ನಿಜವಾಗಿ ನಡೆದ ಮ್ಯಾಟರ್ ಏನು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಏಕೆಂದರೆ, ಒರಿ ಹಾಗು ಪಾಲಕ್ ಇಬ್ಬರಲ್ಲದೇ ಇಲ್ಲಿ ಇನ್ನೊಂದು ಹೆಸರು ಕೂಡ ಓಡಾಡುತ್ತಿದೆ. ಅದು ಬಾಲಿವುಡ್ ನಟಿ ಸಾರಾ ಅಲಿ ಖಾನ್.
ಒರಿ ಮತ್ತು ಪಾಲಕ್ ತಿವಾರಿ ಅವರಿಬ್ಬರೂ ಕಿತ್ತಾಟ ನಡೆಸಿದ್ದಾರೆ. ಇತ್ತೇಚೆಗೆ ಅವರಿಬ್ಬರ ವಾಟ್ಸ್‌ಅಪ್ ಚಾಟ್ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಒರಿ ತಮ್ಮ ಮಿಡ್ಲ್ ಫಿಂಗರ್ ಎತ್ತಿರುವ ಇಮೋಜಿಯನ್ನು ಮೆಸೇಜ್ ನಲ್ಲಿ ಬಳಸಿರುವುದು ಹೊರಜಗತ್ತಿಗೆ ಅನಾವರಣ ಆಗಿ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಒರಿ, 'ನೀವ್ಯಾಕೆ ಎಲ್ಲದರ ಬಗ್ಗೆ ನನ್ನನ್ನು ಮಾತ್ರ ಟಾರ್ಗೆಟ್ ಮಾಡುತ್ತೀರಾ' ಎಂದು ನೆಟ್ಟಿಗರಿಗೆ ನಟ್ ಮೂಲಕವೇ ಪ್ರಶ್ನೆ ಕೇಳಿದ್ದಾರೆ. ಈಗ ಒರಿ ಕೇಳಿರುವ ಪ್ರಶ್ನೆ ಸಖತ್ ವೈರಲ್ ಆಗುತ್ತಿದೆ.
ನಿಜವಾಗಿ ನಡೆದ ಮ್ಯಾಟರ್ ಏನು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಏಕೆಂದರೆ, ಒರಿ ಹಾಗು ಪಾಲಕ್ ಇಬ್ಬರಲ್ಲದೇ ಇಲ್ಲಿ ಇನ್ನೊಂದು ಹೆಸರು ಕೂಡ ಓಡಾಡುತ್ತಿದೆ. ಅದು ಬಾಲಿವುಡ್ ನಟಿ ಸಾರಾ ಅಲಿ ಖಾನ್. ಲೀಕ್ ಆಗಿರುವ ವಾಟ್ಸ್ಅಪ್ ಮೆಸೇಜ್‌ನಲ್ಲಿ ಕೆಲವೇ ಕೆಲವು ಮೆಸೇಜ್‌ಗಳಿದ್ದು, ಅವುಗಳಿಂದ ಸತ್ಯಕಥೆ ರಿವೀಲ್ ಆಗುವುದು ಕಷ್ಟ ಎನ್ನಬಹುದು. ಆದರೆ, 'ನಿನ್ನ ಇಷ್ಟದಂತೆ ನಾನು ಕ್ಷಮೆ ಕೇಳಿದ್ದೇನೆ' ಎಂಬುದು ಒಂದು ಲೈನ್ ಆಗಿದ್ದರೆ, 'ಒರಿ ಮಿಡ್ಲ್ ಫಿಂಗರ್ ಎತ್ತಿರುವ ಇಮೋಜಿ ಹಾಕಿರುವುದು ಇನ್ನೊಂದು. ಬಳಿಕ, 'ನಾನು ಸಾರಾ ಮೇಲೆ ಗೌರವ ಇಲ್ಲದಿರುವ ಕಾರಣಕ್ಕೆ ನಾನು ಈ ಮಾತು ಹೇಳುತ್ತಿರುವೆ'. ಸಾಲು ಕೂಡ ಇದೆ.
ಪ್ರತಾಪ್‌ಗೆ ಪ್ಯಾನಿಕ್ ಪಟ್ಟ ಕಟ್ಟಿದ ಸಂಗೀತಾ-ನಮ್ರತಾ; ಒಪ್ಪಿಕೊಂಡ ಪ್ರತಾಪ್ ರಿಯಾಕ್ಷನ್ ನೋಡಿ!
