ಪರಿಣಿತಿ-ರಾಘವ್​ ಮದ್ವೆ ಸುದ್ದಿಗೆ ಬ್ರೇಕ್ ಹಾಕಿದ AAP ನಾಯಕ: ಭಾರತಕ್ಕೆ ಪ್ರಿಯಾಂಕಾ

Published : Mar 31, 2023, 02:53 PM IST
ಪರಿಣಿತಿ-ರಾಘವ್​ ಮದ್ವೆ ಸುದ್ದಿಗೆ  ಬ್ರೇಕ್ ಹಾಕಿದ AAP ನಾಯಕ: ಭಾರತಕ್ಕೆ ಪ್ರಿಯಾಂಕಾ

ಸಾರಾಂಶ

ಬಾಲಿವುಡ್​ ನಟಿ ಪರಿಣಿತಿಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮದುವೆಯ ವದಂತಿಗೆ ಕೊನೆಗೂ ಬಿದ್ದಿದೆ ಬ್ರೇಕ್​. ಏನಿದು ಸುದ್ದಿ?   

ಬಾಲಿವುಡ್ ನಟಿ ಪರಿಣಿತಿಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರನ್ನು ವಿವಾಹವಾಗಲಿರುವ ಸುದ್ದಿ ನಿಜವಾಗಿದೆ. ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಈಗ ಪರಿಣಿತಿಚೋಪ್ರಾ ಮತ್ತು ರಾಘವ್ ಚಡ್ಡಾ (Raghva Chadha) ಸರದಿ.  ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಮತ್ತು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ ಎಂದು ಗುಸುಗುಸು ಸುದ್ದಿಯಾಗಿತ್ತು. ಆದರೆ ಅದೀಗ ನಿಜವಾಗಿದೆ.   ಇತ್ತೀಚಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ರೂಮರ್ಸ್ ಹರಡಲು ಕಾರಣವಾಯ್ತು. ಹೊಟೇಲ್ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲಿಂದ ಶುರುವಾಗಿದ್ದ ಗುಸುಗುಸು ಸುದ್ದಿಗೆ ಈಗ ಫುಲ್​ಸ್ಟಾಪ್​ ಸಿಕ್ಕಿದ್ದು, ಇಬ್ಬರ ಮದುವೆಗೂ ಗ್ರೀನ್​ ಸಿಗ್ನಲ್​ ಸಿಕ್ಕಿರುವುದು ಕನ್​ಫರ್ಮ್​ ಆಗಿದೆ. 

ಈ ಜೋಡಿಯ ಬಗ್ಗೆ  ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜೀವ್ ಅರೋರಾ ಈಚೆಗಷ್ಟೇ ಟ್ವೀಟ್ ಮಾಡಿದ್ದರು. ‘ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಿಲನವು ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡಲಿ. ನನ್ನ ಶುಭಾಶಯಗಳು’ ಎಂದಿದ್ದರು. ಇದಾದ ಬಳಿಕ ಇವರ ಸಂಬಂಧದ ಬಗ್ಗೆ ಹಲವು ಗುಮಾನಿ ಶುರುವಾಗಿತ್ತು. ಈಗ ಎಲ್ಲ ಅನುಮಾನಗಳೂ ಬಗೆಹರಿದಿವೆ. ಈ ಜೋಡಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದವರು. ಅಲ್ಲಿಯೇ ಲವ್​ ಶುರುವಾಗಿತ್ತು ಎನ್ನಲಾಗಿದೆ. ಆದರೆ ಇದುವರೆಗೆ  ಇವರ ನಡುವಿನ ಸಂಬಂಧ ಗಪ್​ಚುಪ್​ ಆಗಿಯೇ  ಮುಂದುವರೆದಿತ್ತು. ಇದೀಗ  ಎರಡೂ ಕುಟುಂಬಗಳು  ರೋಕಾ (ನಿಶ್ಚಯ) ಸಮಾರಂಭಕ್ಕೆ ಸಿದ್ಧತೆಗಳನ್ನು ನಡೆಸುತ್ತಿವೆ. ಅಂದಹಾಗೆ ರೋಕಾ ಎನ್ನುವುದು ಪಂಜಾಬಿ ವಿವಾಹದ ಮೊದಲು ನಡೆಯುವ ಅತ್ಯಂತ ಮಹತ್ವದ ಸಮಾರಂಭಗಳಲ್ಲಿ ಒಂದಾಗಿದೆ.

