ಜಾಹ್ನವಿ ಕಪೂರ್ 'ನಾನು ಆಕೆಯ ನಟನೆ ನೋಡಿದೆ. ನನಗೆ ನಿಜವಾಗಿಯೂ ಅಚ್ಚರಿ ಹಾಗೂ ಸಂತೋಷ ಒಟ್ಟಿಗೇ ಆದವು. ಆಕೆ ಸಾಮಾನ್ಯವಾಗಿ ಮಾತನಾಡುವುದು ತುಂಬಾ ಕಡಿಮೆಯೇ. ಸ್ವಲ್ಪ ಸಂಕೋಚ ಸ್ವಭಾವದವಳು.
ಜಾಹ್ನವಿ ಕಪೂರ್ ತಮ್ಮ ತಂಗಿಯ ಬಗ್ಗೆ ಮಾತನಾಡಿದ್ದಾರೆ. ಖುಷಿ ಕಪೂರ್ ಮೊದಲ ಸಿನಿಮಾಗೆ (The Archies)ಆಯ್ಕೆ ಆಗುತ್ತಿದ್ದಂತೆ ಆಕೆ ಸಹಜವಾಗಿಯೇ ಟಾಕ್ ಆಫ್ ದಿ ಟೌನ್ ಆಗಿದ್ದಾಳೆ. ಇತ್ತೀಚೆಗೆ 'ಕಾಫೀ ವಿತ್ ಕರಣ್' ಶೋದಲ್ಲಿ ನಿರೂಪಕ ಕರಣ್ ಜೋಹರ್ ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ಅವರನ್ನು ಕರೆಸಿ ಮಾತನಾಡಿಸಿದ್ದಾರೆ. ಈ ವೇಳೆ ಅಕ್ಕ ಜಾಹ್ನವಿ ಕಪೂರ್ ಬಳಿ ತಂಗಿಯ ಪರ್ಫಾಮನ್ಸ್ ಬಗ್ಗೆ ಕೇಳಿದ್ದಾರೆ. ಅದಕ್ಕೆ ಜಾಹ್ನವಿ ಕಪೂರ್ ಉತ್ತರ ಕೊಟ್ಟಿದ್ದಾರೆ.
ಈಗ ಎಲ್ಲರಿಗೂ ಸಹಜವಾಗಿಯೇ ಕುತೂಹಲ ಉಂಟಾಗಿದೆ. ಕಾರಣ, ಅಕ್ಕ ಜಾಹ್ನವಿ ಕಪೂರ್ ಈಗಾಗಲೇ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಷ್ಟರಲ್ಲಿ ತಂಗಿ ಖುಷಿ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ. ಅಕ್ಕ ಬಂದು ಇನ್ನೂ 5 ವರ್ಷಗಳೂ ಕಳೆದಿಲ್ಲ. ಈಗ ತಂಗಿ ಬಂದು ಅಕ್ಕನಿಗೆ ಕಾಂಪಿಟೇಶನ್ ಕೊಡಲು ಸಜ್ಜಾಗಿದ್ದಾಳೆ. ಈ ಸಮಯದಲ್ಲಿ ಸಹಜವಾಗಿಯೇ ಅಕ್ಕನ ಬಳಿ ತಂಗಿಯ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ ಕರಣ್ ಜೋಹರ್. ಅದಕ್ಕೆ ಅಕ್ಕ ಕೊಟ್ಟರ ಉತ್ತರ ಕೇಳಿ ಸ್ವತಃ ಕರಣ್ ಜೋಹರ್ ಅಚ್ಚರಿಗೆ ಒಳಗಾಗಿದ್ದಾರೆ.
ಒರಿ-ಪಾಲಕ್ ಚಾಟ್ ಜಗಳದ ಮಧ್ಯೆ ಸಾರಾ ಖಾನ್ ಬಂದಿದ್ದು ಯಾಕೆ; ತಪ್ಪಿದ್ದಾಗಲೇ ಕ್ಷಮೆ ಕೇಳುವುದು!
