2016ರಲ್ಲಿ ಕೊರಟಾಲ ಶಿವ ಅವರು 'ಜನತಾ ಗ್ಯಾರೇಜ್' ಎಂಬ ಸಿನಿಮಾ ನಿರ್ಮಿಸಿದ್ದರು. ಅದರಲ್ಲಿ ಜ್ಯೂನಿಯರ್ ಎನ್‌ಟಿಆರ್ ನಟಿಸಿದ್ದರು.
ತೆಲುಗು ಸ್ಟಾರ್ ನಟ ಜ್ಯೂನಿಯುರ್ ಎನ್‌ಟಿಆರ್ ಅವರು ತಮ್ಮ ಫ್ಯಾನ್ಸ್‌ಗಳಿಗೆ ಹೊಸ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರ ನಟನೆಯ ದೇವರ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಜತೆಗೆ, ದೇವರ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಜನವರಿ 8ರಂದು ಬಿಡುಗಡೆ ಆಗಲಿದೆ ಎಂಬ ಘೋಷಣೆಯಾಗಿದೆ. ದೇವರ ಹೊಸ ಪೋಸ್ಟರ್‌ನಲ್ಲಿ ಜ್ಯೂನಿಯರ್ ಎನ್‌ಟಿಆರ್ ಖಡಕ್ ಲುಕ್‌ನಲ್ಲಿ ಹಡಗಿನ ಮೇಲೆ ನಿಂತಿರುವುದನ್ನು ಕಾಣಬಹುದು. ಕೊರಟಾಲ ಶಿವ ನಿರ್ದೇಶನದ ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ.
ದೇವರ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ಸುಂದರಿ, ದಿವಂಗತ ನಟಿ ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ನಟಿಸಿದ್ದಾರೆ. ಹಾಗೇ ಬೈರ ಹೆಸರಿನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ನಟಿಸಿದ್ದು, ಜಾನ್ವಿ ಹಾಗೂ ಸೈಫ್ ಇಬ್ಬರಿಗೂ ಇದು ಮೊದಲ ತೆಲುಗು ಚಿತ್ರವಾಗಿದೆ. ನಟಿ ಶ್ರೀದೇವಿ ತೆಲುಗು, ತಮಿಳು ಚಿತ್ರಗಳ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದರು. ಈಗ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್‌ನಿಂದ ಸೌತ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಡಿವೋರ್ಸ್ ತೆಗೆದುಕೊಳ್ಳುವ ಮಾತಾಡಿದ ಅಂಕಿತಾ; ವಿಕ್ಕಿ ಬಗ್ಗೆ ಅನುಕಂಪ ತೋರಿದ್ರಾ ಮುನಾವರ್!
2016ರಲ್ಲಿ ಕೊರಟಾಲ ಶಿವ ಅವರು 'ಜನತಾ ಗ್ಯಾರೇಜ್' ಎಂಬ ಸಿನಿಮಾ ನಿರ್ಮಿಸಿದ್ದರು. ಅದರಲ್ಲಿ ಜ್ಯೂನಿಯರ್ ಎನ್‌ಟಿಆರ್ ನಟಿಸಿದ್ದರು. ಈಗ ಬಹಳಷ್ಟು ವರ್ಷಗಳ ಬಳಿಕ ಮತ್ತೆ ಅದೇ ನಿರ್ದೇಶಕರ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ನಟಿಸಿದಂತಾಗಿದೆ. ದೇವರ ಚಿತ್ರವು 5 ಏಪ್ರಿಲ್ 2024ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದು, ಅಪ್ಪ-ಮಗನ ಪಾತ್ರವನ್ನು ಒಬ್ಬರೇ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಇದೊಂದು ಪಕ್ಕಾ ಆಕ್ಷನ್ ಚಿತ್ರವಾಗಿದ್ದು, ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ದೇವರ ಚಿತ್ರ ಬಿಡುಗಡೆ ಆಗಲಿದೆಯಂತೆ.
ಅಮ್ಮನನ್ನು ಒಮ್ಮೆ ಕೂಡ ಹಗ್ ಮಾಡಿರಲಿಲ್ಲ, ನನ್ನ ಪ್ರಪಂಚದಲ್ಲಿಯೇ ತೇಲಾಡುತ್ತಿದ್ದೆ; ಪ್ರಿಯಾಂಕಾ ಚೋಪ್ರಾ
ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಈ ಸಂಸ್ಥೆಯಿಂದ ಹೊಸ ಸುದ್ದಿಯೊಂದು ಬಂದಿದ್ದು, ಈ ನಿರ್ಮಾಣ ಸಂಸ್ಥೆ ಜ್ಯೂನಿಯರ್ ಎನ್‌ಟಿಆರ್ ನಾಯಕತ್ವದ ತಮ್ಮ ಮುಂದಿನ ಚಿತ್ರಕ್ಕೆ ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಇನ್ನೂ ಮಾತುಕತೆ ಹಂತದಲ್ಲಿದ್ದು, ಪ್ರಿಯಾಂಕಾ ಸಹಿ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ನಿಮ್ಮ ನಿಜವಾದ ಮನೆ ಅಲ್ಲೆಲೋ ಇದೆ, ನಿಮ್ಮ ದೇಹವೂ ನಿಮ್ಮದಲ್ಲ; ಕಂಗನಾ ರಣಾವತ್