Latest Videos

'ಕಾಮಕ್ಕೆ ಕಮಿಟ್‌ಮೆಂಟ್ ಯಾಕೆ ಬೇಕು' ಅಂದ್ಬಿಟ್ರಾ ಕೆಲಸ ಮುಗಿಸ್ಕೊಂಡ ಪವನ್ ಕಲ್ಯಾಣ್!

By Shriram BhatFirst Published May 25, 2024, 5:19 PM IST
Highlights

ಸದ್ಯ ಸಿನಿಮಾರಂಗಕ್ಕಿಂತ ರಾಜಕೀಯರಂಗದಲ್ಲೇ ಹೆಚ್ಚು ಕ್ರಿಯಾಶೀಲವಾಗಿದ್ದಾರೆ ನಟ ಪವನ್ ಕಲ್ಯಾಣ್. ಅಣ್ಣ ಚಿರಂಜೀವಿ ಹಾಗು ತಮ್ಮ ಪವನ್ ಕಲ್ಯಾಣ್ ಇಬ್ಬರೂ ರಾಜಕೀಯ ಚದುರಂಗದಾಟದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ...

ತೆಲುಗು 'ಪವರ್ ಸ್ಟಾರ್' ಖ್ಯಾತಿಯ ನಟ ಪವನ್ ಕಲ್ಯಾಣ್ (Pawan Kalyan) ಮದುವೆಗೆ ತುಂಬಾನೇ ಬೆಲೆ ಕೊಡುತ್ತಿದ್ದರು ಎನ್ನಬೇಕು. ಏಕೆಂದರೆ, ಅವರು ಅದೆಷ್ಟು ಮದುವೆಯಾಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಒಬ್ಬರ ಬಳಿಕ ಇನ್ನೊಬ್ಬರು ಎಂಬಂತೆ ಬಟ್ಟೆ ಬದಲಿಸಿದಂತೆ ಹೆಂಡತಿಯರನ್ನು ಬದಲಾಯಿಸಿದ ನಟ ಪವನ್ ಕಲ್ಯಾಣ್‌, ತಮ್ಮ ಸಿನಿಮಾಗಳ ಸಹನಟಿ ರೇಣು ದೇಸಾಯಿ (Renu Desai) ಅವರನ್ನು ಕೂಡ ಮದುವೆಯಾಗಿ ಡಿವೋರ್ಸ್ ಮಾಡಿದ್ದಾರೆ. ಹಾಗಿದ್ದರೆ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಮದುವೆ ಹಾಗೂ ವಿಚ್ಛೇದನದ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ.. 

ಹೌದು, ನಟ ಪವನ್ ಕಲ್ಯಾಣ್ ಹಾಗು ರೇಣು ದೇಸಾಯಿ ಬದ್ರಿ, ಜಾನಿ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಶೂಟಿಂಗ್ ವೇಳೆ ಈ ಇಬ್ಬರಲ್ಲಿ ಸ್ನೇಹವಾಗಿದೆ. ಬಳಿಕ ಅದು ಪ್ರೇಮಕ್ಕೆ ತಿರುಗಿದೆ. ಪ್ರೇಮ ಮದುವೆಗೂ ದಾರಿ ಮಾಡಿಕೊಟ್ಟಿದೆ. 2009ರಲ್ಲಿನಟ ಪವನ್ ಕಲ್ಯಾಣ್ ಹಾಗೂ ನಟಿ ರೇಣು ದೇಸಾಯಿ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಆದರೆ, ಈ ಮದುವೆ ಹೆಚ್ಚು ಕಾಲ ಬಾಳಲಿಲ್ಲ. ಸ್ನೇಹ ಪ್ರೇಮಕ್ಕೆ, ಪ್ರೇಮ ಮದುವೆಗೆ ದಾರಿ ಮಾಡಿಕೊಟ್ಟಂತೆ, ಮದುವೆ ವಿಚ್ಛೇಧನಕ್ಕೂ ದಾರಿಯಾಗಿದೆ. ಸಂಸಾರದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದ 2012ರಲ್ಲಿ ಈ ಇಬ್ಬರೂ ಡಿವೋರ್ಸ್ ಪಡೆದು ಬೇರೆಯಾಗಿದ್ದಾರೆ. 

