
ಬೆಂಗಳೂರು(ಅ. 04) ನೆರವಿಗೆ ಎಂದು ಅಭಿಮಾನಿಗಳು ಮತ್ತು ಜನರು ನೀಡಿದ್ದ ಹಣ(Money) ನನ್ನ ಕೈ ಸೇರಿಲ್ಲ ಎಂದು ನಟಿ ವಿಜಯಲಕ್ಷ್ಮಿ(Vijayalakshmi)ಆರೋಪ ಮಾಡಿದ್ದಸರು. ಸೋಮವಾರ ಹಣ ನೀಡುತ್ತೇನೆ ಎಂದು ಹೇಳಿ ಯೋಗೇಶ್ ಎಂಬುವರು ವಂಚನೆ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದರು
ಜನಸ್ನೇಹಿ ನಿರಾಶ್ರಿತರ ಆಶ್ರಮದ ಯೋಗೇಶ್ ನಟಿ ವಿಜಯಲಕ್ಷ್ಮಿ ಅವರ ತಾಯಿಯ ಅಂತ್ಯಕ್ರಿಯೆ ಮಾಡಿದ್ದರು. ನಟಿ ವಿಜಯಲಕ್ಷ್ಮಿ ತೀವ್ರ ಸಂಕಷ್ಟದಲ್ಲಿದ್ದು ಹಣ ನೀಡುವಂತೆ ಯೋಗೀಶ್ ತಮ್ಮ ಅಕೌಂಟ್ ವಿವಿರ ನೀಡಿದ್ದರು. ಕೇವಲ 3 ದಿನಗಳಲ್ಲಿ 3ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು.
ಬಿಗ್ ಬಾಸ್ ಗೂ ಹೋಗ್ತೆನೆ.. ಸಿನಿಮಾ ಮಾಡ್ತೆನೆ ಎಂದ ನಟಿ
ಫಿಲ್ಮ್ ಚೇಂಬರ್ ನಲ್ಲಿ (Sandalwood) ಶುಕ್ರವಾರ ನಟಿ ವಿಜಯಲಕ್ಷ್ಮಿ ಮತ್ತು ಯೋಗೀಶ್ ನ ಕರೆಸಿ ಹಣ ಹಸ್ತಾಂತರಿಸಲು ಮುಂದಾಗಿದ್ದರು.ಆದರೆ ಯೋಗೀಶ್ ಸೋಮವಾರ ಹಣ ಕೋಡೋದಾಗಿ ಹೇಳಿ ಹೋಗಿದ್ದರು.
ಭಾನುವಾರ ಫೇಸ್ಬುಕ್ ಲೈವ್ (Social Media) ನಲ್ಲಿ ನಟಿ ಹಣ ಕೈಸೇರಿಲ್ಲ ಎಂದು ಆರೋಪ ಮಾಡಿದ್ದರು. ನನ್ನ ತಾಯಿಯ ಸಾವಿನ ವಿಚಾರ ಇಟ್ಟುಕೊಂಡು ಜನರಿಂದ ಹಣ ಸಂಗ್ರಹಿಸಿ ಯಾಮಾರಿಸಿದ್ದೀರಾ? ಜನಸ್ನೇಹಿ ಯೋಗೀಶ್ ನನಗೆ ದ್ರೋಹ ಬಗೆದಿದ್ದಾರೆ. ನನ್ನ ತೇಜೋವಧೆ ಮಾಡ್ತಿದ್ದಾರೆ. ಜನಸ್ನೇಹಿ ಟ್ರಸ್ಟ್ ಯೋಗೀಶ್ ನ ಯಾರು ನಂಬಬೇಡಿ. ಈ ವಿಚಾರವಾಗಿ ನಾನು ಕೋರ್ಟ್ ಗೆ ಹೋಗುತ್ತೇನೆ ಎಂದೆಲ್ಲ ಹೇಳಿದ್ದರು.
ವಿಜಯಲಕ್ಷ್ಮಿ ಹೆಸರಿನಲ್ಲಿ ಕಲೆ ಹಾಕಿರುವ ಹಣ ಕೊಡಲು ಕನ್ನಡಪರ ಸಂಘಟನೆಯ ಸದಸ್ಯರೊಂದಿಗೆ ಯೋಗೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ್ದಾರೆ. ಎಷ್ಟು ಹಣ ಸಂಗ್ರಹವಾಗಿದೆ ಅನ್ನೊದ್ರ ಲೆಕ್ಕ ಕೊಟ್ಟು ಕಾರ್ಯದರ್ಶಿಗಳಿಗೆ ತಲುಪಿಸಲಿದ್ದಾರೆ. ಎನ್ ಎಂ ಸುರೇಶ್, ಭಾ.ಮಾ ಹರೀಶ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್. ಎಂ ಸುರೇಶ್ ಜೊತೆ ಯೋಗೀಶ್ ಮಾತುಕತೆ ನಡೆಸಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್ ಎಂ ಸುರೇಶ್ ಗೆ 3 ಲಕ್ಷ 2 ಸಾವಿರ 900 ರೂಪಾಯಿ ನೀಡಿದ್ದಾರೆ ಆ ಹಣವನ್ನು ನಟಿ ವಿಜಯಲಕ್ಷ್ಮಿ ಅವರಿಗೆ ನೀಡುವುದಾಗಿ ತಿಳಿಸಿದ ಸುರೇಶ್ ತಿಳಿಸಿದ್ದಾರೆ ಇನ್ನು ಮುಂದೆ ವಿಜಯಲಕ್ಷ್ಮೀ ನೆರವಿಗೆ ಹಣವನ್ನು ತಮಗೆ ನೀಡಬಾರದು ಎಂದು ಯೋಗೀಶ್ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.