'ಕಠಿಣ ಪ್ರಯೋಗ ಎದುರಿಸುತ್ತಿದ್ದೇನೆ' ಎಂದು ಇನ್ಸ್ಟಾಗ್ರಾಮ್, ಟ್ವಿಟ್ಟರ್‌ಗೆ ಗುಡ್ ಬೈ ಹೇಳಿದ ನಟಿ ಕಾಜೋಲ್

By Shruthi KrishnaFirst Published Jun 9, 2023, 1:34 PM IST
Highlights

'ಕಠಿಣ ಪ್ರಯೋಗ ಎದುರಿಸುತ್ತಿದ್ದೇನೆ' ಎಂದು ನಟಿ ಕಾಜೋಲ್ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ಗೆ ಗುಡ್ ಬೈ ಹೇಳಿದ್ದಾರೆ. ಕಾಜೋಲ್ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

ಬಾಲಿವುಡ್ ಖ್ಯಾತ ನಟಿ ಕಾಜೋಲ್ ಸಾಮಾಜಿಕ ಜಾಲತಾಣಗಳಿಗೆ ಗುಡ್ ಬೈ ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸಿನಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣವನ್ನು ಹಚ್ಚಾಗಿ ಬಳಸುತ್ತಾರೆ. ಯಾವುದೇ ಸಿನಿಮಾದ ಬಗ್ಗೆ ಅಪ್‌ಡೇಟ್ ಅಥವಾ ಪ್ರತಿಕ್ರಿಯೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಅಭಿಮಾನಿಗಳ ಜೊತೆ ಸಂವಾದ ಮಾಡುವ ಮೂಲಕ ಅಭಿಮಾನಿಗಳಿಗೆ ತುಂಬಾ ಹತ್ತಿರವಾಗಲು ಸಾಮಾಜಿಕ ಜಾಲತಾಣ ಬಹುಮುಖ್ಯವಾದ ವೇದಿಕೆಯಾಗಿದೆ. ಆದರೆ ಸಾಮಾಜಿಕ ಜಾಲತಾಣದಿಂದ ಅಷ್ಟೆ ಕಿರಿಕಿರಿ ಕೂಡ ಅನುಭವಿಸುತ್ತಾರೆ. ಕೆಲವು ಸ್ಟಾರ್ಸ್ ಇನ್ಸ್ಟಾಗ್ರಾಮ್ ಹಾಗೂ ಟ್ಟಿಟ್ಟರ್‌ಗೆ ಗುಡ್ ಬೈ ಹೇಳುತ್ತಿದ್ದಾರೆ. ಇದೀಗ ಅದೇ ಸಾಲಿಗೆ ನಟಿ ಕಾಜೋಲ್ ಕೂಡ ಸೇರಿಕೊಂಡಿದ್ದಾರೆ. 

ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವ ನಟಿ ಕಾಜೋಲ್ ಬಳಿಕ ಗುಡ್ ಬೈ ಹೇಳುತ್ತಿರುವುದಾಗಿ ಹೇಳಿದ್ದಾರೆ. ಕಾಜೋಲ್ ಶೇರ್ ಮಾಡಿರುವ ಪೋಸ್ಟ್‌ನಲ್ಲಿ, 'ನನ್ನ ಜೀವನದ ಕಠಿಣ ಪ್ರಯೋಗಗಳಲ್ಲಿ ಒಂದನ್ನು ಎದುರಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಕಾಜೋಲ್ ಹೇಳಿದ್ದಾರೆ. ಕಾಜೋಲ್ ತನ್ನ ನಿರ್ಧಾರದ ಹಿಂದಿನ ಕಾರಣ ಬಹಿರಂಗ ಪಡಿಸಿಲ್ಲ. ಆದರೆ ಸ್ಟಾರ್ ನಟಿಯ ನಿರ್ಧಾರ ಅಭಿಮಾನಿಗಳಿಗೆ  ಬೇಸರ ಮೂಡಿಸಿದೆ. 

