Jr.NTR ತಾಯಿ ಜೊತೆ ಯಶ್ ಗಿದೆ ವಿಶೇಷ ಬಾಂಧವ್ಯ; KGF 2 ಹೀರೋ ಹೇಳಿದ್ದೇನು?

Published : Apr 14, 2022, 06:47 PM IST
Jr.NTR ತಾಯಿ ಜೊತೆ ಯಶ್ ಗಿದೆ ವಿಶೇಷ ಬಾಂಧವ್ಯ; KGF 2 ಹೀರೋ ಹೇಳಿದ್ದೇನು?

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ತೆಲುಗು ಸ್ಟಾರ್ ಕಲಾವಿದರ ಜೊತೆ ಉತ್ತಮ ಬಾಂಧವ್ಯವಿದೆ ಎಂದು ಬಹಿರಂಗಪಡಿಸಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಜೊತೆ ಉತ್ತಮ ನಂಟಿದೆ. ಅದರಲ್ಲೂ ಜೂ.ಎನ್ ಟಿ ಆರ್ ತಾಯಿ ಜೊತೆ ಕನ್ನಡದ ಬಾಂಧವ್ಯವಿದೆ ಎಂದು ಯಶ್ ಹೇಳಿದರು.  

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್-2(KGF2 ) ಸಿನಿಮಾಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಖುಷಿಯಲ್ಲಿದ್ದಾರೆ. ವಿಶ್ವದಾದ್ಯಂತ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯ ಅಭಿಮಾನಿಗಳು ಕೆಜಿಎಫ್2 ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ರಾಕಿ ಭಾಯ್ ಯಶ್ ಅವರನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಂಡಿದ್ದಾರೆ. ಮೂರು ವರ್ಷಗಳಿಂದ ಕಾತರದಿಂದ ಕಾದ ಅಭಿಮಾನಿಗಳಿಗೆ ಕೆಜಿಎಫ್-2 ಯಾವುದೇ ನಿರಾಸೆ ಮಾಡದೆ ಅಭಿಮಾನಿಗಳ ಮನತಣಿಸಿದ್ದಾರೆ. ಕೆಜಿಎಫ್-2 ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಸಿನಿಮಾತಂಡ ಭಾರತದಾದ್ಯಂತ ಪ್ರಚಾರ ಮಾಡಿದ್ದರು. 

ಹೈದರಾಬಾದ್ ಪ್ರಚಾರದ ವೇಳೆ ರಾಕಿಂಗ್ ಸ್ಟಾರ್ ಯಶ್ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದರು. ಆರ್ ಆರ್ ಆರ್ ಸಿನಿಮಾದ ಸ್ಟಾರ್ ಗಳಾದ ರಾಮ್ ಚರಣ್(Ram Charan) ಮತ್ತು ಜೂ.ಎನ್ ಟಿ ಆರ್(Jr NTR) ಜೊತೆಗಿನ ವಿಶೇಷ ಬಾಂಡಿಂಗ್ ಬಗ್ಗೆ ಬಹಿರಂಗ ಪಡಿಸಿದರು. ತೆಲುಗು ಸ್ಟಾರ್ ಕಲಾವಿದರ ಜೊತೆ ವಿಶೇಷ ಬಾಂಧವ್ಯವಿದೆ ಎಂದು ಯಶ್ ಹೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ರಾಮ್ ಚರಣ್ ಮನೆಯೂಟ ಕಳುಹಿಸುತ್ತಿದ್ದರು ಎಂದು ಯಶ್ ಹೇಳಿದ್ದಾರೆ. 

