ಚಿರಂಜೀವಿ ಪುತ್ರಿ ಬಾಳಲ್ಲಿ ಮೂರನೆಯವ ಎಂಟ್ರಿ? ಕುತೂಹಲ ಮೂಡಿಸಿದ ಇನ್​ಸ್ಟಾ ಪೋಸ್ಟ್​

By Suvarna News  |  First Published Jan 3, 2023, 9:13 PM IST

ಇಬ್ಬರು ಗಂಡಂದಿರಿಂದ ದೂರವಾಗಿರುವ ನಟ ಚಿರಂಜೀವಿ ಪುತ್ರಿ ಶ್ರೀಜಾ ಬಾಳಲ್ಲಿ ಮೂರನೆಯವನ ಎಂಟ್ರಿ ಆಯ್ತಾ? ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಶ್ರೀಜಾ ಹೊಸ ಇನ್‌ಸ್ಟಾ ಪೋಸ್ಟ್ ಮೂಲಕ ಮಹತ್ವದ ಸುಳಿವು ನೀಡಿದ್ದಾರೆ. 


ಮೆಘಾಸ್ಟಾರ್​ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಂತ ಇದೇನೂ ಹೊಸ ಸುದ್ದಿಯಲ್ಲ. ಕೆಲ ತಿಂಗಳಿನಿಂದ ಈ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಲೇ ಇದೆ. ಅದರೆ ಅದಕ್ಕೆ ಸಾಕ್ಷಿ ಎಂಬಂತೆ ಶ್ರೀಜಾ ಮಾಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ ಒಂದು ವೈರಲ್​ ಆಗಿದ್ದು, ಬಿಸಿಬಿಸಿ ಚರ್ಚೆ ಶುರುವಾಗಿದೆ. 

ಅಷ್ಟಕ್ಕೂ ಶ್ರೀಜಾ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವುದೇನೆಂದರೆ, "ಡಿಯರ್ 2022, ನೀನು ನನಗೆ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡಿಸಿರುವೆ.  ನನ್ನ ಬಗ್ಗೆ ಚೆನ್ನಾಗಿ ಅರಿತಿರುವ, ನನ್ನನ್ನು ಬಹಳ ಪ್ರೀತಿಸುವ, ತುಂಬಾ ಕೇರ್​ ಮಾಡುವ, ಕಷ್ಟ- ಸುಖದಲ್ಲಿ ನನಗೆ ಸಾಥ್​ ನೀಡುತ್ತಿರುವ, ಯಾವಾಗಲೂ  ನನಗೆ ಬೆಂಬಲವಾಗಿ ನಿಲ್ಲುವ ವ್ಯಕ್ತಿಯನ್ನು ನೀನು ಭೇಟಿ ಮಾಡಿಸಿರುವೆ. ನನ್ನ- ಅವನ ಭೇಟಿ ನಿಜಕ್ಕೂ ಬಹುದೊಡ್ಡ ಅದ್ಭುತ. ಹೊಸ ಪಯಣ ಶುರುವಾಗುತ್ತಿದೆ" ಎಂದಿದ್ದಾರೆ.

ಸಿಹಿ ಸುದ್ದಿ ಕೊಟ್ಟ ರಾಮ್ ಚರಣ್: ಮೆಗಾಸ್ಟಾರ್ ಚಿರಂಜೀವಿ ಮನೆಗೆ ಹೊಸ ಅತಿಥಿ

ಇಷ್ಟೆಲ್ಲಾ ಖುಲ್ಲಂಖುಲ್ಲಾ ಹೇಳಿರುವಾಗ ನಿಜಕ್ಕೂ ಶ್ರೀಜಾ ಬದುಕಲ್ಲಿ ಮೂರನೆಯ ವ್ಯಕ್ತಿಯ ಪ್ರವೇಶ ಆಗಿದೆ ಎಂದೇ ಹೇಳಲಾಗುತ್ತಿದೆ.

ಶ್ರೀಜಾ ಬದುಕಿನಲ್ಲಿ ಬಂದ ಇಬ್ಬರು ಯಾರು?
ಅಷ್ಟಕ್ಕೂ ಚಿರಂಜೀವಿ ಪುತ್ರಿ ಬದುಕಲ್ಲಿ ಬಂದು ದೂರವಾದ ಆ ಇಬ್ಬರು ಯಾರು ಎಂಬ ಹಿನ್ನೆಲೆಗೆ ಹೋಗುವುದಾದರೆ, ಶ್ರೀಜಾ ಮೊದಲು ಮದುವೆಯಾದಾಗ ಅವರ ವಯಸ್ಸು  19 ವರ್ಷ. ಸಿರೀಶ್ ಭಾರಧ್ವಜ್ ಎಂಬುವವರನ್ನು ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿದ್ದರು. ಎಲ್ಲರ ವಿರೋಧದ ನಡುವೆಯೇ ಮದುವೆಯನ್ನೂ ಆಗಿ ಕೊನೆಗೆ ಗಂಡನಿಂದ ದೂರವಾದರು. ಗಂಡನ ಮನೆಯಲ್ಲಿ ಚಿತ್ರಹಿಂಸೆ ಕೊಡುತ್ತಾರೆ ಎಂದು ದೂರಿದ್ದ ಶ್ರೀಜಾ, 2011ರಲ್ಲಿ ಡಿವೋರ್ಸ್​ ನೀಡಿದ್ದರು.

