ಹಾಗಿದ್ದರೆ ಆಗಿದ್ದೇನು? ನಟಿ ರೇಖಾ ನಾಯಕಿಯಾಗಿದ್ದ ಆ ಚಿತ್ರಕ್ಕೆ ವಿಶ್ವಜಿತ್ ಎನ್ನುವ ಹೊಸಬರು ನಾಯಕರಾಗಿದ್ದರು. ಸ್ಟುಡಿಯೋ ಒಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಡೈರೆಕ್ಟರ್ 'ಆಕ್ಷನ್' ಕೂಡ ಹೇಳದೇ ಇರುವ ಸಮಯದಲ್ಲಿ ನಾಯಕ ವಿಶ್ವಜಿತ್ ಏಕಾಏಕಿ ರೇಖಾ ಬಳಿ ಬಂದು ತುಟಿ ಕಚ್ಚಿ ಚುಂಬಿಸಿಬಿಟ್ಟರು.
ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಹೋಗಿ ಬರೋಬ್ಬರಿ ಹತ್ತು ವರ್ಷಗಳಷ್ಟು ಕಾಲ ಕಷ್ಟಪಟ್ಟು ಬಳಿಕ ಸ್ಟಾರ್ ನಟಿಯಾಗಿ ಮೆರೆದವರು ನಟಿ ರೇಖಾ. ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ ನಟನೆಯ 'ಗೋವಾದಲ್ಲಿ ಸಿಐಡಿ 999' ಸಿನಿಮಾ ಮೂಲಕ ನಾಯಕಿಯಾಗಿ ನಟನೆ ಪ್ರಾರಂಭಿಸಿದ್ದರು ರೇಖಾ. ಅದಕ್ಕೂ ಮೊದಲು ರೇಖಾ ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
1968ರಲ್ಲಿ ಡಾ ರಾಜ್ ಜೋಡಿಯಾಗಿ 'ಸಿಐಡಿ 999'ಚಿತ್ರದಲ್ಲಿ ನಟಿಸಿದಾಗ ರೇಖಾಗೆ 15 ವರ್ಷ, ರಾಜ್‌ಕುಮಾರ್ ಅವರಿಗೆ 45 ವರ್ಷ ವಯಸ್ಸು. ಆಗ ರೇಖಾ ಹೆಸರು ಭಾನುರೇಖಾ ಎಂದಿತ್ತು. ಬಳಿಕ ಬಾಲಿವುಡ್ ಚಿತ್ರರಂಗದ ಕಡೆ ಮುಖ ಮಾಡಿದ ಭಾನುರೇಖಾ, ಅಲ್ಲಿ ರೇಖಾ ಹೆಸರಿನಿಂದ ಗುರುತಿಸಿಕೊಂಡರು. 1968ರಲ್ಲಿ ಹಿಂದಿಯಲ್ಲಿ 'ಸಾವನ್ ಬಾಧೋ' ಚಿತ್ರದ ಮೂಲಕ ನಟಿ ರೇಖಾ ಮಿಂಚಿದರು. ಆದರೆ ಆ ಚಿತ್ರದಲ್ಲಿ ನಟಿಸುವ ಮೊದಲು ನಟಿ ರೇಖಾ, 'ಅಂಜಾನಾ ಸಫರ್' (Anjana Safar,) ಎಂಬ ಇನ್ನೊಂದು ಚಿತ್ರದಲ್ಲಿ ನಟಿಸಿದ್ದರು.
undefined
ಮಳೆಗಾಲದ ನೈಟ್ ಬೆಚ್ಚಗಿರಿಸಲು ಅಡಲ್ಟ್ ಸಿನಿಮಾ ನಟಿ ಸನ್ನಿ ಲಿಯೋನ್ ಮಾದಕ ಫೋಟೋಸ್!
ಆ ಚಿತ್ರದ ಶೂಟಿಂಗ್ ವೇಳೆ ನಟಿ ರೇಖಾಗೆ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ಜರುಗಿತು. ಆ ಕಾಲದಲ್ಕಿ ಇದು ದೊಡ್ಡ ವಿವಾದವಾಗಿ ರೇಖಾಗೆ ಹಾಗೂ ಚಿತ್ರಕ್ಕೆ ತೀವ್ರ ಹಿನ್ನೆಡೆಯನ್ನು ಉಂಟುಮಾಡಿತ್ತು. ಹಾಗಿದ್ದರೆ ಆಗಿದ್ದೇನು? ನಟಿ ರೇಖಾ ನಾಯಕಿಯಾಗಿದ್ದ ಆ ಚಿತ್ರಕ್ಕೆ ವಿಶ್ವಜಿತ್ ಎನ್ನುವ ಹೊಸಬರು ನಾಯಕರಾಗಿದ್ದರು. ಸ್ಟುಡಿಯೋ ಒಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಡೈರೆಕ್ಟರ್ 'ಆಕ್ಷನ್' ಕೂಡ ಹೇಳದೇ ಇರುವ ಸಮಯದಲ್ಲಿ ನಾಯಕ ವಿಶ್ವಜಿತ್ ಏಕಾಏಕಿ ರೇಖಾ ಬಳಿ ಬಂದು ತುಟಿ ಕಚ್ಚಿ ಚುಂಬಿಸಿಬಿಟ್ಟರು.
ಕಾಮಕ್ಕೆ ಕಮಿಟ್‌ಮೆಂಟ್ ಯಾಕೆ ಬೇಕು' ಅಂದ್ಬಿಟ್ರಾ ಕೆಲಸ ಮುಗಿಸ್ಕೊಂಡ ಪವನ್ ಕಲ್ಯಾಣ್!
