ಬಾಲಿವುಡ್​ನಲ್ಲಿ ಶಿಸ್ತು, ಮೌಲ್ಯ, ನೈತಿಕತೆ ತುಂಬಾ ಕಡಿಮೆ: Kajal Aggarwal

Published : Mar 31, 2023, 04:00 PM IST
ಬಾಲಿವುಡ್​ನಲ್ಲಿ ಶಿಸ್ತು, ಮೌಲ್ಯ, ನೈತಿಕತೆ ತುಂಬಾ ಕಡಿಮೆ: Kajal Aggarwal

ಸಾರಾಂಶ

ಬಹುಭಾಷಾ ನಟಿ ಕಾಜಲ್​ ಅಗರ್​ಲಾವ್​ ಅವರು ಬಾಲಿವುಡ್​ ಮತ್ತು ಸೌತ್​ ಇಂಡಸ್ಟ್ರಿ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?   

ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಕಾಜಲ್ ಅಗರ್‌ವಾಲ್ (Kajal Aggarwal). ಹಿಂದಿ  ಚಿತ್ರದಿಂದ ಸಿನಿಪಯಣ ಆರಂಭಿಸಿದರೂ ನಟಿಯಾಗಿ ಖ್ಯಾತಿ ಪಡೆದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ರ `ಚಕ್ರವ್ಯೂಹ' ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಗೌತಮ್ ಕಿಚ್ಚಲು (Gautam Kitchlu) ಅವರನ್ನು ಮದುವೆಯಾಗಿರುವ ನಟಿ, ಕಳೆದ ವರ್ಷ  ಏಪ್ರಿಲ್ 19ರಂದು  ಗಂಡು ಮಗುವಿನ ಅಮ್ಮ ಆಗಿದ್ದಾರೆ.  2004ರಲ್ಲಿ ಬಿಡುಗಡೆಗೊಂಡಿದ್ದ 'ಕ್ಯೂನ್ ಹೋ ಗಯಾ ನಾ' ಎಂಬ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ, 2007ರಲ್ಲಿ ತೆರೆಗೆ ಬಂದ ಲಕ್ಷ್ಮಿ ಕಲ್ಯಾಣಂ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು ಹಾಗೂ ಸೌತ್ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.  ಮದುವೆಯಾದ ಬಳಿಕ ನಟಿ ಕಾಜಲ್ ಅಗರ್‌ವಾಲ್ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದರು. ಆದರೆ ತಾಯಿಯಾದ ಮೇಲೆ  ಚಿತ್ರರಂಗಕ್ಕೆ ಗುಡ್‌ ಬೈ ಹೇಳುವುದಿಲ್ಲ. ಈ ವರ್ಷಾಂತ್ಯದ ವೇಳೆಗೆ ತೂಕ ಇಳಿಸಿಕೊಂಡು ಮತ್ತೆ ಮೊದಲಿನಂತಾಗಿ ಶೂಟಿಂಗ್‌ಗೆ ಹಾಜರ್‌ ಆಗುವುದಾಗಿ ನಟಿ ಕಾಜಲ್ ಅಗರ್‌ವಾಲ್ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದರಂತೆ ಅವರು  ಅಮ್ಮನಾದ ಮೇಲೂ ಇವರು  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

ಸದ್ಯ ಉಮಾ ಎಂಬ ಬಾಲಿವುಡ್​ ಚಿತ್ರದಲ್ಲಿ ಕಾಜಲ್​ ನಟಿಸುತ್ತಿದ್ದಾರೆ.  ಈಚೆಗೆ ನಟಿ, ರೈಸಿಂಗ್ ಇಂಡಿಯಾ ಸಮ್ಮಿಟ್ 2023 ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಸಿನಿ ಉದ್ಯಮದ ಕುರಿತು ಅವರು ಮಾತನಾಡಿದ್ದಾರೆ.  'ಹಿಂದಿ ದೇಶದ ದೊಡ್ಡ ಭಾಷೆಯಾದ ಕಾರಣ ಹಲವಾರು ಕಲಾವಿದರು ಬಾಲಿವುಡ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಬೇಕು ಎಂದು ಆಶಿಸುತ್ತಾರೆ. ಆದರೆ ವಾಸ್ತವದಲ್ಲಿ,  ದಕ್ಷಿಣ ಭಾರತದ ಚಿತ್ರರಂಗಗಳು ಸ್ನೇಹದಾಯಕವಾಗಿದ್ದು, ಕಲಾವಿದರನ್ನು ಅಲ್ಲಿಯ ಜನ ಒಪ್ಪಿಕೊಳ್ತಾರೆ ಎಂದೇ ನಾನು ಅಂದುಕೊಂಡವಳು. ಈಗ ನೋಡಿ. ನನ್ನದು  ಹಿಂದಿ  ಮಾತೃಭಾಷೆ, (Mother toungue) ನಾನು ಬಾಲಿವುಡ್​​ ಚಿತ್ರಗಳಿಂದಲೇ ಬೆಳೆದವಳು. ಹಿಂದಿ ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ ಸಹ. ಆದರೆ ನಾನು ಉತ್ತಮ ವಾತಾರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇನೆ. ನೈತಿಕತೆ, ಮೌಲ್ಯಗಳು ಹಾಗೂ ಶಿಸ್ತಿನ ವಿಷಯಕ್ಕೆ ಬಂದರೆ ದಕ್ಷಿಣ ಚಿತ್ರರಂಗದಲ್ಲಿ ಇವು ಹೆಚ್ಚಿವೆ. ಈ ಅಂಶಗಳ ಕೊರತೆ ಬಾಲಿವುಡ್‌ನಲ್ಲಿ ಇದೆ ಎಂಬುದು ನನ್ನ ಅನಿಸಿಕೆ' ಎಂದಿದ್ದಾರೆ. 

