Ajay Devagan, Tabu: ಅಜಯ್ ದೇವಗನ್- ಟಬು ರೊಮಾನ್ಸ್ ವೈರಲ್; ಫೋಟೋ ಶೇರ್ ಮಾಡಿದ ನಟ!
ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಸೈ ಎನಿಸಿಕೊಂಡಿರುವ ಅಜಯ್ ದೇವಗನ್ ಹಾಗೂ ಟಬು ಅವರು ಈಗ ಪುನಃ ರೊಮಾನ್ಸ್ ಮಾಡಲಿದ್ದಾರೆ. ಎಲ್ಲಿ, ಏಕೆ, ಹೇಗೆ ಅಂತೀರಾ?
1990- 2000ನೇ ಸಾಲಿನ ಬಾಲಿವುಡ್ ಕಿಂಗ್, ಕ್ವೀನ್ ಅನಿಸಿಕೊಂಡಿರೋ ಸೂಪರ್ ಜೋಡಿಯಲ್ಲಿ ಒಂದು ಅಜಯ್ ದೇವಗನ್ ಮತ್ತು ಟಬು ಜೋಡಿ. 1994 ರಲ್ಲಿ 'ವಿಜಯಪಥ್', (Vijayapath) 1995 ರಲ್ಲಿ 'ಹಕೀಕತ್', 1999 ರಲ್ಲಿ 'ತಕ್ಷಕ್', 2015 ರಲ್ಲಿ 'ದೃಶ್ಯಂ', 2016 ರಲ್ಲಿ 'ಫಿತೂರ್', 2017 ರಲ್ಲಿ 'ಗೋಲ್ಮಾಲ್ ಎಗೇನ್', 'ದೇ ದೇ ಪ್ಯಾರ್' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಈ ಜೋಡಿ ನಟಿಸಿ ಸಕತ್ ಖುಷಿ ಕೊಟ್ಟಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿ (Chemistry) ಚೆನ್ನಾಗಿದೆ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. 2019 ರಲ್ಲಿ ಮತ್ತು ನಂತರ 'ದೃಶ್ಯಂ' ಮತ್ತು 'ದೃಶ್ಯಂ 2' ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅವರ ಆನ್‌ಸ್ಕ್ರೀನ್ ಜೋಡಿಯನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಬಾಲಿವುಡ್ನ ಈ ಜೋಡಿ ಈಗ ರೊಮಾಂಟಿಕ್ ಮೂಡ್ನಲ್ಲಿದೆ. ಇಬ್ಬರು ರೊಮಾನ್ಸ್ (Romance) ಮಾಡಲು ಮುಂದಾಗಿದ್ದಾರೆ!
ಹೌದು. ವಯಸ್ಸಾದರೇನು? ರೊಮಾನ್ಸ್ಗೆ ವಯಸ್ಸಿನ ಮಿತಿ ಇಲ್ಲವಲ್ಲ ಎನ್ನುತ್ತಿದೆ ಈ ಜೋಡಿ. ಏಕೆಂದ್ರೆ, ಅಜಯ್ ದೇವಗನ್ (Ajay Devagan) ಅವರಿಗೆ ಈಗ 53 ವರ್ಷ ಮತ್ತು ಟಬುಗೆ (Tabu) 52 ವರ್ಷ. ಆದರೆ ಇಬ್ಬರಲ್ಲಿಯೂ ರೊಮಾಂಟಿಕ್ ಭಾವ ಕಡಿಮೆ ಏನೂ ಆಗಿಲ್ಲ. ಇವರು ಈಗ ಖುಲ್ಲಂಖುಲ್ಲಾ ಆಗಿಯೇ ರೊಮಾನ್ಸ್ ಮಾಡುತ್ತಿದ್ದು ಅದರ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಶೇರ್ ಮಾಡಿಕೊಂಡಿದ್ದಾರೆ. ನಟರು ರೊಮಾನ್ಸ್ ಮಾಡುವುದು, ಮದುವೆಯಾಗುವುದು, ಡಿವೋರ್ಸ್ ಕೊಡುವುದು, ಡಿವೋರ್ಸ್ (Divorce) ಕೊಡದೇ ಇನ್ನೊಬ್ಬಳನ್ನು ಕಟ್ಟಿಕೊಳ್ಳುವುದು, ಮೂರ್ನಾಲ್ಕು ಮದುವೆಯಾಗುವುದು... ಇವೆಲ್ಲವೂ ಮಾಮೂಲೆ. ಆದರೆ ಕೆಲವೇ ಕೆಲವು ತಾರಾ ಜೋಡಿಗಳು ಒಂದೇ ಮದುವೆಯಾಗಿ ಸುಖಿ ಜೀವನ ನಡೆಸುತ್ತಿದ್ದು, ಆದರ್ಶಪ್ರಾಯರಾಗಿದ್ದಾರೆ. ಅವರಲ್ಲಿ ಒಂದು ಜೋಡಿ (Couple) ಎಂದರೆ ಅಜಯ್ ದೇವಗನ್ ಹಾಗೂ ಕಾಜೋಲ್. 1999ರಲ್ಲಿ ನಟಿ ಕಾಜೋಲ್ ಅವರನ್ನು ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವ ಅಜಯ್ ದೇವಗನ್. ಅದೇ ಇನ್ನೊಂದೆಡೆ ಮದುವೆಯಿಂದ ದೂರವೇ ಉಳಿದಿದ್ದಾರೆ ನಟಿ ಟಬು. ಈಗ ಇವರಿಬ್ಬರೂ ರೊಮಾನ್ಸ್ ಮಾಡುತ್ತಿರುವುದಾಗಿ ಜೋಡಿ ಖುದ್ದು ಹೇಳಿಕೊಂಡಿದೆ.
ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್ ಸ್ಟಾರ್!
ಹಾಗೆಂದು ನಟಿ ಕಾಜೋಲ್ ಅಭಿಮಾನಿಗಳು ಭಯಪಟ್ಟುಕೊಳ್ಳುವ ಅಗತ್ಯವಿಲ್ಲ. ಅಜಯ್ ದೇವಗನ್ ಮತ್ತು ಕಾಜೋಲ್ ದಂಪತಿ ನಡುವೆ ಟಬು ಬರಲಿಲ್ಲ. ಬದಲಿಗೆ ಈ ಜೋಡಿ ರೊಮಾನ್ಸ್ ಮಾಡುತ್ತಿರುವುದು ತಮ್ಮ ಮುಂಬರುವ ಚಿತ್ರ ಔರೋ ಮೇ ಕಹಾಂ ಧಮ್ ಥಾ (ಉಳಿದವರಲ್ಲಿ ಧಮ್ ಎಲ್ಲಿದೆ?-Where did others have the guts) ಚಿತ್ರದಲ್ಲಿ! ಹೌದು. 'ಎ ಬುಧವಾರ', 'ಸ್ಪೆಷಲ್ 26' ಮತ್ತು 'ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ಚಿತ್ರ ನಿರ್ಮಾಪಕ ನೀರಜ್ ಪಾಂಡೆ ಇದೀಗ ರೊಮ್ಯಾಂಟಿಕ್ (Romantic) ಸಿನಿಮಾ ಮಾಡಲು ಹೊರಟಿದ್ದಾರೆ. ಅದರ ಹೆಸರು ಔರೋ ಮೇ ಕಹಾಂ ಧಮ್ ಥಾ. ಇದರಲ್ಲಿ ಅಜಯ್ ದೇವಗನ್, ಟಬು ಜೋಡಿಯಾಗಿ ನಟಿಸಲಿದ್ದಾರೆ. ಜಿಮ್ಮಿ ಶೆರ್ಗಿಲ್ ಕೂಡ ಚಿತ್ರದಲ್ಲಿ ಇದ್ದಾರೆ.
ಚಿತ್ರದ ಶೂಟಿಂಗ್ ಶುರುವಾಗಿದೆ. ಅಜಯ್ ಮತ್ತು ಟಬು 'ದೃಶ್ಯಂ 2' (Drushya-02) ನಿಂದ 'ಭೋಲಾ' (Bhola) ವರೆಗೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿರೋ ಈ ಜೋಡಿ ಈಗ ಇಬ್ಬರೂ ತೆರೆ ಮೇಲೆ ಮತ್ತೊಮ್ಮೆ ರೊಮಾನ್ಸ್ ಮಾಡಲಿದ್ದಾರೆ. ಅಂದ ಹಾಗೆ ಔರಾನ್ ಮೇ ಕಹಾನ್ ದಮ್ ಥಾ ಚಿತ್ರವು ನೀರಜ್ ಪಾಂಡೆ ಅವರ ರೊಮಾಂಟಿಕ್ ಡ್ರಾಮಾ ಆಗಿದೆ. ಇದರ ಕುರಿತು ಅಜಯ್ ದೇವಗನ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿರುವ ಕೆಲವು ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅಜಯ್ ಜೊತೆ ಟಬು, ಜಿಮ್ಮಿ ಶೆರ್ಗಿಲ್ ಅವರನ್ನೂ ನೋಡಬಹುದಾಗಿದೆ.
ಈ ಚಿತ್ರದ ಹೊರತಾಗಿ ಅಜಯ್ ಕೈಯಲ್ಲಿ 'ಭೋಲಾ', 'ಮೈದಾನ', 'ಸಿಂಗಮ್ ಎಗೇನ್' ಮತ್ತು 'ನಾಮ್' ಸಿನಿಮಾಗಳಿವೆ. ಮತ್ತೊಂದೆಡೆ, ಟಬು ಬಗ್ಗೆ ಮಾತನಾಡುವುದಾದರೆ, 'ಕುತ್ತೆ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ, ಅವರು 'ಭೋಲಾ' ಮತ್ತು 'ಖುಫಿಯಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್