
ಬಾಲಿವುಡ್ 'ಕಿಂಗ್ ಖಾನ್' ಖ್ಯಾತಿಯ ನಟ ಶಾರುಖ್ ಖಾನ್, ಗೌರಿಯೊಂದಿಗೆ ತಮ್ಮ ಲವ್ ಸ್ಟೋರಿ ನಡೆದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೊಂದು ಭಾರೀ ಕುತೂಹಲ ಕೆರಳಿಸಿಸುವ ಲವ್ ಸ್ಟೋರಿ (Love Story) ಎನ್ನಬಹುದು. ಹಿಂದೂ ಹುಡುಗಿ-ಮುಸ್ಲಿಂ ಹುಡುಗನ ಈ ಲವ್ ಸ್ಟೋರಿ 1991ರಲ್ಲಿ ಇಬ್ಬರೂ ಪರಸ್ಪರ ಮನೆಯವರನ್ನು ಒಪ್ಪಿಸಿ ಮದುವೆಯಾಗುವ ಮೂಲಕ ಸುಖಾಂತ್ಯ ಕಂಡಿದೆ. ಶಾರುಖ್ ಖಾನ್ (Shah Rukh Khan) ಹಾಗೂ ಗೌರಿ ಖಾನ್ (Gouri Khan) ಜೋಡಿ ಇಂದು ತಮ್ಮ ಮೂರು ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಿದ್ದಾರೆ. ನಟ ಶಾರುಖ್ ಹೇಳಿರುವ ಅವರಿಬ್ಬರ ಲವ್ ಸ್ಟೋರಿಯನ್ನೊಮ್ಮೆ ನೋಡಿ..
'ನಾನು ಗೌರಿಯನ್ನು ಭೇಟಿಯಾದಾಗ ಆಕೆಗೆ ಕೇವಲ 14 ವರ್ಷ. ನನಗೆ ಆಗ 18 ವರ್ಷ. ನಾನು ಆಕೆಗೆ ಡಾನ್ಸ್ ಮಾಡಲು ಬರುವಂತೆ ಕರೆದೆ. ಆದರೆ ಆಕೆ ಅದನ್ನು ನಿರಾಕರಿಸಿ ತಾನು ಬಾಯ್‌ಫ್ರಂಡ್‌ಗೆ ಕಾಯುತ್ತಿರುವುದಾಗಿ ಹೇಳಿದ್ದಳು. ಬಳಿಕ ಯಾವತ್ತೋ ನನಗೆ ಗೊತ್ತಾಯ್ತು, ಆವತ್ತು ಆಕೆ ತನ್ನ ಸಹೋದರನಿಗೆ ಕಾಯುತ್ತಿದ್ದಳು, ಬಾಯ್‌ಫ್ರಂಡ್‌ಗೆ ಅಲ್ಲ. ನಾವಿಬ್ಬರೂ ಪಾರ್ಟಿಗಳಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬಂಪ್ ಮಾಡಿಕೊಳ್ಳುತ್ತಿದ್ದು, ಸ್ವಲ್ಪ ಕಾಲದಲ್ಲೇ ನಮ್ಮಿಬ್ಬರಲ್ಲಿ ಲವ್ ಶುರುವಾಯ್ತು.
ಕಣ್ಣಪ್ಪ ಚಿತ್ರಕ್ಕೆ ಬಂತು ಭರ್ಜರಿ 'ಬಾಹುಬಲಿ' ಬಲ; ವಿಶೇಷ ಪಾತ್ರದಲ್ಲಿ ಡಾರ್ಲಿಂಗ್ ಪ್ರಭಾಸ್!
ನಮ್ಮಿಬ್ಬರ ಮೊದಲ ಡೇಟಿಂಗ್ ಆಗಿದ್ದು ಕೇವಲ ಐದೇ ನಿಮಿಷ, ಹಾಗೂ ಅದು 'ಪಂಚ್‌ಶೀಲ್ ಪಾರ್ಕ್'ನಲ್ಲಿ. ನಾವಿಬ್ಬರೂ ಅಲ್ಲಿ ಕೋಲ್ಡ್ ಡ್ರಿಂಕ್ಸ್ ಮಾತ್ರ ಕುಡಿದಿದ್ದೆವು. ಸ್ವಲ್ಪ ವರ್ಷಗಳ ಬಳಿಕ ನನ್ನನ್ನು ಮದುವೆಯಾಗುವಂತೆ ನಾನು ಅವಳನ್ನು ಕೇಳಿದೆ. ಆದರೆ, ನನ್ನ ಪೊಸೆಸ್ಸಿವ್ ನೇಚರ್ ಕಾರಣಕ್ಕೆ ಆಕೆ ನನ್ನ ಆಫರ್ ಅನ್ನು ತಿರಸ್ಕರಿಸಿದಳು. ನನಗೆ ಹೇಳದೇ ಆಕೆ ತನ್ನ ಸ್ನೇಹಿತೆಯರ ಜತೆ ಮುಂಬೈಗೆ ತೆರಳಿದ್ದಳು. ಈ ಮೂಲಕ ನಮ್ಮಿಬ್ಬರ ಲವ್ ಸ್ಟೋರಿ ಆಲ್‌ಮೋಸ್ಟ್ ಕೊನೆಯಾದಂತೆ ಆಗಿತ್ತು.
