ಮಿಸ್ಟರ್ & ಮಿಸೆಸ್ ಮಹಿ ಚಿತ್ರದ ಪ್ರೊಮೋಷನ್ಗಾಗಿ ಕ್ರಿಕೆಟ್ ಬಾಲ್ ಡ್ರೆಸ್ನಲ್ಲಿ ನಟಿ ಜಾಹ್ನವಿ ಕಪೂರ್ ಮಿಂಚಿದ್ರೆ ನೆಟ್ಟಿಗರು ಈ ರೀತಿಯೆಲ್ಲಾ ಹೇಳೋದಾ?
ಬಾಲಿವುಡ್ ಎವರ್ಗ್ರೀನ್ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್, ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಅಲ್ಲದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹವಾ. ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್ ಮತ್ತು ಅವರ ಬಾಯ್ಫ್ರೆಂಡ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್ ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು. ಏಕೆಂದರೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
ಇದೀಗ ನಟಿ, ಕ್ರಿಕೆಟ್ ಲೆದರ್ ಬಾಲ್‌ನಿಂದ ಪ್ರೇರಿತವಾದ ಕೆಂಪು ಉಡುಪನ್ನು ಧರಿಸಿದ್ದಾರೆ. ಈ ಮೂಲಕ ಫ್ಯಾಷನ್ಗೆ ಹೊಸ ಲುಕ್ ನೀಡಿದ್ದಾರೆ. ಈಕೆ ಧರಿಸಿರುವ ಉಡುಗೆಯು ಕ್ರಿಕೆಟ್ ಬಾಲ್‌ನಲ್ಲಿನ ಹೊಲಿಗೆ ಗುರುತುಗಳನ್ನು ಹೋಲುವ ಬಿಳಿ ಹೊಲಿಗೆಗಳನ್ನು ಒಳಗೊಂಡಿದೆ. ಇದಕ್ಕೆ ಕ್ರಿಕೆಟ್ ಬಾಲ್ನ ಥೀಮ್ ಸೇರಿಸುವ ಸಲುವಾಗಿ, ಉಡುಪಿನ ಹಿಂಭಾಗದಲ್ಲಿ ಸಣ್ಣ ಚರ್ಮದ ಚೆಂಡುಗಳನ್ನು ಜೋಡಿಸಲಾಗಿದೆ, ಇದು ಕ್ರಿಕೆಟ್-ಪ್ರೇರಿತ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಂದಹಾಗೆ ಈ ಉಡುಗೆಯನ್ನು ನಟಿ ಮಿ. & ಮಿಸೆಸ್ ಮಾಹಿ' ಸಿನಿಮಾದ ಪ್ರಚಾರದ ವೇಳೆ ತೊಟ್ಟುಕೊಂಡಿದ್ದರು. ಈ ಉಡುಗೆಯ ಪ್ರಚಾರದಲ್ಲಿ ನಟ ರಾಜ್‌ಕುಮಾರ್ ರಾವ್ ಜೊತೆಗಿದ್ದರು. ಕ್ರಿಕೆಟ್ ಬಾಲ್ ಬಟ್ಟೆ ಹಾಕುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಮಿ. & ಮಿಸೆಸ್ ಮಾಹಿ' ಚಿತ್ರವು ಕ್ರಿಕೆಟ್‌ಗಾಗಿ ಹಂಚಿಕೊಂಡ ಪ್ರೀತಿಯೊಂದಿಗೆ ದಂಪತಿಯ ನಡುವಿನ ಅಪೂರ್ಣ ಪರಿಪೂರ್ಣ ಪಾಲುದಾರಿಕೆಯ ಕಥೆಯನ್ನು ವಿವರಿಸುತ್ತದೆ ಎನ್ನಲಾಗಿದೆ. ಶರಣ್ ಶರ್ಮಾ ಇದನ್ನು ನಿರ್ದೇಶಿಸಿದ್ದಾರೆ. ಮೇ 31 ರಂದು ಚಿತ್ರ ಬಿಡುಗಡೆಯಾಗಲಿದೆ.
