Divorce: ಅಧಿಕೃತವಾಗಿ ವಿಚ್ಛೇದನ ಬಗ್ಗೆ ಹಂಚಿಕೊಂಡ ಸಮಂತಾ, ನಾಗ ಚೈತನ್ಯ!

Suvarna News   | Asianet News
Published : Oct 02, 2021, 04:35 PM ISTUpdated : Oct 02, 2021, 06:05 PM IST
Divorce: ಅಧಿಕೃತವಾಗಿ ವಿಚ್ಛೇದನ ಬಗ್ಗೆ ಹಂಚಿಕೊಂಡ ಸಮಂತಾ, ನಾಗ ಚೈತನ್ಯ!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ವಿಚ್ಛೇದನದ ಗಾಳಿ ಸುದ್ದಿಗಳಿಗೆ ಟಾಲಿವುಡ್ ಕ್ಯೂಟ್ ದಂಪತಿ ಸಮಂತಾ ಮತ್ತು ನಾಗ ಚೈತನ್ಯ ಬ್ರೇಕ್ ಹಾಕಿದ್ದಾರೆ.

ಟಾಲಿವುಡ್ ಕ್ಯೂಟ್ ಕಪಲ್ ಎಂದೇ ಜನಪ್ರಿಯತೆ ಪಡೆದಿದ್ದ ಸಮಂತಾ ಮತ್ತು ನಾಗಚೈತನ್ಯ ವೈಯಕ್ತಿಕ ಜೀವನದ ಬಗ್ಗೆ ಹಲವು ದಿನಗಳಿಂದೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಭವಿಷ್ಯ ನಡಿಯುತ್ತಿದ್ದರು. ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನವೇ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದಾರೆ.

"

'ನಮ್ಮೆಲ್ಲಾ ಹಿತೈಷಿಗಳಿಗೆ. ಸಾಕಷ್ಟು ಚರ್ಚೆಗಳ ನಂತರ ಚೈತನ್ಯ ಹಾಗೂ ನಾನು ಗಂಡ- ಹೆಂಡತಿಯಾಗಿ ದೂರವಾಗುತ್ತಿದ್ದೀವಿ, ನಮ್ಮದೇ ಮಾರ್ಗದಲ್ಲಿ ಜೀವನ ನಡೆಸಲು ಇಚ್ಛಿಸಿದ್ದೇವೆ.  ದಶಕಗಳ ಕಾಲ ನಾವು ಸ್ನೇಹಿತರಾಗಿಲು ಅದೃಷ್ಟವಂತರಾಗಿದ್ದೆವು. ಅದೇ ಸ್ನೇಹ ನಮ್ಮ ಸಂಬಂಧದ ಮೂಲವಾಗಿತ್ತು. ನಮ್ಮ ನಡುವೆ ಯಾವಾಲೂ ಈ ವಿಶೇಷ ಬಾಂಧವ್ಯ ಇರುತ್ತದೆ. ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮದವರು ನಮ್ಮ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಜೊತೆಗೆ ನಿಲ್ಲಬೇಕು.  ಹಾಗೂ ನಮ್ಮ ಪ್ರೈವೇಸಿ ಗೌರವಿಸಿ ಎಂದು ಕೇಳಿಕೊಳ್ಳುತ್ತೇವೆ,' ಎಂದು ಸಮಂತಾ ಬರೆದುಕೊಂಡಿದ್ದಾರೆ. 

"

ನಾಗ ಚೈತನ್ಯ ಪತ್ನಿ ಸಮಂತಾರ ಫುಟ್‌ಸ್ಟೆಪ್ಸ್‌ ಫಾಲೋ ಮಾಡುತ್ತಿದ್ದಾರಾ?

ಅಕ್ಟೋಬರ್ 7, 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಂತಾ ಮೊದಲ ಸಿನಿಮಾ 'ಯೇ ಮಾಯಾ ಚೆಸವೇ'ದಲ್ಲಿ ನಾಗ ಚೈತನ್ಯಗೆ ಜೋಡಿಯಾಗಿ ನಟಿಸಿದ್ದರು. ಅಂದಿನಿಂದ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. 8 ವರ್ಷಗಳ ಕಾಲ ಇಬ್ಬರೂ ಸ್ನೇಹಿತರಾಗಿದ್ದು, ಪ್ರೀತಿಸಿ ಗುರು ಹಿರಿಯರ ಆಶೀರ್ವಾದ ಪಡೆದುಕೊಂಡು ಮದುವೆ ಆದರು. ಎರಡು ದಿನಗಳ ಕಾಲದ ಡೆಸ್ಟಿನೇಷನ್ ಮದುವೆ ಮಾಡಿಕೊಂಡರು. ಗೋವಾದಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಆಗಿದ್ದರು.  ಆನಂತರ ಕ್ರಿಶ್ಚಿಯನ್ ಸಂಪ್ರದಾಯವನ್ನೂ ಪಾಲಿಸಿದ್ದರು.  150 ಮಂದಿ ಭಾಗಿಯಾಗಿದ್ದ ಈ ಮದುವೆಗೆ 10 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದ್ದರು, ಎನ್ನಲಾಗಿದೆ. ಆಪ್ತ ಸಿನಿ ಸ್ನೇಹಿತರಿಗೆ ಇವರೇ ಸ್ಪೆಷಲ್ ವಿಮಾನ ಬುಕಿಂಗ್ ಕೂಡ ಮಾಡಿದ್ದರು. 

