
'ಜೋಧಾ ಅಕ್ಬರ್' (Jodha Akbar) ಧಾರವಾಹಿಯಲ್ಲಿ ಸಾಲಿಮಾ ಬೇಗಮ್ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮನೀಷಾ ಯಾದವ್ (Manisha Yadav) ಅಕ್ಟೋಬರ್ 1ರಂದು ಕೊನೆಯುಸಿರೆಳೆದಿದ್ದಾರೆ. ಪರಿಧಿ ಶರ್ಮಾ (Paridhi Sharma), ಮನೀಷಾ ನಿಧನ ಸುದ್ದಿಯನ್ನು ಬಹಿರಂಗಪಡಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.
'ಮನೀಷಾ ಯಾದವ್ ಇನ್ನಿಲ್ಲ ಎಂದು ತಿಳಿದು ಬೇಸರವಾಗುತ್ತಿದೆ. ಈ ವಿಷಯ ಕೇಳಿ ನನಗೆ ಶಾಕ್ ಆಯ್ತು. ಆಕೆಗೆ ಈಗಾಗಲೇ ಒಂದು ವರ್ಷದ ಮಗನಿದ್ದಾನೆ. ಮಗನ ಪರಿಸ್ಥಿತಿ ಕಂಡು ಇನ್ನೂ ಬೇಸರವಾಗುತ್ತಿದೆ. ಜೋಧಾ ಅಕ್ಬರ್ ಧಾರಾವಾಹಿ ಮುಗಿದ ಬಳಿಕ ನಾನು ಮನೀಷಾ ಜೊತೆ ಸಂಪರ್ಕದಲ್ಲಿ ಇರಲಿಲ್ಲ ಆದರೆ ಮೊಘಲ್ಸ್ (Mugals) ಎಂಬ ನಮ್ಮ ವಾಟ್ಸಪ್ ಗ್ರೂಪ್ (Whatsapp group) ಇತ್ತು ಅದರಲ್ಲಿ ಮನೀಷಾ ಕೂಡ ಇದ್ದರು. ಏನೇ ಮಹತ್ವದ ವಿಚಾರ ಇದ್ದರೂ ಆ ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ನಿನ್ನೆ ಸಂಜೆ ಆ ಗ್ರೂಪ್ ಮೂಲಕ ಮನೀಷಾ ನಿಧನದ ಸುದ್ದಿ ತಿಳಿಯಿತು' ಎಂದು ಪರಿಧಿ ಖಾಸಗಿ ಸಂದರ್ಶವೊಂದರಲ್ಲಿ ಹೇಳಿದ್ದಾರೆ.
'ಶೂಟಿಂಗ್ ವೇಳೆ ಮನೀಷಾ ಮತ್ತು ನಾನು ಸುಂದರ ಸಮಯ ಕಳೆದಿದ್ದೀವಿ. ಮನೀಷಾ ಎನರ್ಜಿ ತುಂಬಾ ಹೈ ಆಗಿತ್ತು. ಆಕೆ ಸದಾ ಖುಷಿಯಾಗಿರುತ್ತಿದ್ದಳು. ಅವಳ ಒಂದು ವರ್ಷದ ಮಗುವಿನ ಬಗ್ಗೆ ಇನ್ನೂ ಸಂಕಟವಾಗುತ್ತಿದೆ. ಅವಳ ಕುಟುಂಬಕ್ಕೆ (Family) ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ' ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ (Social media) ಆಕ್ವೀಟ್ ಆಗಿದ್ದ ಮನೀಷಾ ಜುಲೈ (July) ತಿಂಗಳಲ್ಲಿ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಪೋಟೋ ಹಂಚಿಕೊಂಡಿದ್ದರು. 'ಹ್ಯಾಪಿ ಬರ್ತ್‌ಡೇ ಮೈಬೇಬಿ ಎಲ್ಲ ಖುಷಿಯೂ ನಿನಗೆ ಸಿಗಲಿ' ಎಂದು ಬರೆದುಕೊಂಡಿದ್ದರು. ಪುತ್ರನ ಜೊತೆ ಆಗಾಗ ಮುದ್ದಾಗಿರುವ ಫೋಟೋ ಹಂಚಿಕೊಳ್ಳುತ್ತಿದ್ದರು. ಕೆಲವು ದಿನಗಳ ಹಿಂದೆ ಮನೀಷಾ ಮೊದಲ ಡೋಸ್ ವ್ಯಾಕ್ಸಿನ್ (Vaccine) ತೆಗೆದುಕೊಂಡಿರುವುದಾಗಿ ಫೋಟೋ ಹಂಚಿಕೊಂಡಿದ್ದರು. ಎರಡನೇ ಡೋಸ್ ಶೀಘ್ರದಲ್ಲಿ ತೆಗೆದುಕೊಳ್ಳುವೆ ಎಂದಿದ್ದರು.
ಮನೀಷಾ ಯಾದವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.