ಐಶ್ವರ್ಯ- ಕತ್ರಿನಾ ಇಬ್ಬರಲ್ಲಿ ಸುಂದರಿಯರು ಯಾರು ಎಂದಾಗ ಮಾಜಿ ಲವರ್ ಸಲ್ಮಾನ್ ಖಾನ್ ಹೇಳಿದ್ದೇನು?
ಕ್ರಿಕೆಟ್ ಬಾಲ್ ಥೀಮ್ನೊಂದಿಗಿನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತರ್ಲೆ ಕಮೆಂಟಿಗರು ಕ್ರಿಕೆಟ್ ಬಾಲ್ ನಿಜ. ಮುಂದೆ ನೋಡಬೇಕೋ, ಹಿಂದೆ ನೋಡಬೇಕೋ ಗೊತ್ತಾಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇದಾಗಲೇ ಕ್ರಿಕೆಟ್ ಬಾಲ್ ಇರುವಾಗ ಮತ್ತ್ಯಾಕೆ ಎಂದೂ ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ಕ್ರಿಕೆಟ್ ಬಾಲ್ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿದೆ. ಇನ್ನು ನಟಿಯ ಡೇಟಿಂಗ್ ವಿಚಾರಕ್ಕೆ ಬರುವುದಾದರೆ, ಈಕೆ ಶಿಖರ್ ಜೊತೆ ಫಿಕ್ಸ್ ಆಗಿರುವುದು ನಿಜ ಎಂಬುದಾಗಿ ಕೆಲ ದಿನಗಳ ಹಿಂದೆ ಪರೋಕ್ಷವಾಗಿಯೇ ಹೇಳಿದ್ದರು ಜಾಹ್ನವಿ ತಂದೆ, ಶ್ರೀದೇವಿ ಪತಿ ಬೋನಿ ಕಪೋರ್. ಜೂಮ್ಗೆ ನೀಡಿದ ಸಂದರ್ಶನದಲ್ಲಿ ಅವರು, ‘ನನಗೆ ಶಿಖರ್ ಅಂದರೆ ಪ್ರೀತಿ. ಜಾಹ್ನವಿ ಶಿಖರ್ ಜೊತೆ ಕಾಣಿಸಿಕೊಳ್ಳುವುದಕ್ಕಿಂತಲೂ ಅಂದರೆ ಓಡಾಡ ಶುರು ಮಾಡುವುದಕ್ಕಿಂತಲೂ ಮೊದಲು ನನಗೆ ಅವನ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅವನು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಆತ ಯಾವಾಗಲೂ ಓಡಿ ಬರುತ್ತಾನೆ. ಅವನು ನನ್ನೊಂದಿಗೆ, ಜಾಹ್ನವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಮೂಲಕ ಮಗಳು ಮತ್ತು ಶಿಖರ್ ಸಂಬಂಧವನ್ನು ಒಪ್ಪಿಕೊಂಡಿದ್ದರು.
ಅಂದಹಾಗೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ ಈಕೆ ಉದ್ಯಮಿ ಶಿಖರ್ ಪಹರಿಯಾ (Shikhar Pahariya) ಜೊತೆ ಸುತ್ತಾಟ ಮಾಡುತ್ತಿದ್ದಾರೆ. ದೇಶ-ವಿದೇಶ ತಿರುಗುತ್ತಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್ ಫ್ರೆಂಡ್ (Boy Friend) ಜೊತೆ ಟ್ರಿಪ್ಗೆ ಹೋಗಿರುವ ಫೋಟೋಗಳು ವೈರಲ್ ಆಗಿದ್ದವು.
ಅವಳಲ್ಲಿದ್ದ ಮೌನ ನನಗೆ ಬದುಕು ಕಟ್ಟುಕೊಟ್ಟಿದೆ: ಅಂತರಾಳದ ಮಾತು ಬಿಚ್ಚಿಟ್ಟ ವಿಜಯ್ ರಾಘವೇಂದ್ರ