ಜನವರಿ 7,2017ರಲ್ಲಿ ಇಬ್ಬರೂ ಎಂಗೇಜ್‌ಮೆಂಟ್‌ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು. ನಿಶ್ಚಿತಾರ್ಥಕ್ಕೂ ಸಮಂತಾ ಭಾರತದ ಖ್ಯಾತ ಡಿಸೈನರ್‌ ಬಳಿ Ivory ಬಣ್ಣದ ಡ್ರೆಸ್ ಡಿಸೈನ್ ಮಾಡಿಸಿಕೊಂಡಿದ್ದರು. ಹೈದರಾಬಾದ್‌ನ ಎನ್‌ ಕನ್‌ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮವಿತ್ತು. ಅವರು ಪ್ರೀತಿ ಹೇಗೆ ಶುರುವಾಗಿತ್ತು, ಹೇಗೆಲ್ಲಾ ಲವ್ ಲೈಫ್ ಎಂಜಾಯ್ ಮಾಡಿದರು ಎಂದು ಈ ಸೀರೆ ಮೇಲೆ ಡಿಸೈನ್ ಮಾಡಲಾಗಿತ್ತು.

ಕೆಲವು ಮೂಲಗಳ ಪ್ರಕಾರ ಈ ವಿಚ್ಛೇದನ ನಂತರ ಈ ಸೀರೆಯನ್ನು ಆ್ಯಕ್ಷನ್ ಹಾಕುತ್ತಾರೆ ಎನ್ನಲಾಗಿದೆ. ಈ ಸೀರೆ ಕೋಟಿ ಬೆಲೆಯಲ್ಲಿ ಮಾರಾಟ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ನೆಟ್ಟಿಗರು. 

ಇಬ್ಬರೂ ವಿಚ್ಛೇದನ ವಿಚಾರ ಅಧಿಕೃತ ಪಡಿಸಿದ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಆದರೆ ಅಭಿಮಾನಿಗಳ ಪೇಜ್‌ನಲ್ಲಿ ನಾಗಚೈತನ್ಯ ಸಾಯಿ ಪಲ್ಲವಿ ಅವರನ್ನು ಮದುವೆ ಆಗುತ್ತಾರೆ ಎಂಬ ಹೊಸದೊಂದು ಗಾಸಿಪ್ ಹರಿದಾಡುತ್ತಿವೆ. ಒಟ್ಟಿನಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಈ ಕ್ಯೂಟ್ ಜೋಡಿ ಬ್ರೇಕ್ ಹಾಕಿದೆ. ಈ ಜೋಡಿ ಬೇರೆ ಆಗದಿರಲಿ ಎಂದು ಪ್ರಾರ್ಥಿಸುತ್ತಿದ್ದ ಅಭಿಮಾನಿಗಳಿಗೆ ಭ್ರಮನಿರಸನವಾಗಿದೆ. 

ಎಲ್ಲಾ ಸಂದರ್ಭಗಳಲ್ಲಿಯೂ ಕ್ಯೂಟ್ ಎನಿಸುತ್ತಿದ್ದು, ಬೇಗ ಮದುವೆಯಾಗಬೇಕೆಂದು ಒತ್ತಾಯ ಮಾಡಿ ನಾಗ ಚೈತನ್ಯರನ್ನು ಮದುವಾಯಾಗಿದ್ದ ಸಮಂತಾ, ಟಾಲಿವುಡ್‌ನ ಬಹು ಬೇಡಿಕೆಯ ನಟಿ. ಮದುವೆಯಾದರೂ ಆಫರ್ಸ್ ಮಾತ್ರ ಕಡಿಮೆ ಆಗಿರಲಿಲ್ಲ. ಅಲ್ಲದೇ ಇತ್ತೀಚೆಗೆ ಸಮಂತಾ ಅವರು ದಿ ಫ್ಯಾಮಿಲ್ ಮ್ಯಾನ್-2 ವೆಬ್ ಸಿರೀಸ್ ಸಕತ್ತೂ ಕ್ಲಿಕ್ ಆಗಿತ್ತು. ಕಳೆದ ವಾರವಷ್ಟೇ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ಲವ್ ಸ್ಟೋರಿ ಚಿತ್ರ ರಿಲೀಸ್ ಆಗಿದ್ದು, ಸದ್ದು ಮಾಡುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?