ಭೀಕರ ರಸ್ತೆ ಅಪಘಾತ: ಖ್ಯಾತ ಪೋಷಕ ನಟ, ಸಹಾಯಕ ನಿರ್ದೇಶಕ ಶರಣ್ ರಾಜ್ ನಿಧನ

By Shruthi Krishna  |  First Published Jun 9, 2023, 1:11 PM IST

ಭೀಕರ ರಸ್ತೆ ಅಪಘಾತದಲ್ಲಿ ತಮಿಳಿನ ಖ್ಯಾತ ಪೋಷಕ ನಟ, ನಿರ್ದೇಶಕ ಶರಣ್ ರಾಜ್ ಮೃತಪಟ್ಟಿದ್ದಾರೆ. 


ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶರಣ್‌ ರಾಜ್‌ (26) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗುರುವಾರ (ಜೂನ್ 8) ರಾತ್ರಿ 11:30 ರ ಹೊತ್ತಿಗೆ ಈ ಅವಘಡ ಸಂಭವಿಸಿದೆ. ಕೆ.ಕೆ. ನಗರ್‌ ನಲ್ಲಿ ಈ ಅಪಘಾತ ಸಂಭವಿಸಿದ್ದು ಕಾರು ದುರಂತದಲ್ಲಿ ಶರಣ್ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶರಣ್ ರಾಜು ತನ್ನ ಬೈಕ್‌ ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡಿದಿದೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಶರಣ್‌ ರಾಜ್‌ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. 

ಕಾಲಿವುಡ್‌ ನಲ್ಲಿ ಸಹನಟನಾಗಿ ಗುರುತಿಸಿಕೊಂಡಿರುವ ಪಳನಿಯಪ್ಪನ್ ಅವರ ಕಾರು ಶರಣ್ ರಾಜ್ ಕಾರಿಗೆ ಡಿಕ್ಕಿ ಹೊಡಿದಿದೆ ಎನ್ನಲಾಗಿದೆ. ಅಲ್ಲದೇ ಪಳನಿಯಪ್ಪನ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪಳನಿಯಪ್ಪನ್ ಅವರನ್ನು ಬಂಧಿಸಿ ವಿಚಾರಣೆ ನಡೆಯುತ್ತಿದೆ. 

Tap to resize

Latest Videos

ಯುವ ನಟಿ ಅನಿಕಾ ಶ್ರದ್ಧಾಂಜಲಿ ಪೋಸ್ಟರ್ ವೈರಲ್; ಅಭಿಮಾನಿಗಳು ಶಾಕ್

ದೇಶದ ಖ್ಯಾತ ನಿರ್ದೇಶಕರಲ್ಲಿ ವೆಟ್ರಿ ಮಾರನ್ ಕೂಡ ಒಬ್ಬರು. ಶರಣ್ ರಾಜ್, ವೆಟ್ರಿ ಮಾರನ್ ಅವರ ಸೂಪರ್ ಹಿಟ್ ವಡಾ ಚೆನ್ನೈನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಜೊತೆಗೆ ವಡಾ ಚೆನ್ನೈ ಮತ್ತು ಅಸುರನ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಶರಣ್ ರಾಜ್ ಹಠಾತ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಅಭಿಮಾನಿಗಳು ಸಂತಾಪ ಸೂಚಿಸಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ.  

 

click me!