ಪ್ರೇಯಸಿಯ ಸಾವನ್ನು ಸಂಭ್ರಮಿಸಿದ್ರಾ ನಟ: ಕೊರಿಯನ್ ಸೀರಿಸ್ ಪ್ರಿಯರ ದಂಗುಬಡಿಸಿದ ನಟಿಯ ಸಾವು

Published : Mar 13, 2025, 01:51 PM ISTUpdated : Mar 13, 2025, 07:17 PM IST
ಪ್ರೇಯಸಿಯ  ಸಾವನ್ನು ಸಂಭ್ರಮಿಸಿದ್ರಾ ನಟ: ಕೊರಿಯನ್ ಸೀರಿಸ್ ಪ್ರಿಯರ ದಂಗುಬಡಿಸಿದ ನಟಿಯ ಸಾವು

ಸಾರಾಂಶ

ಕೊರಿಯನ್ ನಟಿ ಕಿಮ್ ಸೇ-ರಾನ್ ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಪ್ರಿಯಕರ ಕಿಮ್ ಸೂ-ಹ್ಯುನ್ ಹುಟ್ಟುಹಬ್ಬದ ಆಚರಣೆ ವಿವಾದಕ್ಕೆ ಕಾರಣವಾಗಿದೆ. ಕಿಮ್ ಸೇ ರಾನ್ ಸಾವಿಗೆ ಕಿಮ್ ಸೂ-ಹ್ಯುನ್ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಕೊರಿಯನ್ ಸಿನಿಮಾಗಳು ಹಾಗೂ ಕೆ ಡ್ರಾಮಾಗಳು ಸೀರಿಸ್‌ಗಳು ಈಗ ಸಾಕಷ್ಟು ಫೇಮಸ್ ಆಗಿವೆ ಬಹುತೇಕ ಭಾರತೀಯ ಯುವ ಸಮೂಹ ಕೆ ಡ್ರಾಮಾಗಳ ಅಭಿಮಾನಿಗಳಾಗಿದ್ದು, ಕೊರಿಯನ್‌ ನಟನಟಿಯರ ಸೀರಿಸ್‌ಗಳಿಗೆ ಭಾರತದ ಯುವ ಸಮೂಹ ಫಿದಾ ಆಗಿದೆ. ಹೀಗಿರುವಾಗ ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ಪ್ರಸಿದ್ಧ ಕೊರಿಯನ್ ನಟಿ ನಟಿ ಕಿಮ್ ಸೇ-ರಾನ್ ಅವರ ಸಾವು ಹಾಗೂ ಅದೇ ದಿನ ಆಕೆಯ ಪ್ರಿಯಕರನ ಬರ್ತ್‌ಡೇ ಸೆಲೆಬ್ರೇಷನ್ ಪೋಸ್ಟ್‌ಗಳು  ಹಲವು ಊಹಾಪೋಹಾಗಳು ಹಾಗೂ ವಿವಾದಗಳನ್ನು ಸೃಷ್ಟಿಸಿದ್ದು ಅವರ ಅಭಿಮಾನಿಗಳನ್ನು ದಂಗು ಬಡಿಸಿವೆ. ಹಾಗಿದ್ರೆ ಈ ಕಿಮ್ ಸೇ ರಾನ್ ಯಾರು ಕೇವಲ 25ನೇ ವರ್ಷಕ್ಕೆ ಬದುಕಿಗೆ ಗುಡ್‌ಬಾಯ್‌ ಹೇಳಿದ ಈಕೆಗೂ ಈಕೆಗಿಂತ ಸರಿಸುಮಾರು 12 ವರ್ಷ ದೊಡ್ಡವನಾದ ಮತ್ತೊಬ್ಬ ನಟ ಕಿಮ್ ಸೂ-ಹ್ಯುನ್ ಅವರಿಗೂ ಏನು ಸಂಬಂಧ ಈ ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ. 