ಸಡನ್ನಾಗಿ ನಡೆದ ಈ ಘಟನೆಯಿಂದ ರೇಖಾ ವಿಚಲಿತರಾಗಿ ಕೋಪಗೊಂಡರು. 'ಇದೇನಿದು, ನನಗೆ ಒಂದು ಮಾತು ತಿಳಿಸದೇ, ನಿರ್ದೇಶಕರು ಆಕ್ಷನ್ ಕೂಡ ಹೇಳದೇ ಹೀಗೆ ಚುಂಬಿಸಿದ್ದು ಯಾಕೆ' ಎಂದು ನಟಿ ರೇಖಾ ಧೈರ್ಯವಾಗಿಯೇ ಪ್ರಶ್ನಿಸಿದರು. ಅದಕ್ಕೆ 'ಇಲ್ಲ, ಆ ದೃಶ್ಯ ಹಾಗೇ ಬರಬೇಕಿತ್ತು. ಇದ್ದಕ್ಕಿದ್ದಂತೆ ಒಬ್ಬ ಪುರುಷ ಒಂದು ಮಹಿಳೆಯನ್ನು ಚುಂಬಿಸಿದರೆ ಆ ಮಹಿಳೆ ಹೇಗೆ ರಿಯಾಕ್ಟ್ ಮಾಡುತ್ತಾಳೆ ಎಂಬದೇ ಈ ಸೀನ್' ಎಂದು ಚಿತ್ರದ ಡೈರೆಕ್ಷರ್ ಸಮಜಾಯಿಸಿ ಕೊಟ್ಟರು.
ಸಿಎಂ ಸಿದ್ದುಗೆ ಬೈದ ಬೆನ್ನಲ್ಲೇ ಮತ್ತೆ ಹಿಂದುತ್ವವನ್ನು ಬೈದು ಪೋಸ್ಟ್ ಮಾಡಿದ ಚೇತನ್ ಅಹಿಂಸಾ!
ಆದರೆ, ಅದಕ್ಕೆ ನಟಿ ರೇಖಾ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, 'ನಾನೊಬ್ಬಳು ನಟಿ, ದೃಶ್ಯಕ್ಕೆ ಹೇಗೆ ಬೇಕೋ ಹಾಗೆ ನಟಿಸುವುದು ನನಗೆ ಗೊತ್ತು. ನೈಜವಾಗಿ ಬರಬೇಕೆಂದು ಹೀಗೆ ಮಾಡುವುದಾದರೆ ನಾವಿಬ್ಬರೂ ಎಲ್ಲರೂ ನಟರೆಂಬುವುದನ್ನು ಮರೆತೂ ಎಲ್ಲ ಸೀನ್‌ಗಳನ್ನೂ ಹೀಗೆಯೇ ಮಾಡಿಸಿ' ಎಂದು ಕೋಪದಿಂದ ನಟಿ ರೇಖಾ ಹೇಳಿದ್ದರು. ಇದರಿಂದ ಚಿತ್ರದ ಟೀಮ್ ಮಧ್ಯೆ ಸಾಕಷ್ಟು ಮನಸ್ತಾಪವಾಯಿತು.
ಕಾಮ ಕೆರಳಿಸುವ ಸೆಕ್ಸಿ ಹೆಣ್ಣು ಟಬು ಎಂದಿದ್ದ ನಾಗಾರ್ಜುನ ಯಾಕೆ ಮದುವೆಯಾಗ್ಲಿಲ್ಲ?
ಈ ಘಟನೆಯಿಂದ ನಟಿ ರೇಖಾ ಅಕ್ಷರಶಃ ಬೆಚ್ಚಿಬಿದ್ದಿದ್ದರು. ಬಾಲಿವುಡ್ ಚಿತ್ರರಂಗದ ಬಿಹೇವಿಯರ್ ಬಗ್ಗೆ ಗೊತ್ತಿಲ್ಲದ ರೇಖಾ ಬಳಿಕ ಸ್ವಲ್ಪ ಕಾಲ ಹೆದರಿಕೊಂಡೇ ಶೂಟಿಂಗ್‌ಗೆ ಹೋಗುತ್ತಿದ್ದರಂತೆ. ಯಾವಾಗ ಯಾರು ಬಂದು ರೇಪ್ ಮಾಡಿ ಇದೂ ಸೀನ್ ಅಂದುಬಿಡುತ್ತಾರೋ, ಯಾರಿಂದ ಎಷ್ಟು ಬಾರಿ ತುಟಿ ಕಚ್ಚಿಸಿಕೊಳ್ಳಬೇಕೋ ಎಂಬ ಆತಂಕ ಸಾಕಷ್ಟು ಕಾಲ ಕಾಡುತ್ತಲೇ ಇತ್ತಂತೆ. ಆದರೆ, ತುಂಬಾ ಕಾಲ ಹಾಗೆ ನಡೆಯಲಿಲ್ಲ. ಕಾರಣ, ಸ್ವಲ್ಪ ಕಾಲದಲ್ಲೇ ನಟಿ ರೇಖಾ ಸ್ಟಾರ್ ನಟಿಯಾಗಿ ಬಾಲಿವುಡ್ ಚಿತ್ರಗಳಿಗೆ ಅನಿವಾರ್ಯ ಎಂಬಂತಾಗಿಬಿಟ್ಟರು. ಹೀಗಾಗಿ ಬಳಿಕ, ಈ ತರಹದ ಶೋಷಣೆ ನಿಂತುಹೋಯಿತು ಎನ್ನಲಾಗಿದೆ.