ಮದುವೆ ಆದ್ಮೇಲೆ ಬಿಪಾಶಾ ಬಸು ಜೊತೆ ಡೇಟಿಂಗ್, ನಟಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ನಟ!

By Roopa Hegde  |  First Published Jul 11, 2024, 3:03 PM IST

ಮದುವೆಯಲ್ಲಿ ನಂಬಿಕೆ ಮುಖ್ಯ. ಅದಕ್ಕೇ ಪೆಟ್ಟು ಬಿದ್ರೆ ಸಂಸಾರ ನಡೆಸೋದು ಕಷ್ಟ. ಈ ನಟಿ ಜೀವನದಲ್ಲೂ ಅದೇ ಆಗಿ. ವೃತ್ತಿಯಲ್ಲಿ ಏಳ್ಗೆ ಇದ್ರೂ ವೈಯಕ್ತಿಕ ಜೀವನದಲ್ಲಿ ನಂಬಿದ್ದ ಗಂಡನೇ ಮೋಸ ಮಾಡಿದ್ದಾನೆ.
 

Jennifer Winget Karan Singh Grover Divorce In Ten Months After Marraige roo

ಪ್ರಸಿದ್ಧ ಕಿರುತೆರೆ ನಟಿ ಜೆನ್ನಿಫರ್ ವಿಂಗೆಟ್ ಯಾರು ಅಂತ ಎಲ್ಲರಿಗೂ ಗೊತ್ತು. ತಮ್ಮ ಫಿಟ್ನೆಸ್, ಸೌಂದರ್ಯ ಹಾಗೂ ನಟನೆ (Fitness, Beauty and Acting) ಮೂಲಕ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ ನಟಿ ಜೆನ್ನಿಫರ್ ವಿಂಗೆಟ್. ಜೆನ್ನಿಫರ್ ತಮ್ಮ ವೃತ್ತಿ ಜೀವನಕ್ಕಿಂತ (Career) ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದರು. ಪ್ರೀತಿಸಿದ ಪತಿ ಮೋಸ ಮಾಡಿದ ನಂತ್ರ ವಿಚ್ಛೇದನ ಪಡೆದ ಜೆನ್ನಿಫರ್ ವಿಂಗೆಟ್ ಮತ್ತೆ ಮದುವೆಯಾಗುವ ಸಾಹಸಕ್ಕೆ ಹೋಗ್ಲಿಲ್ಲ. ಅವರು 39ನೇ ವಯಸ್ಸಿನಲ್ಲಿಯೂ ಒಂಟಿಯಾಗಿದ್ದಾರೆ. 

ರೆಡ್ ಹ್ಯಾಂಡ್ (Red hand) ಆಗಿ ಸಿಕ್ಕಿಬಿದ್ದಿದ್ದ ಪತಿ : ಕಿರುತೆರೆ ಧಾರಾವಾಹಿ (Serial) ಮೂಲಕ ಜನರ ಮನಸ್ಸು ಗೆದ್ದಿರುವ ಜೆನ್ನಿಫರ್ (Jennifer) ಸಾಕಷ್ಟು ನೋವು ತಿಂದಿದ್ದಾರೆ. ಅವರು ಚಿಕ್ಕ ವಯಸ್ಸಿನಲ್ಲೇ ಕರಣ್ ಸಿಂಗ್ ಗ್ರೋವರ್ ಮದುವೆ ಆಗಿದ್ದರು. ಕಿರಣ್ ಸಿಂಗ್ ಗ್ರೋವರ್ ಗೆ ಈಗಾಗಲೇ ಮದುವೆ ಆಗಿತ್ತು. ಜೆನ್ನಿಫರ್ ಹಾಗೂ ಕರಣ್ ಸಿಂಗ್ ಗ್ರೋವರ್, ದಿಲ್ ಮಿಲ್ ಗಯಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಸೆಟ್ ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಇಬ್ಬರೂ 2012ರಲ್ಲಿ ಮದುವೆ ಆದ್ರು. ಆದ್ರೆ ಈ ಮದುವೆ ತುಂಬಾ ದಿನ ನಿಲ್ಲಲಿಲ್ಲ. ಕೇವಲ 10 ತಿಂಗಳು ಮಾತ್ರ ಸಂಸಾರ ಮಾಡಿದ್ದಳು ಜೆನ್ನಿಫರ್. 

