ಹಾಕಿ ಮಹಿಳಾ ತಂಡ ಸೋತಾಗ ಬಾಲಿವುಡ್ ನಟ ಶಾರೂಖ್ ಖಾನ್ ಹಾರ್ಟ್‌ಬ್ರೇಕ್ ಎಂದು ಟ್ವೀಟ್ ಮಾಡಿದ್ದಾರೆ. ಉತ್ಸಾಹಿಗಳಾಗಿ ಆಡಿದ ಮಹಿಳಾ ಹಾಕಿ ತಂಡಕ್ಕೆ ಶುಭಾಶಯ ಹೇಳಿದ್ದಾರೆ ಬಾಲಿವುಡ್ ಕಿಂಗ್ ಖಾನ್. ಒಲಿಂಪಿಕ್ಸ್ ಶುರುವಾದಾಗಿನಿಂದಲೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ನಟ ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ನೀವು ನಮಗೆಲ್ಲರಿಗೂ ಹೆಮ್ಮೆ ತಂದಿದ್ದೀರಿ. ಭಾರತೀಯ ಮಹಿಳಾ ತಂಡದ ಸದಸ್ಯರು ಚೆನ್ನಾಗಿ ಆಡಿದ್ದೀರಿ. ನೀವು ಪ್ರತಿ ಭಾರತೀಯರಿಗೆ ಪ್ರೇರಣೆಯಾಗಲಿದ್ದೀರಿ. ಅದುವೇ ದೊಡ್ಡ ಗೆಲುವು ಎಂದಿದ್ದಾರೆ.
Heartbreak!!! But all reasons to hold our heads high. Well played Indian Women’s Hockey Team. You all inspired everyone in India. That itself is a victory.
— Shah Rukh Khan (@iamsrk)ತಂಡ ಒಲಿಂಪಿಕ್ಸ್ ಸೆಮಿಫೈನಲ್‌ಗೆ ಪ್ರವೇಶಿಸಿದ ನಂತರ ಮಹಿಳಾ ಹಾಕಿ ತಂಡಕ್ಕೆ ಶಾರುಖ್ ಅತ್ಯಂತ ಜೋರಾಗಿ ಚೀಯರ್ ಮಾಡುತ್ತಿದ್ದಾರೆ. ಶಾರುಖ್ ಮತ್ತು ಹಾಕಿಗೆ ಫಿಲ್ಮಿ ಸಂಪರ್ಕವಿದೆ. ಸೂಪರ್‌ಸ್ಟಾರ್ 2007 ರ ಸ್ಪೋರ್ಟ್ಸ್ ಮೂವಿ ಚಕ್ ದೇ ನಲ್ಲಿ ಮಹಿಳಾ ಹಾಕಿ ತಂಡದ ತರಬೇತುದಾರನಾಗಿ (ಕಬೀರ್ ಖಾನ್) ನಟಿಸಿದ್ದಾರೆ. ಭಾರತ ಚಿತ್ರದಲ್ಲಿ, ಅವರು ತಂಡದ ಗೆಲುವಿಗೆ ತರಬೇತಿ ನೀಡಿದ ಪಾತ್ರ ನಿರ್ವಹಿಸಿದ್ದಾರೆ.
undefined
ಫ್ರೀ ಲಿಫ್ಟ್ ಕೊಡ್ತಿದ್ದ ಟ್ರಕ್ ಚಾಲಕರಿಗೆ ಥ್ಯಾಂಕ್ಸ್ ಹೇಳಿದ ಚಾನು
ಚಕ್ ದೇ ನಲ್ಲಿ ಭಾರತಕ್ಕಾಗಿ ಆಡುವ ರಾಜ್ಯ ಚಾಂಪಿಯನ್ ಪ್ರೀತಿ ಸಬಾರ್ವಾಲ್ ಪಾತ್ರವನ್ನು ನಿರ್ವಹಿಸಿದ ನಟಿ ಸಾಗರಿಕಾ ಘಾಟ್ಗೆ ಮಹಿಳಾ ಹಾಕಿ ತಂಡಕ್ಕೆ ಪ್ರೋತ್ಸಾಹಿಸಿದ್ದಾರೆ. ಎಂತಹ ಅದ್ಭುತ ಆಟ ಎಂದು ಅವರು ಕಮೆಂಟಿಸಿದ್ದಾರೆ.
ಚಕ್ ದೇ ಚಿತ್ರದಲ್ಲಿ ಕ್ಯಾಪ್ಟನ್ ವಿದ್ಯಾ ಶರ್ಮಾ ಪಾತ್ರದಲ್ಲಿ ನಟಿಸಿರುವ ನಟಿ ವಿದ್ಯಾ ಮಾಳವಡೆ ಕೂಡಾ ಪ್ರತಿಕ್ರಿಯಿಸಿದ್ದಾರೆ. ನೀವು ಹುಡುಗಿಯರು ವಾಸ್ತವವನ್ನು ಮೀರಿದ್ದೀರಿ. ಭಾರತವು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ. ನೀವು ಎಂತಹ ಅದ್ಭುತ ಆಟವನ್ನು ಆಡಿದ್ದೀರಿ. ನಿಮಗೆ ಮೆಡಲ್‌ಗಳು ಖಂಡಿತಾ ಸಿಗುತ್ತದೆ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಭಾವಪರವಶರಾದ ಶಾರುಖ್ ಖಾನ್, ಮಹಿಳಾ ಹಾಕಿ ತಂಡದ ರೀಲ್ ಕೋಚ್ ಭಾರತೀಯ ಮಹಿಳಾ ಹಾಕಿ ತಂಡದ ನಿಜ ಜೀವನದ ತರಬೇತುದಾರರಾದ ಸ್ಜೊರ್ಡ್ ಮರಿಜ್ನೆ ಅವರೊಂದಿಗೆ ಆಸಕ್ತಿದಾಯಕ ಟ್ವೀಟ್ ವಿನಿಮಯ ಮಾಡಿದ್ದರು.ಸ
Haan haan no problem. Just bring some Gold on your way back….for a billion family members. This time Dhanteras is also on 2nd Nov. From: Ex-coach Kabir Khan. https://t.co/QcnqbtLVGX
— Shah Rukh Khan (@iamsrk)Thank you for all the support and love. We will give everything again.
From: The Real Coach. 😉 https://t.co/TpKTMuFLxt