ಐದು ವರ್ಷ ಸುಮ್ಮನೇ ಇದ್ದ ಶ್ರೀಜಾ ಮತ್ತೆ ಸುದ್ದಿಗೆ ಬಂದದ್ದು 2016ರಲ್ಲಿ. ಉದ್ಯಮಿ ಕಲ್ಯಾಣ್ ದೇವ್ ಅವರ ಜೊತೆ ಶ್ರೀಜಾ ಮದುವೆಯಾಯಿತು. ಈ ಮದುವೆಯನ್ನು ತವರು ಮನೆಯವರೇ ನಿಂತು ವಿಜೃಂಭಣೆಯಿಂದ ನೆರವೇರಿಸಿಕೊಟ್ಟಿದ್ದರು. ಮದುವೆಯಾದ ಮೇಲೆ ಕಲ್ಯಾಣ್ ಹಣೆಬರಹವೇ ಬದಲಾಯಿತು. ಅವರೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಅದೇನಾಯಿತೋ ಗೊತ್ತಿಲ್ಲ. ದಂಪತಿ ದೂರವಾಗುವ ಯೋಚನೆ ಮಾಡಿದ್ದರು. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬರದಿದ್ದರೂ ಇನ್​ಸ್ಟಾಗ್ರಾಮ್​ನಲ್ಲಿ ಶ್ರೀಜಾ, ಪತಿಯ ಹೆಸರನ್ನು ತೆಗೆದು ಸುದ್ದಿ ಮಾಡಿದ್ದಳು. ಮಾತ್ರವಲ್ಲದೇ ಕಲ್ಯಾಣ್​ ದೇವ್​ರನ್ನು ಇನ್​ಸ್ಟಾಗ್ರಾಮ್​  ಖಾತೆಯಿಂದ ಅನ್​ಫಾಲೋ ಮಾಡಿದ್ದರು, ಇಬ್ಬರೂ ಒಟ್ಟಿಗಿದ್ದ ಪೋಸ್ಟ್​ ಡಿಲೀಟ್​ ಮಾಡಿದ್ದರು. 

Tap to resize

Latest Videos

ಕೋಟಿ ಆಸ್ತಿ ಒಡತಿ; ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಇವ್ರೇ ನೋಡಿ....

ಆದರೆ, ಈವರೆಗೂ ಈ ಸಂಬಂಧ ಏನಾಗಿದೆ ಎಂಬ ಬಗ್ಗೆ ಎರಡೂ ಕುಟುಂಬದವರೂ ಗಪ್​ಚುಪ್​ ಇವೆ. ವಿಚ್ಛೇದನ ಪಡೆದುಕೊಂಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಕಿಂಚಿತ್​ ಮಾಹಿತಿ ಅಧಿಕೃತವಾಗಿ ಹೊರಕ್ಕೆ ಬಂದಿಲ್ಲ.
ಆದರೆ ಈ ನಡುವೆಯೇ, ತಮ್ಮ ತಾಯಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಕಲ್ಯಾಣ್​ ಅವರು ಮಾಡಿದ್ದ ಪೋಸ್ಟ್​ ಬಿರುಕುಬಿಟ್ಟ ದಾಂಪತ್ಯಕ್ಕೆ ಪೂರಕ ಎನ್ನುವಂತಿತ್ತು. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕಲ್ಯಾಣ್​ ಅವರು, "ಅಮ್ಮಾ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಯಾಕೋ  ಜೀವನ ಕಠಿಣ ಎನಿಸುತ್ತಿದೆ. ಇಂಥ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ನನಗೆ ಬೇಕು.  ನಿಮ್ಮ ಪ್ರೀತಿ ನನ್ನ ಮೇಲಿದ್ದರೆ, ಎಲ್ಲಾ ಅಡೆತಡೆಗಳನ್ನೂ ತಡೆದುಕೊಳ್ಳುವ ಶಕ್ತಿ ನನಗೆ ಬರುತ್ತದೆ" ಎಂದಿದ್ದರು. 

ಈ ನಡುವೆಯೇ ಈಗ ಹೊಸ ವರ್ಷದ ಗಿಫ್ಟ್​ ಎಂಬಂತೆ  ಶ್ರೀಜಾ ಮೂರನೆಯ ವ್ಯಕ್ತಿಯ ಸುಳಿವು ಕೊಟ್ಟಿದ್ದರಿಂದ ಮುಂದೇನಾಗಬಹುದು ಎಂದು ಅಭಿಮಾನಿಗಳು ಕಾತರದಿಂದ  ಕಾಯುವಂತಾಗಿದೆ. 

 

 
 
 
 
 
 
 
 
 
 
 
 
 
 
 
 

A post shared by Sreeja (@sreejakonidela)

 

click me!