Tap to resize

Latest Videos

ಜೈಲಿನಿಂದಲೇ ಮನವಿ ಮಾಡಿದ ದರ್ಶನ್; ವಕೀಲರ ಮಾತು ಕೇಳಿ ಕಣ್ಣೀರಿಟ್ಟ ಫ್ಯಾನ್ಸ್‌

ಜೆನ್ನಿಫರ್ ಮತ್ತು ಕರಣ್ ಸಿಂಗ್ ಗ್ರೋವರ್ ಬೇರೆಯಾಗಲು ಕಾರಣವಾಗಿದ್ದು ಕರಣ್ ಸಿಂಗ್ ಗ್ರೋವರ್ ಗೆಳತಿ. ವಿವಾಹಿತನಾದ್ರೂ ಕರಣ್ ಸಿಂಗ್ ಇನ್ನೊಬ್ಬಳ ಜೊತೆ ಡೇಟಿಂಗ್ ಶುರು ಮಾಡಿದ್ದರು. ಇಬ್ಬರು ಒಟ್ಟಿಗಿರುವಾಗ ಜೆನ್ನಿಫರ್ ಗ್ರೋವರ್ ಕೈಗೆ ಸಿಕ್ಕಿ ಬಿದ್ದಿದ್ದರು. ಆ ಸಮಯದಲ್ಲಿ ಕೋಪಗೊಂಡಿದ್ದ ಜೆನ್ನಿಫರ್, ಕರಣ್ ಸಿಂಗ್ ಗ್ರೋವರ್ ಕೆನ್ನೆಗೆ ಬಾರಿಸಿದ್ದರು ಎನ್ನುವ ಸುದ್ದಿ ಇದೆ. ಪತಿಯ ಲೀಲೆ ಗೊತ್ತಾಗ್ತಿದ್ದಂತೆ ಆಘಾತಕ್ಕೊಳಗಾದ ಜೆನ್ನಿಫರ್, ಕರಣ್ ಸಿಂಗ್ ಗ್ರೋವರ್ ರಿಂದ ದೂರವಾಗಿದ್ದರು. 2014ರಲ್ಲಿ ಇಬ್ಬರೂ ವಿಚ್ಛೇದನ ಪಡೆದ್ರು.

ಇದಾದ್ಮೇಲೆ ಜೆನ್ನಿಫರ್ ಯಾರನ್ನೂ ಮದುವೆಯಾಗಿಲ್ಲ. ಆದ್ರೆ ಕರಣ್ ಸಿಂಗ್ ಗ್ರೋವರ್ ಮೂರನೇ ಮದುವೆ ಆಗಿದ್ದಾರೆ. ಕರಣ್ ಸಿಂಗ್ ಗ್ರೋವರ್, 2008ರಲ್ಲಿ ನಟಿ ಶ್ರದ್ಧಾ ನಿಗಮ್ ಅವರನ್ನು ವಿವಾಹವಾಗಿದ್ದರು. ನಂತ್ರ 2012ರಲ್ಲಿ ಅವರು ಜೆನ್ನಿಫರ್ ಮದುವೆ ಆದ್ರು. ಇದರ ನಂತರ, 2016 ರಲ್ಲಿ ಕರಣ್ ಬಿಪಾಶಾ ಬಸು ಅವರನ್ನು ವಿವಾಹವಾದರು. ಈ ದಂಪತಿಗೆ ದೇವಿ ಎಂಬ ಮಗಳಿದ್ದಾಳೆ. ಕರಣ್ ತನ್ನ ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 5 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಒಂದೇ ಒಂದು ಸೋಲೋ ಹಿಟ್ ನೀಡಿಲ್ಲ.

ಪ್ರೆಗ್ನೆಸಿಯಲ್ಲಿ ಇಷ್ಟೆಲ್ಲಾ ವರ್ಕೌಟ್ ಮಾಡ್ತಾರೆ ಮಿಲನಾ ನಾಗರಾಜ್; ವಿಡಿಯೋ ನೋಡಿ

ಜೆನ್ನಿಫರ್ ವಿಚ್ಛೇದನದ ನಂತ್ರ ಇದ್ರ ಬಗ್ಗೆ ಮಾತನಾಡಿದ್ದರು. ಮದುವೆ ವಿಫಲ ಎಂದು ಕರೆಯಲು ನಾನು ಒಪ್ಪುವುದಿಲ್ಲ. ನನ್ನ ಮದುವೆಯಲ್ಲಿ ಏನಲ್ಲಾ ಆಯ್ತು ಅದಕ್ಕೆ ನಾನು ವಿಷಾಧಿಸುವುದಿಲ್ಲ. ನನ್ನ ಮದುವೆಯನ್ನು ತಪ್ಪು ಎಂದು ನಾನು ಕರೆಯುವುದಿಲ್ಲ. ನಾವಿಬ್ಬರೂ ನಮ್ಮ ಜೀವನದಲ್ಲಿ ಮುಂದೆ ಸಾಗಿದ್ದೇವೆ. ನಾನು ಯಾವುದೇ ಕಹಿ ನೆನಪನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ.ಮದುವೆ ಅನುಭವ ತುಂಬಾ ವಿಶೇಷವಾಗಿತ್ತು. ಅನೇಕ ಬಾರಿ ನನ್ನ ಭಾವನೆಗಳ ಮುಂದೆ ನಾನು ಮಂಡಿಯೂರಿ ಕುಳಿತಿದ್ದೇನೆ. ಆದ್ರೆ ನನ್ನ ಕುಟುಂಬಸ್ಥರು, ಸ್ನೇಹಿತರು ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದಿದ್ದರು.

ಜೆನ್ನಿಫರ್ ವಿಂಗೆಟ್ ಜನಪ್ರಿಯ ಟಿವಿ ಧಾರಾವಾಹಿಗಳಾದ 'ದಿಲ್ ಮಿಲ್ ಗಯೆ', 'ಬೇಹದ್', 'ಕಹಿನ್ ತೋ ಹೋಗಾ' ಮತ್ತು 'ಬೇಪನ್ನಾ'ದಲ್ಲಿ ಕೆಲಸ ಮಾಡಿದ್ದಾರೆ. ಜೆನ್ನಿಫರ್ ಇನ್ಸ್ಟಾಗ್ರಾಮ್ ನಲ್ಲಿ 18.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿಯರಲ್ಲಿ ಜೆನ್ನಿಫರ್ ಒಬ್ಬರು.  

vuukle one pixel image
click me!
vuukle one pixel image vuukle one pixel image