ಯಾರು ಕಿಮ್ ಸೇ ರಾನ್?
ಕಿಮ್ ಸೇ-ರಾನ್ ದಕ್ಷಿಣ ಕೊರಿಯಾದ ಖ್ಯಾತ ನಟಿ. 2000ನೇ ಇಸವಿಯ ಜೂನ್ 31 ರಂದು ಜನಿಸಿದ ಕಿಮ್ ಕೇವಲ ಒಂದು ವರ್ಷವಿರುವಾಗಲೇ ಬಾಲ ರೂಪದರ್ಶಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ಹಾಗೂ 9ನೇ ವರ್ಷಕ್ಕೆ ಅಂದರೆ 2009 ರಲ್ಲಿ 'ಎ ಬ್ರಾಂಡ್ ನ್ಯೂ ಲೈಫ್' ಸಿನಿಮಾದ ಮೂಲಕ ಕೊರಿಯನ್‌ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ನಟನೆಯ 'ದಿ ಮ್ಯಾನ್ ಫ್ರಮ್ ನೋವೇರ್' ಅವರಿಗೆ ಸಾಕಷ್ಟು ಜನಮನ್ನಣೆ ತಂದು ಕೊಟ್ಟಿತ್ತು. ತಮ್ಮ ಉತ್ತಮ ನಟನೆಯ ಕಾರಣಕ್ಕೆ ಅಲ್ಲಿನ ಬೇಕ್ಸಾಂಗ್ ಆರ್ಟ್ಸ್ ಪ್ರಶಸ್ತಿಗಳಿಗೆ ಅವರು ನಾಮನಿರ್ದೇಶನಗೊಂಡಿದ್ದರು. ಇಷ್ಟೊಂದು ಸಿನಿಮಾ ಹಿನ್ನೆಲೆ ಇದ್ದ ನಟಿ ಫೆಬ್ರವರಿ 16ರಂದು ಕೊರಿಯಾದ ಸಿಯೋಲ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಹಠಾತ್ ನಿಧನರಾಗಿದ್ದರು. ಆದರೆ ಅವರ ಸಾವಿನ ದಿನವೇ ಅವರ ಪ್ರಿಯಕರನ ಹುಟ್ಟುಹಬ್ಬದ ಪೋಸ್ಟ್ ಹಾಕಿದ್ದು ಅದು ಈಗ ಸಾಕಷ್ಟು ವಿವಾದ ಸೃಷ್ಟಿಸಿದೆ. ತಮ್ಮ ಮಗಳ ಸಾವಿಗೆ ಆಕೆಯ ಪ್ರಿಯಕರ ಕಿಮ್ ಸೂ-ಹ್ಯುನ್ ಕಾರಣ ಎಂದು ಕಿಮ್ ಸೇ-ರಾನ್‌ ಪೋಷಕರು ದೂರಿದ ಬೆನ್ನಲೇ ಕಿಮ್ ಸೂ-ಹ್ಯುನ್ ಅವರ ಬರ್ತ್‌ಡೇ ಸೆಲೆಬ್ರೇಷನ್ ಭಾರಿ ವಿವಾದ ಸೃಷ್ಟಿಸಿದ್ದು, ಅನೇಕರು ಆತ ಪ್ರೇಯಸಿಯ ಸಾವನ್ನು ಸಂಭ್ರಮಿಸಿದ ಎಂದು ಆರೋಪಿಸಿದ್ದಾರೆ. 

