ಕೃತಿ ಸ್ಮೂಕಿಂಗ್ ಮಾಡುವುದಿಲ್ಲ ಆಕೆ ಪಾಪದ ಹುಡುಗಿ ಎಂದು ತಾಯಿ ಮಾಡಿರುವ ಟ್ವೀಟ್ ವೈರಲ್. ವಿಡಿಯೋ ಹಿಂದಿರುವ ಕಥೆ ಏನು?
ಬಾಲಿವುಡ್ ಬ್ಯೂಟಿ ಕೃತಿ ಸನನ್ ತನ್ನ ಸಹೋದರಿಯ ಜೊತೆ 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶ ಪ್ರಯಾಣ ಮಾಡಿದ್ದಾರೆ. ಗ್ರೀಕ್‌ನಲ್ಲಿ ಇರುವ ಮೈಕನೂಸ್ ಎಂದು ಗ್ರೀಕ್ ಐಲ್ಯಾಂಡ್‌ನಲ್ಲಿ ಕೃತಿ ಉಳಿದುಕೊಂಡಿದ್ದಾರೆ. ಬಾಲಿವುಡ್ ನಟಿಯರು ಅಂದ್ಮೇಲೆ ದೇಶಾದ್ಯಂತ ಮುಖ ಪರಿಚಯ ಇದ್ದೇ ಇರುತ್ತದೆ. ಅದರಲ್ಲೂ ಪ್ರಭಾಸ್ ಜೊತೆ ಆದಿಪುರುಷ ಸಿನಿಮಾ ಮಾಡಿದ ಮೇಲೆ ಕೃತಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬಿಟ್ಟಿದ್ದಾರೆ. ಬಹುಷು ಕೃತಿ ಮತ್ತು ಸಹೋದರಿ ನೂಪೂರ್ ಇದ್ದಿದ್ದರೆ ಇಷ್ಟೋಂದು ಸುದ್ದಿ ಆಗುತ್ತಿರಲಿಲ್ಲ, ಅವರೊಟ್ಟಿಗೆ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಅಮೆರಿಕಾದ ಉದ್ಯಮಿ ಕಬೀರ್ ಕೂಡ ಇದ್ದಾರೆ ಎನ್ನಲಾಗಿದೆ. ಅಲ್ಲಿದ್ದ ಭಾರತೀಯ ಫೋಟೋ ತೆಗೆದು ಪ್ಯಾಪರಾಜಿಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.
ಈಗ ಸುದ್ದಿಯಾಗುತ್ತಿರುವು ಬರ್ತಡೇ ಅಥವಾ ಬಾಯ್‌ಫ್ರೆಂಡ್‌ನಿಂದ ಅಲ್ಲ...ಕೃತಿ ಸನನ್ ಕೈಯಲ್ಲಿ ಸಿಗರೇಟ್ ಇತ್ತು ಅಂತ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕೃತಿ ಧಮ್ ಹೊಡೆಯುತ್ತಿರುವ ವೈರಲ್ ಆಗುತ್ತಿತ್ತು. ಕೆಲವರು ಕೃತಿ ಅಂತ ಹೇಳಲಾಗುತ್ತದೆ ಅಂತಾರೆ ಇನ್ನೂ ಕೆಲವರೇ ಕೃತಿನೇ ಅಂತಾರೆ. ಕೃತಿ ಗ್ರೀಕ್‌ನಲ್ಲಿ ಇರುವುದು ಹೌದು ಆದರೆ ಸ್ಮೂಕಿಂಗ್ ಮಾಡುವುದಿಲ್ಲ ಅಂತಾರೆ ಅಭಿಮಾನಿಗಳು. ಏನ್ ಆಯ್ತೋ ಏನೋ ಇದ್ದಕ್ಕಿದ್ದಂತರ ಎಲ್ಲೆಡೆ ಆ ವಿಡಿಯೋ ಡಿಲೀಟ್ ಆಗಿ ಬಿಟ್ಟಿದ್ದೆ. ಬಹುಷ ಕೃತಿ ಕರೆಯಿಂದ ಮನವಿ ಕರೆ ಬಂದು ಡಿಲೀಟ್ ಆಗಿರಬೇಕು ಇಲ್ಲವಾದರೂ ಏನೋ ಆಗಿರುತ್ತೆ. ಹೀಗಾಗಿ ಎಲ್ಲೆಡೆ ಗ್ರೀಕ್‌ನಲ್ಲಿರುವ ಫೋಟೋ ಮಾತ್ರ ಸಿಕ್ಕಿದೆ.
ಥೂ ಅಂತ ಬೈಕೊಂಡು ವಿನಯ್ ಗುರೂಜೀ ಆಶ್ರಮಕ್ಕೆ ಹೋಗಿದ್ದೀನಿ: ಮಾಸ್ಟರ್ ಅರುಣ್ ಹರಿಹರನ್
ತಾಯಿ ಟ್ವೀಟ್ ವೈರಲ್:
2017ರಲ್ಲಿ ಕೃತಿ ಸ್ಮೂಕಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆಗ ರಿಲೀಸ್ ಆದ 'ಬರೇಲಿ ಕಿ ಬರ್ಫಿ' ಚಿತ್ರದ ದೃಶ್ಯ ಎಂದು ಅಭಿಮಾನಿಗಳು ಸ್ಪಷ್ಟನೆ ನೀಡಿದ್ದರು. ಆ ಸಮದಯಲ್ಲಿ ಕೃತಿ ಸನನ್ ತಾಯಿ ಕೊಟ್ಟ ಸ್ಪಷ್ಟನೆ ಮತ್ತೊಮ್ಮೆ ವೈರಲ್ ಆಗುತ್ತಿದೆ. 'ಕೃತಿ ಸನನ್ ಧೂಮಪಾನ್ ಮಾಡುವುದಿಲ್ಲ. ಜೊತೆಗೆ ತನ್ನ ಜೊತೆಗಿರುವವರಿಗೂ ಸ್ಮೋಕಿಂಗ್ ಬಿಟ್ಟು ಬಿಡುವಂತೆ ಹೇಳುತ್ತಾರೆ' ಎಂದು ಬರೆದುಕೊಂಡಿದ್ದರು. ಆಗ ನಡೆದ ಘಟನೆಗೂ ಈಗ ವೈರಲ್ ಆದ ವಿಡಿಯೋಗೂ ಲಿಂಕ್ ಮಾಡಿಕೊಂಡ ನೆಟ್ಟಿಗರು ತಾಯಿ ಟ್ವೀಟ್ ಕೂಡ ವೈರಲ್ ಮಾಡುತ್ತಿದ್ದಾರೆ.
ಗಂಡು ಮಕ್ಕಳಾಗಿ ನಾವು ಛತ್ರಿ ಹಿಡಿಯಬೇಕು; ವಿಷ್ಣುವರ್ಧನ್ ಗೌರವ ಕೊಟ್ಟ ಘಟನೆ ಹಂಚಿಕೊಂಡ ಆಂಕರ್ ಅನುಶ್ರೀ, ನಟ