Kajal Aggarwal: ಅರೆರೆ... ಇವ್ರು ಕಾಜಲ್​ ಹೌದಾ? ಮುಖಕ್ಕೆ ಏನಾಯ್ತು? ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!

ದಕ್ಷಿಣದಲ್ಲಿ ಹಲವಾರು ಪ್ರತಿಭಾವಂತ ತಂತ್ರಜ್ಞರಿದ್ದು, ಅದ್ಭುತವಾದ ನಿರ್ದೇಶಕರಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಈ ನಾಲ್ಕೂ ಭಾಷೆಗಳಲ್ಲಿಯೂ ಕಂಟೆಂಟ್ ಹೆಚ್ಚಿದೆ ಎಂದಿದ್ದಾರೆ ನಟಿ ಕಾಜಲ್​.  ಈಕೆಯ ಈ ಮಾತು ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ನಟಿಯ ಹೇಳಿಕೆ ಭಾರಿ ವೈರಲ್​ ಆಗಿದ್ದು, ಪರ-ವಿರೋಧಗಳ ಚರ್ಚೆ ಶುರುವಾಗಿದೆ.  ಹಲವರು ಬಾಲಿವುಡ್‌ನಲ್ಲಿ ಶಿಸ್ತಿಲ್ಲ ಎನ್ನುವುದು ನಿಜ ಎಂದು ಹೇಳುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ ಕುರಿತು ಮಾಡಿರುವ ಗಂಭೀರ ಆರೋಪಗಳ ಬಗ್ಗೆಯೂ ಕಮೆಂಟ್​ನಲ್ಲಿ ಚರ್ಚೆಯಾಗುತ್ತಿದ್ದು, ನಟಿ ಕಾಜಲ್​ ಹೇಳಿರುವುದು ಸರಿಯಾಗಿದೆ ಎನ್ನುತ್ತಿದೆ. ಆದರೆ ಕೆಲವರು  ನಟಿಗೆ ವಯಸ್ಸಾಗಿದೆ, ಆಫರ್ ಸಿಗುತ್ತಿಲ್ಲ, ಅದಕ್ಕೇ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. (Trolling)
 
37 ವರ್ಷದ ಕಾಜಲ್​, ತೆಲುಗು, ತಮಿಳು ಚಿತ್ರಗಳಲ್ಲಿ ಮೋಡಿ ಮಾಡಿದ್ದಾರೆ. ಬಟ್ಟಲುಗಣ್ಣಿನ ಚೆಲುವೆ ಕಾಜಲ್ ಅಗರ್ ವಾಲ್ ಕ್ಯೂ ಹೋ ಗಯಾನಾ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ್ದರು. 'ಮಗಧೀರ' (Magadheera) ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ 2019ರಲ್ಲಿ ಹಾಲಿವುಡ್​ಗೂ ಹಾರಿದ್ದರು.  ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸಾಲಿಗೆ ಇದೀಗ ಕಾಜಲ್ ಸೇರಿದ್ದಾರೆ. ಕೃಷ್ಣವಂಶಿ ನಿರ್ದೇಶನದ ಚಂದಮಾಮ ಚಿತ್ರದ ಮೂಲಕ ಕಾಜಲ್​ಗೆ ಉತ್ತಮ ಮನ್ನಣೆ ಸಿಕ್ಕಿತ್ತು. ಅದರ ನಂತರ, ಕಾಜಲ್ ಸರಣಿ ಆಫರ್​ಗಳೊಂದಿಗೆ ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಟಾಲಿವುಡ್ ನಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿರುವ ನಟಿ ಕಾಜಲ್ ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಕಾಜಲ್ ಪ್ರಸ್ತುತ ಸ್ಟಾರ್ ಹೀರೋ ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಈಕೆ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಆದರೆ ಅದರಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರಿಂದ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರಬಹುದೇ ಎಂದು ಕಮೆಂಟ್​ಗಳ ಸುರಿಮಳೆಯಾಗಿತ್ತು. 

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!