 

ಈ ವ್ಯಾಲೆಂಟೈನ್ಸ್ ಡೇಗೆ 6 ರೋಮ್ಯಾಂಟಿಕ್ ಕೆ-ಡ್ರಾಮಾಗಳು

ಹಾಗಿದ್ರೆ ಕಿಮ್ ಸೇ ರಾನ್ ಪ್ರಿಯಕರ ಕಿಮ್ ಸೂ-ಹ್ಯುನ್ ಯಾರು? 
ಕಿಮ್‌ ಸೇ ರಾನ್ ಪ್ರಿಯಕರ ಕಿಮ್ ಸೂ ಹ್ಯುನ್ ಕೂಡ ಸಾಮಾನ್ಯ ವ್ಯಕ್ತಿಯೇನಲ್ಲ, ದಕ್ಷಿಣ ಕೊರಿಯಾದ ಅತೀ ಹೆಚ್ಚು ಬೇಡಿಕೆಯ ನಟ. 2020ರಲ್ಲಿ ಈತ ಕೊರಿಯಾದ ಅತೀಹೆಚ್ಚು ಸಂಭಾವನೆ ಗಳಿಸುವ ನಟ ಎಂದು ಗುರುತಿಸಿಕೊಂಡಿದ್ದರು. 1988ರ ಫೆಬ್ರವರಿ 16ರಂದು ಜನಿಸಿದ ಕಿಮ್ ಸೂ-ಹ್ಯುನ್‌ಗೆ ಈಗ ಬರೋಬ್ಬರಿ 37 ವರ್ಷ, ತಮ್ಮ ಅದ್ಭುತ ನಟನೆಗಾಗಿ ಕಿಮ್ ಸೂ-ಹ್ಯುನ್‌ಗೆ ಐದು ಬೇಕ್ಸಾಂಗ್ ಕಲಾ ಪ್ರಶಸ್ತಿಗಳು, ಎರಡು ಗ್ರ್ಯಾಂಡ್ ಬೆಲ್ ಪ್ರಶಸ್ತಿಗಳು ಮತ್ತು ಒಂದು ಬ್ಲೂ ಡ್ರ್ಯಾಗನ್ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಫೋರ್ಬ್ಸ್ ನಿಯತಕಾಲಿಕೆಯ 30 ಹಾಗೂ 40 ರೊಳಗಿನ  ಪವರ್ ಸೆಲೆಬ್ರಿಟಿ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ.

 

ಅಪ್ರಾಪ್ತೆಯಾಗಿದ್ದ ಕಿಮ್ ಸೇ ರಾನ್ ಜೊತೆ ಸಂಬಂಧ?
ಇಂತಹ ಖ್ಯಾತ ನಟ ಕಿಮ್ ಸೂ-ಹ್ಯುನ್ ತನಗಿಂತ 12 ವರ್ಷ ಚಿಕ್ಕವಳಾದ ಕಿಮ್ ಸೇ ರಾನ್ ಕೊತೆ ಸಂಬಂಧ ಹೊಂದಿದ್ದರು ಎಂದು ಆಕೆಯ ಸಾವಿನ ನಂತರ ಕಿಮ್ ಸೇ ರಾನ್ ಕುಟುಂಬದವರು ಆರೋಪಿಸಿದ್ದಾರೆ. ಆಕೆಯ ಚಿಕ್ಕಮ್ಮ ಕಿಮ್ ಸೂ-ಹ್ಯುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟ ಕಿಮ್ ಸೂ-ಹ್ಯುನ್ ಅವರು ಕಿಮ್ ಸೇ ರಾನ್ ಜೊತೆ ಆರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಅವರು ರಿಲೇಷನ್‌ಶಿಪ್‌ನಲ್ಲಿದ್ದ ಸಮಯದಲ್ಲಿ ಆಕೆಗೆ ಕೇವಲ 15 ವರ್ಷ ವಯಸ್ಸಾಗಿತ್ತು. ಆದರೆ 2022ರಲ್ಲಿ ಕಿಮ್ ಸೇ-ರಾನ್ ಅವರ ಡಿಯುಐ ಪ್ರಕರಣದ ನಂತರ ಕಿಮ್ ಸೂ-ಹ್ಯುನ್ ಆಕೆಯಿಂದ ದೂರವಾದ ಎಂದು ಅವರು ಗ್ಯಾರೊಸೆರೊ ಸಂಶೋಧನಾ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಅವರ  ಕಿಮ್ ಸೂ-ಹ್ಯುನ್ ಅವರ ಏಜೆನ್ಸಿಯಾದ ಗೋಲ್ಡ್ ಮೆಡಲಿಸ್ಟ್ ಕಿಮ್ ಸೇ-ರಾನ್ ಮೇಲೆ ಆರ್ಥಿಕ ತೊಂದರೆಗಳನ್ನು ಉಂಟುಮಾಡಿದೆ. ಹೀಗಾಗಿ ಇದು ಆಕೆಯ ದುರಂತ ಸಾವಿಗೆ ಕಾರಣವಾಯಿತು ಎಂದು ಅವರು ಆರೋಪಿಸಿದ್ದಾರೆ.

