'ಜವಾನ್'​ ವಿಡಿಯೋ ಲೀಕ್​, FIR​: ಬಿಡುಗಡೆಗೆ ಮುನ್ನವೇ ನೋಡುವವರಿಗೂ ಕಾದಿದೆ ಅಪಾಯ!

By Suvarna News  |  First Published Aug 13, 2023, 2:00 PM IST

ಜವಾನ್​ ಚಿತ್ರದ ಕೆಲವು ತುಣುಕುಗಳು ಲೀಕ್​ ಆಗಿದ್ದು, ಇದನ್ನು ಶೇರ್​  ಮಾಡಿದವರಿಗೆ ಭಾರಿ  ಆಘಾತ ಕಾದಿದೆ. ಚಿತ್ರತಂಡ ತಪ್ಪಿತಸ್ಥರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದೆ.
 


ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಚಿತ್ರವು ಈ ಕ್ಷಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್​ ಇದಾಗಲೇ ಬಿಡುಗಡೆಯಾಗಿದ್ದು ಸಕತ್​ ಹಿಟ್​ ಆಗಿವೆ.   ಸೆಪ್ಟೆಂಬರ್ 7ರಂದು ಜವಾನ್​ ಬಿಡುಗಡೆಯಾಗಲಿದ್ದು, ಶಾರುಖ್​ ಫ್ಯಾನ್ಸ್​ ತುದಿಗಾಲಿನಲ್ಲಿ ಚಿತ್ರ ನೋಡಲು ನಿಂತಿದ್ದಾರೆ.  ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ.  ನಟಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.

 ಶಾರುಖ್ ಖಾನ್ (Shah Rukh Khan) ಅವರ ಈ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಶಾಕಿಂಗ್ ನ್ಯೂಸ್​ ಎದುರಾಗಿದೆ. ಅದೇನೆಂದರೆ, ಈ ಚಿತ್ರದಿಂದ ಕದ್ದ ವೀಡಿಯೊ ತುಣುಕುಗಳನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಶೇರ್​​ ಮಾಡಲಾಗಿದ್ದು, ಇದರ ಹಲವು ದೃಶ್ಯಗಳು ವೈರಲ್​ ಆಗಿವೆ. ಈ ಸಂಬಂಧ ಚಿತ್ರತಂಡವು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದೆ.  ಜವಾನ್​ ಚಿತ್ರವನ್ನು ನಿರ್ಮಿಸಿರೋ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪ್ ನಿಮಾನಿ ಅವರು  ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನ ಪ್ರಕಾರ, ಇತ್ತೀಚೆಗೆ ಕೆಲವು ಟ್ವಿಟರ್ ಹ್ಯಾಂಡಲ್‌ಗಳಿಂದ ಚಿತ್ರದ ವೀಡಿಯೊ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದನ್ನು ಪ್ರೊಡಕ್ಷನ್ ಹೌಸ್ ಪತ್ತೆ ಮಾಡಿದೆ. ಚಿತ್ರ ಇನ್ನೂ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿಲ್ಲ. ಆದರೆ ಇದಕ್ಕೂ ಮುಂಚೆಯೇ ಕೆಲವು ತುಣುಕುಗಳನ್ನು ಸೋರಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tap to resize

Latest Videos

JAWAN: ನಯನತಾರಾ ಜತೆ ನಟಿಸುವಾಗ ಶಾರುಖ್​ಗೆ ಅವ್ರ ಮೇಲೆ ಮನಸ್ಸಾಗಿತ್ತಾ? ನಟ ಹೇಳಿದ್ದೇನು?

 ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಚಿತ್ರೀಕರಣದ ವೀಡಿಯೊಗಳು ಸೋರಿಕೆಯಾಗುವುದನ್ನು ತಡೆಯುವ ಸಲುವಾಗಿ ಸ್ಥಳದಲ್ಲಿದ್ದ ಜನರು ಮೊಬೈಲ್ ಫೋನ್ ಬಳಸುವುದನ್ನು ಅನುಮತಿಸಲಿಲ್ಲ. ಇದರ ಹೊರತಾಗಿಯೂ, ಯಾರೋ ಚಿತ್ರದ ವೀಡಿಯೊಗಳನ್ನು ಕದ್ದಿದ್ದಾರೆ ಮತ್ತು ಕಂಪೆನಿಯ ಅನುಮತಿಯಿಲ್ಲದೆ ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ನಿಮಾನಿ ಹೇಳಿದ್ದಾರೆ. ದೂರುದಾರರು ಎಫ್‌ಐಆರ್‌ನಲ್ಲಿ ಐದು ಟ್ವಿಟರ್ ಹ್ಯಾಂಡಲ್‌ಗಳನ್ನು ಗುರುತಿಸಿದ್ದಾರೆ ಮತ್ತು ಈ ಹ್ಯಾಂಡಲ್‌ಗಳನ್ನು ಬಳಸುವ ಜನರ ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ.  

‘ಜವಾನ್’ ಸಿನಿಮಾದ ಕ್ಲಿಪ್​ಗಳು ಲೀಕ್ (Leak) ಆಗಿದ್ದು ಇದೇ ಮೊದಲೇನೂ ಅಲ್ಲ. ಶೂಟಿಂಗ್ ಆರಂಭ ಆದಾಗಿನಿಂದಲೂ ತಂಡಕ್ಕೆ ಈ ರೀತಿಯ ತೊಂದರೆ ಎದುರಾಗುತ್ತಲೇ ಇದೆ. ಈ ಮೊದಲು ಕೂಡ ರೆಡ್​ ಚಿಲ್ಲೀಸ್​ನವರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ತಂಡದ ಪರವಾಗಿ ಕೋರ್ಟ್ ಆದೇಶ ನೀಡಿತ್ತು. ಲೀಕ್ ಆದ ಕ್ಲಿಪ್​ಗಳನ್ನು ತೆಗೆಯುವಂತೆ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಕೋರ್ಟ್ ಆದೇಶ ನೀಡಿತ್ತು. ಇನ್ನು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಲೀಕ್ ತಪ್ಪಿಸಲು ಮೊಬೈಲ್ ಫೋನ್​ಗಳ ಮೇಲೆ ಬ್ಯಾನ್ ಹೇರಲಾಗಿತ್ತು. ಇದು ಸೇವಾ ಪೂರೈಕೆದಾರರಿಂದ ಶಂಕಿತ ಟ್ವಿಟರ್ ಹ್ಯಾಂಡಲ್‌ಗಳ ವಿವರಗಳನ್ನು ಪಡೆದುಕೊಂಡಿದೆ ಮತ್ತು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಶೇರ್​ ಮಾಡಿಕೊಳ್ಳುವವರಿಗೆ ದೊಡ್ಡ ಆಘಾತ ಎದುರಾಗಲಿದೆ. 

Shah Rukh Khan: ಕಿಂಗ್‌​ ಖಾನ್​ ಕೈಬರಹದ ಹಳೆ ಪತ್ರ ವೈರಲ್​: ಇದರಲ್ಲಿವೆ ಹಲವು ಸೀಕ್ರೇಟ್​!

click me!