೇ ನೋಡಬೇಕು ಎಂಬ ಆಸೆ. ಈಗ ಆ ಆಸೆ ಈಡೇರಿದೆ ಎನ್ನುತ್ತಾರೆ ಉರ್ಫಿ.
ನನ್ನ ಬಳಿ ಹೇಳಿಕೊಳ್ಳುವಷ್ಟು ಹಣವಿಲ್ಲ. ಆದರೆ ನಾನು ಮಾನಸಿಕವಾಗಿ ಶ್ರೀಮಂತಳು. ಮಹಿಳೆ ಹಣಕ್ಕಾಗಿ ಅಥವಾ ಇನ್ನಾವುದಕ್ಕಾಗಿಯೇ ಆಗಲಿ ಪುರುಷನ ಹಿಂದೆ ಓಡಬಾರದು. ಪುರುಷನೇ ತನ್ನ ಹಿಂದೆ ಬೀಳುವಂತೆ ಮಾಡಬೇಕು ಎನ್ನುವುದು ಉರ್ಫಿ ಮಾತು. ಎಲ್ಲರೂ ನನ್ನ ದೇಹದ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಏನು ತೋರಿಸಬಾರದೋ ಅದನ್ನು ತೋರಿಸಲಿಲ್ಲ. ದೇಹವನ್ನು ಲೈಂಗಿಕತೆಗೆ (Sexuality) ಬಳಸಿಕೊಳ್ಳುವವರು ಇದ್ದಾರೆ. ಆದರೆ ನಾನು ಹಾಗೆ ಮಾಡುತ್ತಿಲ್ಲ. ವಿನಾ ಕಾರಣ ನನ್ನ ಮೇಲೆ ಅಪವಾದಗಳು ಬರುತ್ತಿವೆ ಎಂದು ಉರ್ಫಿ ಹೇಳುತ್ತಾರೆ.
Urfi Javed: ಶಾರುಖ್ ಖಾನ್ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?