ಜಾಹ್ನವಿ ಕಪೂರ್ 'ನಾನು ಆಕೆಯ (Khushi Kapoor)ನಟನೆ ನೋಡಿದೆ. ನನಗೆ ನಿಜವಾಗಿಯೂ ಅಚ್ಚರಿ ಹಾಗೂ ಸಂತೋಷ ಒಟ್ಟಿಗೇ ಆದವು. ಆಕೆ ಸಾಮಾನ್ಯವಾಗಿ ಮಾತನಾಡುವುದು ತುಂಬಾ ಕಡಿಮೆಯೇ. ಸ್ವಲ್ಪ ಸಂಕೋಚ ಹೆಚ್ಚಿರುವ ಸ್ವಭಾವದವಳು ಆಕೆ. ಆದರೆ, ಆಕೆ ಕ್ಯಾಮೆರಾ ಎದುರು ಮಾಡಿರುವ ನಟನೆ ನೋಡಿ ನಾನು ಶಾಕ್‌ಗೆ ಒಳಗಾದೆ. ಶಾಕ್ ಯಾಕೆ ಎಂದರೆ, ಅಷ್ಟು ಸೈಲೆಂಟ್ ಆಗಿ ಇರುವ ಹುಡುಗಿ ಇಷ್ಟೊಂದು ಚೆಂದವಾಗಿ ನಟಿಸಿದ್ದಾಳೆ ಎನ್ನುವುದನ್ನು ಸ್ವತಃ ನಾನೇ ನಂಬಲು ಕಷ್ಟವಾಗಿದೆ. ನಿಜವಾಗಿ ಹೇಳಬೇಕೆಂದರೆ, ತಂಗಿ ನನ್ನ ಅಮ್ಮನಂತೆ ಕ್ಯಾಮೆರಾ ಎದುರು ಸ್ಫೋಟವಾಗುತ್ತಾಳೆ.
ಲೆಜೆಂಡ್ ಈಸ್ ಬ್ಯಾಕ್, ವಿಕ್ಟರಿ ಗ್ಯಾರಂಟಿ; ಸೈಂಧವ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ!
ನನ್ನ ಅಮ್ಮ ಯಾವತ್ತೂ ಹೆಚ್ಚು ಮಾತನಾಡುವವರಲ್ಲ. ಆದರೆ, ಕ್ಯಾಮರಾ ಎದುರು ಇದ್ದಷ್ಟು ಹೊತ್ತು ಆಕೆ ಏನೆಂದು ಇಡೀ ಜಗತ್ತಿಗೇ ಗೊತ್ತು. ಅದೇ ರೀತಿ ನನ್ನ ತಂಗಿ ಕೂಡ. ಮಾತು ಕಡಿಮೆ, ಆದರೆ ಪ್ರತಿಭೆ ಅಗಾಧ. ಅವಳಲ್ಲಿ ಅಮ್ಮನ ಗುಣ ಇನ್‌ಬಿಲ್ಟ್ ಆಗಿದೆ ಎಂಬುದನ್ನು ನಾನು ಕಂಡೆ' ಎಂದಿದ್ದಾರೆ ಜಾಹ್ನವಿ ಕಪೂರ್. ಕಾಪೀ ವಿತ್ ಕರಣ್ ಜೋಹರ್ ಶೋ ದಲ್ಲಿ ಜಾಹ್ನವಿ ಕಪೂರ್ ತಂಗಿಯ ಬಗ್ಗೆ ಆಡಿರುವ ಮಾತುಗಳು ಈಗ ಸಖತ್ ವೈರಲ್ ಆಗತೊಡಗಿವೆ. ಏಕೆಂದರೆ, ಲೆಜೆಂಡ್ ನಟಿ ಶ್ರೀದೇವಿ ಅವರಿಗೆ ಆಕೆಯ ಮಗಳು ಹಾಗೂ ತನ್ನ ತಂಗಿ ಖುಷಿಯನ್ನು ಹೋಲಿಸಿ ಮಾತನಾಡಿದ್ದಾಳೆ ಜಾಹ್ನವಿ ಕಪೂರ್.