
ಜನಪ್ರಿಯ ಬಾಂಗ್ಲಾದೇಶಿ ನಟಿ ಪೋರಿ ಮೋನಿಯನ್ನು ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ಬಂಧಿಸಿದೆ. ನಟಿಯ ಮನೆಯಲ್ಲಿ ಡ್ರಗ್ಸ್ ಮತ್ತು ಮದ್ಯ ಸಿಕ್ಕಿದ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಲಾಗಿದೆ. ಢಾಕಾದ ಬನಾನಿಯಲ್ಲಿರುವ ಆಕೆಯ ನಿವಾಸದಲ್ಲಿ ನಾಲ್ಕು ಗಂಟೆಗಳ ದಾಳಿಯ ನಂತರ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆಕೆಯನ್ನು ಪಡೆಯ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದೆ.
ಕಮಾಂಡರ್ ಖಾಂಡಕರ್ ಅಲ್ ಮೊಯಿನ್, ಆರ್‌ಎಬಿ ಕಾನೂನು ಮತ್ತು ಮಾಧ್ಯಮ ವಿಭಾಗದ ನಿರ್ದೇಶಕ ನಟಿಯ ಬಂಧನವನ್ನು ದೃಢಪಡಿಸಿದ್ದಾರೆ. ಆಕೆಯ ಬಂಧನಕ್ಕೆ ಮುಂಚಿತವಾಗಿ, RAB ಅವರು ದಾಳಿಯ ಸಮಯದಲ್ಲಿ ಆಕೆಯಿಂದ ಡ್ರಗ್ಸ್ ಮತ್ತು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆಕೆಯನ್ನು ಗುರುವಾರ ಬೆಳಗ್ಗೆ ಢಾಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದಿದ್ದಾರೆ. ಪೋರಿ ಮೋನಿ ಎಂದೇ ಪ್ರಸಿದ್ಧರಾದ ಶಮ್ಸುನ್ನಹಾರ್ ಸ್ಮೃತಿ ಬೋಟ್ ಕ್ಲಬ್‌ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಮತ್ತು ರಾಜಕಾರಣಿ ಗುಲ್ಶನ್ ಆಲ್ ಕಮ್ಯೂನಿಟಿ ಕ್ಲಬ್‌ನ ನಿರ್ದೇಶಕ ನಾಸಿರ್ ಉದ್ದೀನ್ ಮಹಮದ್ ತನ್ನ ಮೇಲೆ ಜೂನ್ 8 ರಂದು ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದರು. ಬೋಟ್ ಕ್ಲಬ್‌ನಲ್ಲಿ ಮಹಮದ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿಯೂ ಆಕೆ ಆರೋಪಿಸಿದ್ದಾರೆ.
ರಾಜ್ ವಿರುದ್ಧ ಮತ್ತೊಂದು ಗಂಭೀರ ಆರೋಪ : ಖಾಸಗಿ ಅಂಗ ಪ್ರದರ್ಶನ
ಆದರೆ ಆರೋಪಿಯು ಬಾಂಗ್ಲಾದೇಶದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಬೆನಜೀರ್ ಅಹ್ಮದ್ ಅವರ ಆಪ್ತ ಸ್ನೇಹಿತನಾಗಿದ್ದರಿಂದ ಯಾವುದೇ ಪ್ರಕರಣವನ್ನು ದಾಖಲಿಸಲು ನಟಿ ವಿಫಲರಾಗಿದ್ದಾರೆ.
ಮಹಿಳಾ ಕಳ್ಳಸಾಗಣೆ ಮತ್ತು ಮಾದಕ ವಸ್ತು ಮಾರಾಟದ ಅಪರಾಧಗಳನ್ನು ಒಪ್ಪಿಕೊಂಡ ನಂತರ ಮಹಮದ್ ಅವರನ್ನು ಮೂವರು ಮಹಿಳೆಯರು ಮತ್ತು ಆತನ ನಿಕಟವರ್ತಿ ತುಹಿನ್ ಸಿದ್ದೀಕ್ ಓಮಿ ಎಂಬ ಡ್ರಗ್ ಡೀಲರ್‌ನೊಂದಿಗೆ ಪೊಲೀಸ್ ಪತ್ತೆದಾರಿಕೆ ವಿಭಾಗವು ಬಂಧಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.