ನಿಮಗೆ ಅಡಿಕ್ಷನ್ ಹಿಡಿಸೋ ಮಟ್ಟಕ್ಕೆ ಆವರಿಸೋ ಕೊರಿಯನ್ ಡ್ರಾಮಾಗಳಿವು.. ಒಟಿಟಿಯಲ್ಲಿ ನೋಡಿ

ಆರೋಪ ನಿರಾಕರಿಸಿದ ಕಿಮ್ ಸೂ-ಹ್ಯುನ್ ಏಜೆನ್ಸಿ
ಆದರೆ ನಟಿಯ ಚಿಕ್ಕಮ್ಮ ಮಾಡಿದ ಎಲ್ಲಾ ಆರೋಪಗಳನ್ನು  ಕಿಮ್ ಸೂ-ಹ್ಯುನ್ ಅವರ ಏಜೆನ್ಸಿ ತಳ್ಳಿ ಹಾಕಿದೆ. ಈ ಆರೋಪಗಳೆಲ್ಲಾ ಸುಳ್ಲು ಹೇಳಿಕೆಗಳು ಈ ಬಗ್ಗೆ ಮುಂದೆ ಧೀರ್ಘ ಹೇಳಿಕೆ ನೀಡುವುದಾಗಿ ಏಜೆನ್ಸಿ ಹೇಳಿದೆ.

2018ರಲ್ಲಿ ಬರೆದಿದ್ದ ಪ್ರೇಮ ಪತ್ರ ಬಿಡುಗಡೆ
ಕೊರಿಯಾದಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅಗತ್ಯವಿದ್ದು, ಈ ಸಮಯದಲ್ಲಿ ನಟ  ಕಿಮ್ ಸೂ-ಹ್ಯುನ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸುವ ವೇಳೆ ಪ್ರೇಯಸಿ ನಟಿ  ಕಿಮ್ ಸೇ ರಾನ್‌ಗೆ ಬರೆದ ಪ್ರೇಮ ಪತ್ರವೂ ಈಗ ಈ ವಿವಾದದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು ವೈರಲ್ ಆಗುತ್ತಿದೆ. 2018ರ ಜೂನ್ 9 ರಂದು ಬರೆದ ಪತ್ರ ಇದು ಎನ್ನಲಾಗುತ್ತಿದೆ. ಇದರ ಜೊತೆಗೆ ಕಿಮ್ ಸೂ ಹ್ಯುನ್ ಅವರು ಕಿಮ್ ಸೇ ರಾನ್ ಕೆನ್ನೆಗೆ ಮುತ್ತಿಡುತ್ತಿರುವ ಫೋಟೋಗಳು ಕೂಡ ವೈರಲ್ ಆಗಿವೆ. 

 

ಇತ್ತ ಕಿಮ್ ಸೇ ರಾನ್ ಜೊತೆಗಿನ ಸಂಬಂಧಗಳ ಬಗ್ಗೆ ಊಹಾಪೋಹಾಗಳು ಹಬ್ಬುತ್ತಿದ್ದಂತೆ ನಟ  ಕಿಮ್ ಸೂ-ಹ್ಯುನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?