ಹೊಸ ರೂಪದಲ್ಲಿ 'ಡಿಸ್ನಿ+ಹಾಟ್‌ಸ್ಟಾರ್'ನಲ್ಲಿ ಸ್ಟ್ರೀಮ್ ಆಗಲಿದೆ ಬಾಹುಬಲಿ; ರಾಜಮೌಳಿ ಹೇಳಿದ್ದೇನು?
ಆದರೆ ನನಗೆ ಗ್ಯಾರಂಟಿ ಎಂಬಂತೆ ಗೊತ್ತಿತ್ತು, ಆಕೆ ನನಗಾಗಿಯೇ ಇರುವವಳು ಎಂದು, ಹಾಗಾಗಿ ನಾನು ಗೌರಿಯನ್ನು ಹುಡುಕಲು ಮುಂಬೈಗೆ ತೆರಳಿದೆ. ನನ್ನ ಅಮ್ಮ ನೀನು ಹೋಗಿ ನಿನ್ನ ಗೌರಿಯನ್ನು ಹುಡುಕಿಕೋ ಎಂದು ನನಗೆ 10 ಸಾವಿರ ರೂಪಾಯಿಗಳನ್ನು ಕೊಟ್ಟು ಕಳಿಸಿಕೊಟ್ಟಳು. ಆದರೆ, ಗೌರಿಗೆ ಸಂಬಂಧಪಟ್ಟು ನನ್ನ ಬಳಿ ಕಾಂಟಾಕ್ಟ್ ಮಾಡುವಂಥ ಯಾವುದೇ ಮಾಹಿತಿ ಇರಲಿಲ್ಲ. ಅದೊಂದು ದಿನ ನಾನು ಬೀಚ್ ಬಳಿ ಆಕೆಯನ್ನು ನೋಡಿದೆ. ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿದ ತಕ್ಷಣ ಜೋರಾಗಿ ಅತ್ತುಬಿಟ್ಟೆವು.
ನಟಿ ನಿವೇದಿತಾ ಜೈನ್ ಸಾವು ಆಕಸ್ಮಿಕವೋ, ಕೊಲೆಯೋ; ಪದೇಪದೇ ಚರ್ಚೆ ಆಗುತ್ತಿರುವುದೇಕೆ?
ನಮ್ಮಿಬ್ಬರ ಪ್ರೇಮಸಂಬಂಧದ ಬಗ್ಗೆ ಅವಳ ಕುಟುಂಬದವರು ನಮ್ಮಿಬ್ಬರ ವಿಭಿನ್ನ 'ಮತ'ದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರು. ನಂತರ ನಾನು ಅವರನ್ನು ಕನ್ವಿನ್ಸ್ ಮಾಡಿ ಒಪ್ಪಿಸಿದೆ. 1991ರಲ್ಲಿ ನಾವಿಬ್ಬರೂ ಮದುವೆಯಾದೆವು. ನಮ್ಮಿಬ್ಬರ ಪ್ರೇಮ ದಿನಗಳೆದಂತೆ ಹೆಚ್ಚಾಗುತ್ತಲೇ ಹೋಯ್ತು. ಇಂದು ನಾನು ಗೌರಿ ಜತೆ ಮೂರು ಮುದ್ದಾಗ ಮಕ್ಕಳನ್ನೂ ಹೊಂದುವ ಮೂಲಕ ಆಶೀರ್ವಾದ ಪಡೆದಿದ್ದೇನೆ' ಎಂದಿದ್ದಾರೆ ನಟ ಶಾರುಖ್ ಖಾನ್. ಈ ಮೂಲಕ ನಟ ಶಾರುಖ್ ಖಾನ್ ಅವರು ತಮ್ಮಿಬ್ಬರ (ಶಾರುಖ್ ಖಾನ್- ಗೌರಿ ಖಾನ್) ಪ್ರೇಮ ಪ್ರಕರಣ ಸುಖಾಂತ್ಯ ಕಂಡಿದ್ದನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.