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!
 

ಈ ನಡುವೆಯೇ, ತಮ್ಮ ಸೋದರಸಂಬಂಧಿ ಪರಿಣೀತಿಯವರ ಮದುವೆಗೆ ಹೋಗಲು ನಟಿ ಪ್ರಿಯಾಂಕಾ ಚೋಪ್ರಾ ಸನ್ನದ್ಧರಾಗಿದ್ದಾರೆ.  ವರದಿಗಳನ್ನು ನಂಬುವುದಾದರೆ,  ಶೀಘ್ರದಲ್ಲೇ ಪ್ರಿಯಾಂಕಾ ಮದುಮಗ ರಾಘವ್ ಅವರನ್ನು ಭೇಟಿಯಾಗಲಿದ್ದಾರೆ. ಸದ್ಯ ವಿದೇಶದಲ್ಲಿರುವ ಪ್ರಿಯಾಂಕಾ,  ಶೀಘ್ರದಲ್ಲೇ ಸಿಟಾಡೆಲ್‌ನ ಪ್ರಚಾರಕ್ಕಾಗಿ ಭಾರತಕ್ಕೆ ಬರುವವರಿದ್ದಾರೆ.  ಈ ಸಂದರ್ಭದಲ್ಲಿ  ಅವರು ತಮ್ಮ ಸೋದರಸಂಬಂಧಿ ಪರಿಣಿತಿಚೋಪ್ರಾ ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ನಟಿ ರಾಘವ್ ಚಡ್ಡಾ ಅವರನ್ನೂ  ಭೇಟಿ (Meeing) ಮಾಡಬಹುದು. ಈ ಭೇಟಿಯ ಸಮಯದಲ್ಲಿ ಸಣ್ಣ ಸಮಾರಂಭದ ಸಾಧ್ಯತೆಯಿದೆ. ಅವರ ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
 
ವರದಿಗಳ ಪ್ರಕಾರ, ಪರೀಣಿತಿ  ಮತ್ತು ರಾಘವ್ ಲಂಡನ್​ನಲ್ಲಿ  ತಮ್ಮ ವಿಶ್ವವಿದ್ಯಾನಿಲಯದ ದಿನಗಳಿಂದಲೂ ಸ್ನೇಹಿತರಾಗಿದ್ದರು. ಲಂಡನ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಕಾಣಿಸಿಕೊಂಡ ನಂತರ ಇಬ್ಬರೂ ಮೊದಲು ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದರು. ಅದರ ನಂತರ ಅವರು ಹಲವಾರು ಪ್ರವಾಸಗಳನ್ನು ಮಾಡಿದ್ದಾರೆ. ಇತ್ತೀಚೆಗೆ,  ಪರಿಣಿತಿಅವರಿಗೆ  ರಾಘವ್ ಅವರೊಂದಿಗಿನ ವಿವಾಹದ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ಕೇಳಲಾಯಿತು. ಆದರೆ ಅವರು ಏನೂ ಹೇಳಿರಲಿಲ್ಲ, ಆದರೆ ಆಕೆಯ ನಗು ಎಲ್ಲವನ್ನೂ ಹೇಳಿತ್ತು. ತಮ್ಮ ರಿಲೇಶನ್‌ಷಿಪ್ (Relationship) ಮತ್ತು ಮದುವೆ ಬಗ್ಗೆ ರಾಘವ್ ಚಡ್ಡಾ ಆಗಲಿ ಪರಿಣಿತಿ ಚೋಪ್ರಾ ಆಗಲಿ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ ರಾಘವ್​ ವಿಷಯ ಕೇಳಿದಾಗ ಪರಿಣಿತಿ ನಾಚಿಕೊಂಡಿದ್ದರು.  ನಂತರ ಸಂಜೀವ್ ಅರೋರಾ (Sanjeev Arora) ಅವರ ಟ್ವೀಟ್​ನಿಂದಾಗಿ ಸುದ್ದಿ ಬಹುತೇಕ ಖಚಿತವಾಗಿತ್ತು.  

Bollywood Second Marriages: ಎರಡನೇ ಬಾರಿ ಮದ್ವೆಯಾಗಿ ಸಕ್ಸಸ್​ ಕಂಡ ನಟಿಯರಿವರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!