ಸಿಎಂ ಸಿದ್ದುಗೆ ಬೈದ ಬೆನ್ನಲ್ಲೇ ಮತ್ತೆ ಹಿಂದುತ್ವವನ್ನು ಬೈದು ಪೋಸ್ಟ್ ಮಾಡಿದ ಚೇತನ್ ಅಹಿಂಸಾ!

ನಟ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಇಬ್ಬರೂ ಈಗ ಬಹಳಷ್ಟು ವರ್ಷಗಳಿಂದ ಬೇರೆಬೇರೆಯಾಗಿಯೇ ಜೀವಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಲು ನಟ ಪವನ್ ಕಲ್ಯಾಣ್ ಬಿಂದಾಸ್ ಎನ್ನಬಹುದಾದ ಉತ್ತರ ನೀಡಿದ್ದಾರೆ. 'ನಿಮ್ಮ ಲವ್ ಸ್ಟೋರಿಗಳೆಲ್ಲವೂ ಯಾಕೆ ಟ್ರಾಜಿಡಿ ಆಗ್ತವೆ' ಎಂಬ ಪ್ರಶ್ನೆಗೆ ನಟ ಪವನ್ ಕಲ್ಯಾಣ್, ಕಾಮವೇ ಪ್ರೇಮಕ್ಕೆ ದಾರಿ, ಕಾಮಕ್ಕೆ ಕಮಿಟ್‌ಮೆಂಟ್ ಕೊಡೋಕೆ ಆಗುತ್ತಾ? ಕಮಿಟ್‌ ಆಗದೇ ಇರೋದಕ್ಕೆ ಕಾಮದ ಹೆಸರಿನ ಪ್ರೇಮ ಸಹಜವಾಗಿಯೇ ಮುರಿದು ಬೀಳುತ್ತೆ' ಎಂದಿದ್ದಾರೆ ಎಂಬ ಗಾಸಿಪ್ ಹರಡಿತ್ತು. 

ಕಾಮ ಕೆರಳಿಸುವ ಸೆಕ್ಸಿ ಹೆಣ್ಣು ಟಬು ಎಂದಿದ್ದ ನಾಗಾರ್ಜುನ ಯಾಕೆ ಮದುವೆಯಾಗ್ಲಿಲ್ಲ?

ಅದೇನೇ ಇರಲಿ, ಸದ್ಯ ಸಿನಿಮಾರಂಗಕ್ಕಿಂತ ರಾಜಕೀಯರಂಗದಲ್ಲೇ ಹೆಚ್ಚು ಕ್ರಿಯಾಶೀಲವಾಗಿದ್ದಾರೆ ನಟ ಪವನ್ ಕಲ್ಯಾಣ್. ಅಣ್ಣ ಚಿರಂಜೀವಿ ಹಾಗು ತಮ್ಮ ಪವನ್ ಕಲ್ಯಾಣ್ ಇಬ್ಬರೂ ರಾಜಕೀಯ ಚದುರಂಗದಾಟದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೆ ಈ ಇಬ್ಬರೂ ಸಿನಿರಂಗವನ್ನು ಸಂಪೂರ್ಣವಾಗಿ ತೊರೆದಿಲ್ಲ. ಮುಂದಿನ ದಿನಗಳಲ್ಲಿ ಇವರಿಬ್ಬರ ಲೈಫ್ ಅದ್ಯಾಯ ರೀತಿಯಲ್ಲಿ ಟರ್ನ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ನಟ ಪವನ್ ಕಲ್ಯಾಣ್ ಲವ್ ಸ್ಟೋರಿ ಒಂದಕ್ಕಿಂತ ಮತ್ತೊಂದು ಭಿನ್ನವಾಗಿದೆ ಎನ್ನಬಹುದು. 

ರೇಖಾ ಹಣೆಯಲ್ಲಿರುವುದು ಅಮಿತಾಭ್ ಹೆಸರಿನ ಕುಂಕುಮ; ಮದುವೆ ಆಗದಿರಲು ಕಾರಣವೇನು?

click me!