ಕಾಜೋಲ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಮಾಡಲು ಆರಂಭಿಸಿದರು. ಯಾಕೆ ಇಂಥ ನಿರ್ಧಾರ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಶುಭವಾಗಲಿ ಎಂದು ಹೇಳಿದ್ದಾರೆ. 'ಕೆಲವೊಮ್ಮೆ ಇದು ಒಳ್ಳೆಯದು. ಉತ್ತಮ ಆರೋಗ್ಯ ಬಯಸುತ್ತೇನೆ' ಎಂದು ಹೇಳಿದ್ದಾರೆ. ನಿಮ್ಮ ಸಮಯ ನೀವು ತೆಗೆದುಕೊಳ್ಳಿ, ನಿಮ್ಮ ಜೊತೆ ಸದಾ ಇರುತ್ತೇವೆ' ಎಂದು ಹೇಳಿದ್ದಾರೆ. 

ಟೈಟ್ ಬಟ್ಟೆ, ಹೈ ಹೀಲ್ಸ್ ಧರಿಸಿ ಓಡಾಡಲು ಕಷ್ಟಪಟ್ಟ ಕಾಜೋಲ್; 'ಈ ಶೋಕಿ ಬೇಕಿತ್ತಾ' ಎಂದು ಕಾಲೆಳೆದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಕಾಜೋಲ್ ಆಗಾಗ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದರು. ಇತ್ತೀಚಿಗಷ್ಟೆ ಮಗಳ ವಿಚಾರಕ್ಕೆ ಕಾಜೋಲ್ ಸಿಕ್ಕಾಪಟ್ಟೆ ಟ್ರೋಲ್‌ಗಳ ಕಾಟ ಎದುರಿಸಿದ್ದರು. ಮಗಳು ನೈಸಾ ಡ್ರೆಸ್, ಸರ್ಜರಿ ಅಂತ ನೆಟ್ಟಿಗರು ಕಾಜೋಲ್ ಮಗಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಟ್ರೋಲ್‌ಗಳ ಕಾಟಕ್ಕೆ ಬೇಸತ್ತು ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ರಾ ಎನ್ನುವ ಅನುಮಾನ ಕೂಡಡ ಮೂಡಿದೆ. ಆದರೆ ಅಭಿಮಾನಿಗಳು ಕಾಜೋಲ್ ನಿರ್ಧಾರ ಗೌರವಿಸಿ ಸದಾ ಜೊತೆಯಲ್ಲೇ ಇರುತ್ತೇವೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Kajol Devgan (@kajol)

ಕಾರಿಂದ ಇಳಿಯುವಾಗ ಜಾರಿ ಭದ್ರತಾ ಸಿಬ್ಬಂದಿ ಮೇಲೆ ಬಿದ್ದ ಕಾಜಲ್ ಪುತ್ರಿ; ನಿಸಾ ದೇವಗನ್ ವಿಡಿಯೋ ವೈರಲ್

ಇನ್ನೂ ಸಿನಿಮಾ  ವಿಚಾರಕ್ಕೆ ಬಹುವುದಾದರೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಸ್ಟ್ ಸ್ಟೋರಿಸ್2ನಲ್ಲಿ ನಟಿಸಿದ್ದು ಸದ್ಯ ಟ್ರೇಲರ್ ಮೂಲಕ ಸದ್ದು ಮಾಡುತ್ತಿದ್ದಾರೆ. ಬಾಲ್ಕಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಕಾಜೋಲ್ ಜೊತೆಗೆ ಅಮೃತಾ ಶುಭಾಷ್, ಅಂಗದ್ ಬೇಡಿ, ವಿಜಯ್ ಮರ್ಮಾ,ಸ ತಮನ್ನಾ, ಮೃಣಾಲ್ ಠಾಕೂರ್, ನೀನಾ ಗುಪ್ತಾ ಸೇರಿದಂತೆ ಅನೇಕರು ನಟಿಸಿದ್ದಾರೆ.  

click me!