KGF 2 ಸಂಜಯ್ ದತ್ ವೃತ್ತಿ ಜೀವನದ ವಿಶೇಷ ಸಿನಿಮಾ; ಮಾನ್ಯತಾ ದತ್

'ನಾನು ಶೂಟಿಂಗ್ ಅಥವಾ ಇತರೆ ವಿಚಾರಗಳಿಗೆ ಹೈದರಾಬಾದ್ ಬಂದಾಗ ರಾಮ್ ಚರಣ್ ನನಗೆ ಮನೆಯಲ್ಲಿ ಊಟ ತಯಾರಿಸಿ ಕಳುಹಿಸುತ್ತಿದ್ದರು' ಎಂದು ಹೇಳಿದ್ದಾರೆ. ಇನ್ನು ಜೂ ಎನ್ ಟಿ ಆರ್ ಮನೆಗೂ ಭೇಟಿ ನೀಡಿರುವುದಾಗಿ ಹೇಳಿದ್ದಾರೆ. ಜೂ.ಎನ್ ಟಿ ಆರ್ ವೈಯಕ್ತಿಕವಾಗಿ ಮನೆಗೆ ಆಹ್ವಾನ ನೀಡಿದ್ದರು. ಊಟಕ್ಕೆ ಕರೆದಿದ್ದರು. ಅವರ ಕುಟುಂಬ ಅದರಲ್ಲೂ ವಿಶೇಷವಾಗಿ ಅವರ ತಾಯಿ ನೀಡಿದ ಆತಿಥ್ಯ ಬೇರೆ ರೀತಿಯದ್ದೇ ಆಗಿತ್ತು ಎಂದು ಹೇಳಿದರು. ಎನ್ ಟಿ ಆರ್ ಕುಟುಂಬದವರ ಆತಿಥ್ಯವನ್ನು ನಾನು ನನ್ನ ಜೀವನದಲ್ಲೇ ಮರೆಯಲ್ಲ ಎಂದು ಹೇಳಿದರು. 

'ಜೂ. ಎನ್ ಟಿ ಆರ್ ತಾಯಿ ಸ್ವೀಟ್ ಹಾರ್ಟ್ ವ್ಯಕ್ತಿ. ನನ್ನನ್ನು ಅದ್ಭುತವಾಗಿ ನೋಡಿಕೊಂಡರು. ನಮ್ಮ ಬಾಂಧವ್ಯ ಮತ್ತಷ್ಟು ಬಲವಾಗಲು ಕಾರಣ ಕನ್ನಡ ಎಂದು ನಾನು ಭಾವಿಸುತ್ತೇನೆ. ಜೂ. ಎನ್ ಟಿ ಆರ್ ಅವರ ತಾಯಿ ಕರ್ನಾಟಕದವರು. ಹಾಗಾಗಿ ಅವರೊಂದಿಗೆ ತುಂಬಾ ಚೆನ್ನಾಗಿ ಕನ್ನಡದಲ್ಲೇ ಮಾತನಾಡುತ್ತೇನೆ' ಎಂದು ಹೇಳಿದರು. ಕೆಜಿಎಫ್ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅಭಮಾನಿಗಳನ್ನು ಸಂಪಾದಿಸಿದ್ದಾರೆ. ಅಷ್ಟೆಯಲ್ಲ ಬೇರೆ ಭಾಷೆಯ ಸ್ಟಾರ್ ಕಲಾವಿದರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಜೊತೆಗಿನ ಬಾಂಧವ್ಯದ ಬಗ್ಗೆ ಯಶ್ ಬಹಿರಂಗ ಪಡಿಸಿದ್ದಾರೆ. 

KGF 2ನಲ್ಲಿ ಶ್ರುತಿ ತಂದೆ; ಸಿನಿಮಾ ನೋಡಿ ಹಿರಿಯ ನಟಿ ಹೇಳಿದ್ದೇನು?

ಕೆಜಿಎಫ್2 ಸಿನಿಮಾ ಮೊದಲ ಭಾಗಕ್ಕಿಂತ ರೋಚಕವಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪಾರ್ಟ್-2ನಲ್ಲಿ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಎಲ್ಲಾ ಭಾಷೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಕಿ ಭಾಯ್ ಮತ್ತು ಅಧೀರನನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?