ಬರ್ತ್‌ಡೇ ಕೇಕ್ ತಂದ ಫ್ಯಾನ್ಸ್ ಜೊತೆ ಕಾಜೊಲ್ ಜಂಭದ ವರ್ತನೆ

Suvarna News   | Asianet News
Published : Aug 07, 2021, 09:59 AM ISTUpdated : Aug 07, 2021, 10:26 AM IST
ಬರ್ತ್‌ಡೇ ಕೇಕ್ ತಂದ ಫ್ಯಾನ್ಸ್ ಜೊತೆ ಕಾಜೊಲ್ ಜಂಭದ ವರ್ತನೆ

ಸಾರಾಂಶ

ಬಾಲಿವುಡ್‌ನ ಟಾಪ್ ನಟಿ ಕಾಜೊಲ್ ಇತ್ತೀಚೆಗಷ್ಟೇ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಬಾಲಿವುಡ್‌ ಖ್ಯಾತ ನಟಿಯಾದ ಕಾಜಲ್ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾದಿಂದ ಸ್ವಲ್ಪ ಮಟ್ಟಿಗೆ ದೂರವಾದರೂ ಆಗಾಗ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬರ್ತ್‌ಡೇ ದಿನ ತಮ್ಮ ಮನೆಯ ಬಳಿ ಬಂದ ಫ್ಯಾನ್ಸ್ ಜೊತೆ ನಟಿಯ ವರ್ತನೆ ಈಗ ಟೀಕೆಗೊಳಗಾಗಿದೆ.

ಫ್ಯಾನ್ಸ್ ಜೊತೆ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಕಾಜೊಲ್ ಖಾಸಗಿ ಜೀವನಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸರ್ಕಲ್‌ಗೆ ತಮ್ಮ ಸಂಭ್ರಮ, ಆಚರಣೆಗಳನ್ನು ಸೀಮಿತವಾಗಿಡುವ ನಟಿ ಇತ್ತೀಚೆಗೆ ಬರ್ತ್‌ಡೇ ದಿನ ಫ್ಯಾನ್ಸ್ ಜೊತೆ ನಡೆದುಕೊಂಡ ರೀತಿಗೆ ಟೀಕೆ ವ್ಯಕ್ತವಾಗಿದ್ದು ವಿಡಿಯೋ ವೈರಲ್ ಆಗಿದೆ.

ಬಾಲಿವುಡ್‌ನ ಟಾಪ್ ನಟಿ ಕಾಜೊಲ್ ಇತ್ತೀಚೆಗಷ್ಟೇ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಬಾಲಿವುಡ್‌ ಖ್ಯಾತ ನಟಿಯಾದ ಕಾಜಲ್ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾದಿಂದ ಸ್ವಲ್ಪ ಮಟ್ಟಿಗೆ ದೂರವಾದರೂ ಆಗಾಗ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬರ್ತ್‌ಡೇ ದಿನ ತಮ್ಮ ಮನೆಯ ಬಳಿ ಬಂದ ಫ್ಯಾನ್ಸ್ ಜೊತೆ ನಟಿಯ ವರ್ತನೆ ಈಗ ಟೀಕೆಗೊಳಗಾಗಿದೆ.

84 ಕೋಟಿಯ ಖಾಸಗಿ ಜೆಟ್: ಅಜಯ್‌ದೇವಗನ್‌ ಲಕ್ಷುರಿಯಸ್‌ ಲೈಫ್‌ಸ್ಟೈಲ್‌!

ನಟಿಯ ಬರ್ತ್‌ಡೇ ದಿನದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಒಳ್ಳೆ ಕಾರಣಕ್ಕಾಗಿ ನಟಿಯ ವಿಡಿಯೋ ವೈರಲ್ ಅಗಿದ್ದಲ್ಲ. ಒಂದಷ್ಟು ಜನ ಫ್ಯಾನ್ಸ್ ನಟಿಯ ಮನೆಯ ಮುಂದೆ ಕೇಕದ ಜೊತೆ ಬಂದಿದ್ದರು. ನಟಿಗೆ ವಿಶ್ ಮಾಡಿ ಕೇಕ್ ಕತ್ತರಿಸಲೆಂದು ಕಾಜೊಲ್ ಮನೆಯ ಮುಂದೆ ನಿಂತಿದ್ದರು. ನಟಿಯ ಸುತ್ತ ಮುತ್ತಲೂ ಪಪ್ಪಾರಾಜಿಗಳು ಹಾಗೂ ಅಭಿಮಾನಿಗಳು ನಿಂತು ಹ್ಯಾಪಿ ಬರ್ತ್‌ಡೇ ಹಾಡಿದ್ದಾರೆ. ಆಗ ನಟಿ ಕೇಕ್ ತುಂಡರಿಸಿದ್ದಾರೆ. ಈ ಸಂದರ್ಭ ಕೇಕ್ ತೆಗೆದುಕೊಳ್ಳಿ ಎಂದು ಅಭಿಮಾನಿ ಕೇಕ್ ಆಫರ್ ಮಾಡಿದ ನಿರಾಕರಿಸಿದ್ದಾರೆ ನಟಿ. ಈ ಕಾರಣಕ್ಕಾಗಿ ವಿಡಿಯೋ ವೈರಲ್ ಆಗಿದ್ದು, ನಟಿಯ ನಡವಳಿಕೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಛಾಯಾಗ್ರಾಹಕ ವೈರಲ್ ಭಯಾನಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಾಜೋಲ್ ಇಂದು ತಮ್ಮ ಜುಹು ಬಂಗಲೆಯ ಹೊರಗೆ ಕೆಲವು ಹೊರರಾಜ್ಯದ ಅಭಿಮಾನಿಗಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 19 ವರ್ಷಗಳಲ್ಲಿ 30 ಕ್ಕೂ ಹೆಚ್ಚು ಚಲನಚಿತ್ರಗಳ ನಂತರ, ಕಾಜೋಲ್ ದೇಶದ ಅತ್ಯಂತ ಪ್ರೀತಿಯ ತಾರೆಯರಲ್ಲಿ ಒಬ್ಬರಾಗಿದ್ದಾರೆ ಎಂದಿದ್ದಾರೆ.

ಅಕ್ಕನಂತೆ ನಟಿಸು ಎಂದು ಒತ್ತಡ ಎದುರಿಸಿದ್ರು ಕಾಜೋಲ್ ತಂಗಿ

ತಕ್ಷಣವೇ ಅನೇಕ ಕಾಮೆಂಟ್‌ಗಳು ಹರಿದುಬಂದಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ ಅವಳ ದುರಹಂಕಾರವನ್ನು ನೋಡಿ, ನನಗೆ ಅವಳನ್ನು ಮೊದಲಿನಿಂದಲೂ ಇಷ್ಟವಿಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬಳು ನನ್ನ ತಂಗಿ ಅವಳನ್ನು ಭೇಟಿಯಾದಳು, ಅವಳಿಗೆ ಮಾತನಾಡಲು ಅಥವಾ ಯಾವುದಕ್ಕೂ ಆಸಕ್ತಿಯಿರಲಿಲ್ಲ. ನನ್ನ ತಂಗಿ ರಾಣಿಯನ್ನು ಭೇಟಿಯಾದಳು, ಅವರು ಮಾತನಾಡಿದರು ಮತ್ತು ಫೋಟೋ ತೆಗೆದರು. ದೊಡ್ಡ ವ್ಯತ್ಯಾಸ. ಕಾಜೋಲ್ ಏನೂ ಅಲ್ಲ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