ವೋಟಿಂಗ್ ದಿನವೂ ಚಿತ್ರದ ಪ್ರಮೋಷನ್ ಮಾಡಿದ್ದಾರೆ ನಟಿ ಜಾಹ್ನವಿ ಕಪೂರ್. ಅವರ ಡ್ರೆಸ್ನಲ್ಲಿ ಇದ್ದ ಸಿನಿಮಾ ಹಾಡು ಯಾವುದು?
ಇಂದು (ಮೇ 20) ಲೋಕಸಭೆಗೆ ಐದನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಅಮೇಥಿ, ರಾಯ್ ಬರೇಲಿ, ಲಖನೌ, ಕೈಸರ್ ಗಂಜ್, ಸರನ್ ಮತ್ತು ಮುಂಬೈನ ಎಲ್ಲಾ ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಇಂದು ಮತದಾನವಾಗುತ್ತಿದೆ. ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಮತದಾನ ಶುರುವಾಗಿದೆ. ಬಿಹಾರದ 5, ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್‌ನ 3, ಲಡಾಕ್‌ನ 1, ಮಹಾರಾಷ್ಟ್ರದ 13, ಒಡಿಶಾದ 5, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಮುಂಬೈನಲ್ಲಿ ಮತದಾನ ಇರುವ ಕಾರಣ ಸಹಜವಾಗಿಯೇ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ ಚಲಾಯಿಸುತ್ತಿದ್ದಾರೆ. ಇವರ ಪೈಕಿ ಬಹಳ ಗಮನ ಸೆಳೆದವರು ಬಾಲಿವುಡ್ ನಟಿ ಜಾಹ್ನವಿ ಕಪೂರ್. ನಟಿ ಜಾಹ್ನವಿ ಕಪೂರ್ ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ್ದರು. ಶೂಟಿಂಗ್ ಹಿನ್ನೆಲೆಯಲ್ಲಿ ವಿಮಾನದಲ್ಲಿ ತೆರಳಬೇಕಿದ್ದ ಕಾರಣ ಬೆಳಗ್ಗೆಯಿಂದಲೇ ಮತದಾನ ಕೇಂದ್ರಕ್ಕೆ ಹಾಜರಾಗಿ ಮತದಾನದ ಹಕ್ಕನ್ನು ಚಲಾಯಿಸಿದರು. ಮತ ಚಲಾಯಿಸಿ ಎಲ್ಲರೂ ಮತದಾನ ಮಾಡುವಂತೆ ಮನವಿಯನ್ನೂ ಮಾಡಿದರು. ಬಹುತೇಕ ತಾರೆಯರು ಹೀಗೆಯೇ ಮಾಡಿದರು. ಆದರೆ ಎಲ್ಲರ ಗಮನ ಹೋಗಿದ್ದು ಜಾಹ್ನವಿ ಅವರು ಧರಿಸಿದ್ದ ಡ್ರೆಸ್ ಮೇಲೆ, ಅದರಲ್ಲಿಯೂ ಕುರ್ತಾದ ದುಪ್ಪಟ್ಟಾದ ಮೇಲೆ.
12ನೇ ವಯಸ್ಸಲ್ಲೇ ಅಶ್ಲೀಲ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಆಗಿತ್ತು ಜಾಹ್ನವಿ ಕಪೂರ್ ಫೋಟೋ; ಆಗಿದ್ದೇನು?
ಹೌದು. ಜಾಹ್ನವಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಇವರನ್ನು ನೋಡಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ನಟಿಗೆ ಟೈಟ್ ಸೆಕ್ಯುರಿಟಿ ನೀಡಲಾಗಿತ್ತು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದದ್ದು ನಟಿಯ ದುಪ್ಪಟ್ಟಾದ ಮೇಲಿದ್ದ ಸಾಲುಗಳು. ಅದರ ಮೇಲೆ ಗೀತೆಯಾದ 'ದೇಖಾ ತೇನು ಪೆಹಲಿ ಬಾರ್' ಎಂದು ಬರೆಯಲಾಗಿತ್ತು. ಇದು ನಟಿಯ ಮುಂಬರುವ ಚಿತ್ರದ ಪ್ರಮೋಷನ್ ಆಗಿದೆ. ಮಿಸ್ಟರ್ ಆ್ಯಂಡ್ ಮಿಸಸ್ ಮಹಿ ಚಿತ್ರದ ಹಾಡಿನ ಮೊದಲ ಸಾಲು ಇದಾಗಿದ್ದು, ಮತದಾನದ ದಿನವೂ ಚಿತ್ರದ ಪ್ರಮೋಷನ್ ಮಾಡಿದ್ದು ನೋಡಿ ಅಭಿಮಾನಿಗಳು ಭೇಷ್ ಭೇಷ್ ಎನ್ನುತ್ತಿದ್ದಾರೆ.
ಅವರು ಮತ ಚಲಾಯಿಸಿದ ನಂತರ ಕೂಡಲೇ ನಟಿ ವೆಸ್ಟರ್ನ್ ಡ್ರೆಸ್ ಹಾಕಿಕೊಂಡು ವಿಮಾನ ನಿಲ್ದಾಣದತ್ತ ಧಾವಿಸಿದರು. ಅವರು ಸೊಗಸಾದ ಬಿಳಿ ಬಾಡಿಕಾನ್ ಉಡುಪನ್ನು ಆರಿಸಿಕೊಂಡು ಮೋಹಕವಾಗಿ ಕಾಣುತ್ತಿದ್ದರು ನಟಿ. ಮತದಾನ ಮಾಡುವ ಸಮಯದಲ್ಲಿ ಕುರ್ತಾ ಆಯ್ಕೆ ಮಾಡಿಕೊಂಡಿರುವುದಕ್ಕೆ ನೆಟ್ಟಿಗರು ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಡ್ರೆಸ್ ಸೆನ್ಸ್ ಇರುವುದು ತುಂಬಾ ಖುಷಿಯ ವಿಚಾರ ಎನ್ನುತ್ತಿದ್ದಾರೆ. ಜೊತೆಗೆ ಚಿತ್ರದ ಪ್ರೊಮೋಷನ್ ಮಾಡುವ ಡ್ರೆಸ್ ಧರಿಸಿರುವುದಕ್ಕೂ ಖುಷಿ ಪಡುತ್ತಿದ್ದಾರೆ.
ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್! ನಟಿ ಕಸ್ತೂರಿ ಶಂಕರ್ ಶಾಕಿಂಗ್ ಹೇಳಿಕೆ