ನಟ ಮನೀಶ್ ಪಾಲ್‌ಗೆ ಕೊರೋನಾ ಪಾಸಿಟಿವ್; 'ಸೋಂಕು ಕಡಿಮೆ ಆಗಿಲ್ಲ ಸರ್'?

Suvarna News   | Asianet News
Published : Dec 07, 2020, 03:34 PM ISTUpdated : Dec 07, 2020, 03:48 PM IST
ನಟ ಮನೀಶ್ ಪಾಲ್‌ಗೆ ಕೊರೋನಾ ಪಾಸಿಟಿವ್; 'ಸೋಂಕು  ಕಡಿಮೆ ಆಗಿಲ್ಲ ಸರ್'?

ಸಾರಾಂಶ

'ಜಗ್ ಜಗ್ ಜೀಯೋ' ಸಿನಿಮಾ ಚಿತ್ರೀಕರಣದಲ್ಲಿ ಮನೀಶ್. ಜ್ವರ ಹೆಚ್ಚಾಗುತ್ತಿದ್ದ ಕಾರಣ ಕೊರೋನಾ ಪರೀಕ್ಷೆ. ಮುಂಬೈನಲ್ಲಿ ಕ್ವಾರಂಟೈನ್?

ಎಲ್ಲೆಡೆ ಕೊರೋನಾ ಸೋಂಕು ಕಡಿಮೆಯಾಗುತ್ತಿದ್ದರೆ, ಬಾಲಿವುಡ್‌ನಲ್ಲಿ ಮಾತ್ರ ಹೆಚ್ಚಾಗುತ್ತಿದೆ. ಸುರಕ್ಷಿತ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮಾಡುತ್ತಿದ್ದರೂ, ಯಾರನ್ನು ಬಿಡದೇ ಕಾಡುತ್ತಿದೆ ಕೊರೋನಾ. ಕೆಲವು ದಿನಗಳ ಹಿಂದೆ ನಟಿ ನೀತು ಕಪೂರ್, ವರುನ್ ಧವನ್‌ಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದ್ದು, ಏರ್‌ ಆ್ಯಂಬುಲೆನ್ಸ್ ಮೂಲಕ ಚಂಡೀಗಢದಿಂದ ಮುಂಬೈಗೆ ಮುರಳಿದರು. ಆದರೆ ವರುಣ್ ಮಾತ್ರ ಅಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರ್ದೇಶಕ ರಾಜ್‌ ಮೆಹತಾ ಹಾಗೂ ಅನಿಲ್ ಕಪೂರ್‌ಗೂ ಸೋಂಕು ಇರುವುದಾಗಿ ಸುದ್ದಿ ಹರಡಿತು, ಆದರೆ ರಾಜ್‌ಗೆ ಮಾತ್ರ ಕನ್‌ಫರ್ಮ್‌ ಆಗಿದೆ. ಇದೇ ಸಮಯದಲ್ಲಿ ನಟ ಮನೀಶ್‌ಗೂ ಸೋಂಕು ವಕ್ಕರಿಸಿಕೊಂಡಿದೆ. ಕೆಲವು ದಿನಗಳ ಹಿಂದಷ್ಟೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈಗ ಕ್ವಾರಂಟೈನ್ ಆಗಿದ್ದಾರೆ.

ಭಾರತದ ರಸಂಗೆ ಅಮೆರಿಕನ್ನರು ಫಿದಾ..! ವೈರಲ್ ಆಯ್ತು ಸಿಂಪಲ್ ಅಡುಗೆ

ಖಾಸಗಿ ವಾಹಿನಿಯೊಂದಕ್ಕೆ ಮನೀಶ್ ನೀಡಿರುವ ಮಾಹಿತಿ ಪ್ರಕಾರ ಚಿತ್ರೀಕರಣ ಮುಗಿಸಿ ಮುಂಬೈಗೆ ಆಗಮಿಸಿದ ನಂತರ ಜ್ವರ ಬಂದಿತ್ತು. ಅದಕ್ಕೆ  ಕೋವಿಡ್19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪಾಸಿಟಿವ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ, ಮನೀಶ್ ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಎಲ್ಲಿ ಕ್ವಾರಂಟೈನ್ ಆಗಿದ್ದಾರೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಿಚಾರಕ್ಕೆ ಉತ್ತರ ಸಿಕ್ಕಿಲ್ಲ.

ಚಿತ್ರದ ಪ್ರಮುಖ ಪಾತ್ರಧಾರಿಗಳಿಗೆ ಸೋಂಕು ಕಾಣಿಸಿಕೊಂಡ ಕಾರಣ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಅನಿಲ್ ಕಪೂರ್ ಹಾಗೂ ಕಿಯಾರಾಗೆ ನೆಗೆಟಿವ್ ಎಂದು ತಿಳಿದು ಬಂದರೂ, ಕುಟುಂಬದ ಸುರಕ್ಷತಾ ದೃಷ್ಟಿಯಿಂದ ಕ್ವಾರಂಟೈನ್ ಆಗಿದ್ದಾರೆ. 

ಕೊರೋನಾ ಸೋಲಿಸಿದ ನಂತರ 106 ವರ್ಷದ ಬರ್ತ್‌ಡೇ ಆಚರಣೆ..!

ಇನ್ನು ಮನೀಶ್ ಸೋಷಿಯಲ್ ಮೀಡಿಯಾದಲ್ಲೂ ತುಂಬಾನೇ ಫೇಮಸ್‌. ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಮನೀಶ್‌ಗೆ ಧೈರ್ಯ ಹೇಳಿದ್ದಾರೆ. 'ಸೋಂಕು ಕಡಿಮೆ ಆಗಿಲ್ಲ, ಸರ್ ನೀವು ಹುಷಾರಾಗಿರಿ' ಎಂದು ಕಮೆಂಟ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?