'ಇಲ್ಲ ಬೇಬಿ, ನನ್ನಿಂದ ತಪ್ಪಾಗಿದೆ. ನೀನು ನಿನ್ನ ಸ್ವಾಭಿಮಾನ ಮೀರಿ ಕ್ಷಮೆ ಕೇಳಿದ್ದೀಯೆ ಎಂಬುದು ನನ್ನ ಅನಿಸಿಕೆ' ಎಂದು ಮೆಸೇಜ್ ಮಾಡಿದ್ದಾರೆ ಒರಿ. 'ನಿನಗೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ' ಎಂದು ಒರಿ ಮೆಸೇಜ್ ಹೋಗಿದೆ. ಆ ಬಳಿಕ ಪಾಲಕ್ ಮಾಡಿರುವ 'ನನ್ನ ಕಡೆಯಿಂದ ನಾನು ಕ್ಷಮೆ ಕೇಳಿದ್ದೇನೆ' ಮೆಸೇಜ್ ಲಾಸ್ಟ್ ಮೆಸೇಜ್ ಆಗಿದೆ. ಆದರೆ, ಈ ಎಲ್ಲ ಮೆಸೇಜ್‌ಗಳಿಂದ ನಿಜವಾಗಿ ನಡೆದ ಘಟನೆ ಏನು? ಯಾರು ಯಾರಿಗೆ ಏನು ಮಾಡಿದ್ದಾರೆ? ಯಾಕೆ ಕ್ಷಮೆ ಕೇಳಿದ್ದಾರೆ, ಇವರಿಬ್ಬರ ಮೆಸೇಜ್ ಮಧ್ಯೆ ಸಾರಾ ಅಲಿ ಖಾನ್ ಬಂದಿದ್ದು ಯಾಕೆ?' ಎಲ್ಲವೂ ಒಂಥರಾ ನಿಗೂಢ ಎನಿಸುತ್ತಿದೆ.
ಮದುವೆಯಾಗದ ಅನುಶ್ರೀ ಮಡಿಲಲ್ಲಿ ಪುಟ್ಟ ಮಗು; ಏನ್ರೀ ಇದೂ ಅಂತಿದಾರೆ ಫ್ಯಾನ್ಸ್!
ಆದರೆ, ಈ ಎಲ್ಲ ಬೆಳವಣಿಗೆ ಮಧ್ಯೆ ಒರಿ 'ಅವಳು ನನ್ನ ಬಳಿ ಕ್ಷಮೆ ಕೇಳಿದ್ದಾಳೆ ಎಂದರೆ ಆಕೆಯಿಂದ ಏನೋ ತಪ್ಪಾಗಿದೆ ಎಂದೇ ಅರ್ಥ ಎಂಬುದನ್ನು ಯಾಕೆ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ? ನನಗೆ ಸುಳ್ಳು ಹೇಳಲು ಬರುವುದಿಲ್ಲ, ಸುಳ್ಳು ಹೇಳುವ ಅಗತ್ಯವೂ ಇಲ್ಲ. ನನ್ನ ಕಡೆಯಿಂದಲೇ ಏನೋ ನಡೆದಿದೆ ಎಂಬಂತೆ ಯಾಕೆ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದೀರಾ? ಆಕೆ ಕಡೆಯಿಂದ ಏನೋ ತಪ್ಪಾಗಿದೆ, ಅದಕ್ಕೆ ಅವಳೇ ಕ್ಷಮೆ ಕೇಳಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಂಡು ಈ ವಿಷಯವನ್ನು ಇಲ್ಲಿಗೇ ಬಿಡುವುದು ಬೆಟರ್' ಎಂದು ಒರಿ ಹೇಳುವ ಮೂಲಕ ಕೊನೆಗೂ ಈ ಘಟನೆಗೆ ಸಂಬಂಧಪಟ್ಟಂತೆ ಒರಿ ಹೇಳಿದ್ದಾನೆ. ಒಟ್ಟನಲ್ಲಿ ಅವರಿಬ್ಬರ ಮಧ್ಯೆ ಏನೋ ಸಂಬಂಧ ಇದೆ ಎಂಬುದೀಗ ಜಗಜ್ಜಾಹೀರಾಗಿದೆ.